
ಮಂಡ್ಯ(ಫೆ.03): ತಾಲೂಕಿನ ಉಪ್ಪರಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರು, ಕೆಲ ಸದಸ್ಯರು, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕ ಪಿ. ರವಿಕುಮಾರ್ ಗೌಡರ ನೇತೃತ್ವದಲ್ಲಿ ಉಪ್ಪರಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಾಘಟ್ಟ ಗ್ರಾಮದ ಭಾಗ್ಯಲಕ್ಷ್ಮಿ, ಪೂರ್ಣಿಮಾ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಲುವೇಗೌಡ, ಸದಸ್ಯರಾದ ಜವರೇಗೌಡ, ಪುಟ್ಟಸ್ವಾಮಿ, ಪ್ರಕಾಶ್, ಮಾಜಿ ಸದಸ್ಯರಾದ ವೆಂಕಟಗಿರಿ.
ದೇವೇಗೌಡ, ಕುಮಾರಸ್ವಾಮಿಯವ್ರ ಆರೋಗ್ಯ ಕೆಡಿಸಿದ್ದೇ ಚಲುವರಾಯಸ್ವಾಮಿ: ಮಾಜಿ ಸಚಿವ ಪುಟ್ಟರಾಜು ಕಿಡಿ
ಸೊಸೈಟಿ ನಿರ್ದೇಶಕರಾದ ಮರಿಸ್ವಾಮಿಗೌಡ, ಯಜಮಾನ್ ಮರೀಗೌಡ, ಹಾಗೂ ಮುಖಂಡರಾದ ಕುಮಾರ್, ಸ್ವಾಮಿ, ಕೇಬಲ್ ಬೆಟ್ಟೇಗೌಡ, ನಿಂಗೇಗೌಡ, ನಂಜಪ್ಪ, ಶಂಕರೇಗೌಡ, ತಿಮ್ಮೆಗೌಡ, ವೆಂಕಟರಾಮು, ಕುಮಾರ್, ಕಾಂತರಾಜು, ಗಿರೀಶ್, ಜವರೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.