ಒಂದೂವರೆ ವರ್ಷದಿಂದ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿರುವ ಜೆಡಿಎಸ್ ನಾಯಕ ಮಧು ಬಂಗಾರಪ್ಪ ತಮ್ಮ ಜನ್ಮದಿನದಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ,(ಮಾ.02): ಜೆಡಿಎಸ್‌ನಿಂದ ಒಂದು ಕಾಲು ಆಚೆ ಇಟ್ಟಿರುವ ಮಾಜಿ ಶಾಸಕ ಮಧುಬಂಗಾರಪ್ಪ ಅವರು ಒಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ಹೌದು...ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುವುದಾಗಿ ಜೆಡಿಎಸ್ ಯುವ ಮುಖಂಡ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಫಿನಿಕ್ಸ್‌ನಂತೆ ಅಖಾಡಕ್ಕಿಳಿದ ಮಧು ಬಂಗಾರಪ್ಪ: ಕುತೂಹಲ ಮೂಡಿಸಿದ ನಡೆ..!
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದೆ. ಇವತ್ತು ನನ್ನ ಜನ್ಮದಿನ. ಇಂದಿನಿಂದ ಕೆಲ ಬದಲಾವಣೆಗಳನ್ನು ಮಾಡುವ ನಿರ್ಧಾರ ಮಾಡಿದ್ದೇನೆ. ಬದಲಾವಣೆ ಅನಿವಾರ್ಯವಾಗಿದ್ದು, ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ಕುಮಾರಣ್ಣನ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಬೇಗ ನಿರ್ಧಾರ ಮಾಡೋದು ಕಷ್ಟ. ಆದರೆ, ಪಕ್ಷದ ಕೆಲವು ವಿಚಾರಗಳನ್ನು ಗಮನಿಸಿದಾಗ ಬದಲಾವಣೆ ಅನಿವಾರ್ಯ ಎನ್ನಿಸುತ್ತಿದೆ ಎಂದರು.
JDSಗೆ ಬಿಗ್ ಶಾಕ್.. ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಯುವ ನಾಯಕ.. ಡಿಕೆಶಿ ಭೇಟಿ
ನನಗೆ ಆಂತರಿಕ ಗೊಂದಲ, ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಆದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಂಡ ಬಗ್ಗೆ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಮಧುಬಂಗಾರಪ್ಪ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ.ಇದಕ್ಕೆ ಪೂರಕವೆಂಬಂತೆ ಮಧು ಬಂಗಾರಪ್ಪ ಅವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಜೊತೆ ಮಾತುಕತೆಗಳನ್ನ ಸಹ ಮಾಡಿದ್ದಾರೆ.