ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಸಿಎಂ ಭೇಟಿಯಾಗಿದ್ದ ಕುಮಾರಸ್ವಾಮಿ..!

By Suvarna News  |  First Published Nov 16, 2020, 7:52 PM IST

ಮೊನ್ನೇ ಅಷ್ಟೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಅಸಲಿ ಕಾರಣ ಬಹಿರಂಗವಾಗಿದೆ.


ಮೈಸೂರು, (ನ.16): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿರುವ ಉದ್ದೇಶ ಬಹಿರಂಗವಾಗಿದ್ದು, ಅಧಿಕಾರಿಂದ ಕಾಂಗ್ರೆಸ್‌ ಅನ್ನು ದೂರವಿಡಲು ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ.

ಹೌದು..ನಾಳೆ ಅಂದ್ರೆ ನವೆಂಬರ್ 17 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಜಾತ್ಯಾತೀತ ಜನತಾ ದಳ (ಜೆಡಿಎಸ್) ತನ್ನ ಹಳೆ ಮಿತ್ರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ತಮ್ಮ ಮಿತ್ರತ್ವವನ್ನು ಸ್ಥಾಪಿಸುವ ನಿರೀಕ್ಷೆ ಇದೆ.

Latest Videos

undefined

ಯಡಿಯೂರಪ್ಪ-ಕುಮಾರಸ್ವಾಮಿ ದಿಢೀರ್ ಭೇಟಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ

 ಕಾಂಗ್ರೆಸ್ ಅನ್ನು ಅಧ್ಯಕ್ಷ ಸ್ಥಾನದಿಂದ ದೂರವಿಡಲು ಎರಡೂ ಪಕ್ಷಗಳು ಮತ್ತೆ ಒಂದಾಗಲಿದೆ ಎನ್ನಲಾಗಿದೆ. ಅತೃಪ್ತ, ನ್ಯಾಮಿನಿ ಡೈರೆಕ್ಟರ್ ಹಾಗೂ ಮತದಾನದ ಹಕ್ಕು ಹೊಂದಿರುವ ಇಬ್ಬರು ನಿರ್ದೇಶಕ ಬೆಂಬಲ ಪಡೆದು ಗದ್ದುಗೆ ಹಿಡಿಯುವ ಕಸರತ್ತು  ಜೆಡಿಎಸ್ ನಡೆಸಿದೆ. ಈ ಸಂಬಂಧ ಕುಮಾರಸ್ವಾಮಿ ಅವರು ಯಡಿಯೂರಪ್ಪನವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್ ಲೆಕ್ಕಾಚಾರ
12ಸದಸ್ಯ ಬಲ ಹೊಂದಿರುವ MDCC ಬ್ಯಾಂಕ್ 12ರ ಪೈಕಿ 8ಕಾಂಗ್ರೆಸ್, 4 ಜೆಡಿಎಸ್, ಓರ್ವ ನಾಮನಿರ್ದೇಶಿತ, ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಅಧಿಕಾರಿಗೂ ಮತದಾನದ ಹಕ್ಕು ಇದೆ. ಈ ಮೂರು ಮತಗಳು ಬಹುತೇಕ ಬಿಜೆಪಿ ಸರ್ಕಾರದ ಪರವೇ ಬರಲಿವೆ. ಹಾಗಾಗಿ ಬಿಜೆಪಿ ಸರ್ಕಾರದ ಬೆಂಬಲ ಪಡೆದು ಕೈ ಅತೃಪ್ತ ಸದಸ್ಯನ ಸೆಳೆದು ಅಧಿಕಾರ ಹಿಡಿಯಲು ಜೆಡಿಎಸ್ ಪ್ಲಾನ್ ಮಾಡಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ 17 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಕೊನೆ ಹಂತದಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

click me!