ಪಂಚಮಸಾಲಿ ಬಿಜೆಪಿ ಶಾಸಕರ ಮೀಟಿಂಗ್: ರಹಸ್ಯ ಸಭೆಯ ಅಸಲಿಯತ್ತು ತಿಳಿಸಿದ ಸ್ವಾಮೀಜಿ

Published : Feb 19, 2020, 06:49 PM ISTUpdated : Feb 19, 2020, 06:52 PM IST
ಪಂಚಮಸಾಲಿ ಬಿಜೆಪಿ ಶಾಸಕರ ಮೀಟಿಂಗ್:  ರಹಸ್ಯ ಸಭೆಯ ಅಸಲಿಯತ್ತು ತಿಳಿಸಿದ ಸ್ವಾಮೀಜಿ

ಸಾರಾಂಶ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿಯ ಅನೇಕ ಶಾಸಕರು ಸೋಮವಾರ ರಾತ್ರಿ ಸಭೆ ನಡೆಸಿದ ಬಳಿಕ ಮತ್ತೆ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರ ಸಭೆ ನಡೆಸಲಾಗಿದೆ. ಇದು ಬಿಎಸ್‌ ಯಡಿಯೂರಪ್ಪನವರನ್ನ ತಲ್ಲಣಗೊಳಿಸಿದೆ. ಅಷ್ಟಕ್ಕೂ ಶಾಸಕರ ರಹಸ್ಯ ಸಭೆಯ ಅಸಲ್ಲಿಯತ್ತೇನು..? ಸ್ವಾಮೀಜಿಗಳಿಗೆ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಫೆ.19): ಸಂಪುಟ ವಿಸ್ತರಣೆಯಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ನಿಗೂಢವಾಗಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. 

ಸೋಮವಾರ ಸಚಿವ ಜಗದೀಶ್ ಶೆಟ್ಟರ್‌ ನಿವಾಸದಲ್ಲಿ ಸಚಿವ ಸ್ಥಾನ ವಂಚಿತ ಶಾಸಕರುಗಳು ಸೇರಿದ್ದ ಸಭೆ, ರಾಜ್ಯ ಬಿಜೆಪಿಯಲ್ಲಿ ತಲ್ಲಣಗೊಳಿಸಿತ್ತು. 

ಇದಾದ ಬಳಿಕ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೂಡಲ ಸಂಗಮದ ಪಂಚಮಸಾಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ ನಡೆದ್ದು, ಬಿಎಸ್‌ವೈಗೆ ಒಳಗಿಂದೊಳಗೆ ಉಳಿ ಏಟು ಬೀಳುತ್ತಿವೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. 

ಬಿಜೆಪಿ ಶಾಸಕರ ಗುಂಪು ರಹಸ್ಯ ಸಭೆ, ಪಂಚಮಸಾಲಿ ಸ್ವಾಮೀಜಿ ಭಾಗಿ!

ಮಂಗಳವಾರದ ಸಭೆಯಲ್ಲಿ ಶಾಸಕರಾದ ಮುರುಗೇಶ್‌ ನಿರಾಣಿ, ಬಸನಗೌಡ ಪಾಟೀಲ್‌ ಯತ್ನಾಳ, ಸಿದ್ದು ಸವದಿ, ಮಹೇಶ್‌ ಕುಮಟಳ್ಳಿ, ಶಂಕರಗೌಡ ಪಾಟೀಲ್‌ ಮುನೇನಕೊಪ್ಪ, ಸಿ.ಎಂ.ಲಿಂಬಣ್ಣವರ್‌, ಸಂಸದ ಕರಡಿ ಸಂಗಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್‌ ಲಿಂಬಿಕಾಯಿ ಮತ್ತಿತರರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಅಷ್ಟಕ್ಕೂ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಶಾಸಕರು ಸಭೆ ನಡೆಸಿದ್ಯಾಕೆ? ಎನ್ನುವ ಹಲವು ಪ್ರಶ್ನೆಗಳು ರಾಜ್ಯ ಬಿಜೆಪಿಯಲ್ಲಿ ಕಾಡತೊಡಗಿವೆ. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಮೃತ್ಯುಂಜಯ ಸ್ವಾಮೀಜಿಗಳೇ ಉತ್ತರ ಕೊಟ್ಟಿದ್ದಾರೆ. 

ಪ್ರಮುಖ ಮೂರು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಸ್ವಾಮೀಜಿ  ಸುವರ್ಣ ನ್ಯೂಸ್‌ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. 

ಮೂರು ವಿಚಾರಗಳು
ಪಂಚಮಸಾಲಿ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇಪ೯ಡೆ ವಿಚಾರ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಸಕಾ೯ರದ ಪಂಚಮಸಾಲಿ ಸಮುದಾಯದ ಶಾಸಕರೊಂದಿಗೆ ಸಭೆ ನಡೆಸಿದ್ದೇವೆ.

* ಈ ಸಭೆಯಲ್ಲಿ ಸಿಎಂ ಬಿಎಸ್ವೈ ಮೂಲಕ ಕೇಂದ್ರದ ಮೇಲೆ ಪಂಚಮಸಾಲಿ ಸಮುದಾಯವನ್ನ ಓಬಿಸಿ ಸೇಪ೯ಡೆಗೆ ಒತ್ತಡ ಹಾಕುವುದು.

* ಪದವೀಧರ ವಿದಾನಪರಿಷತ್ ಸ್ಥಾನವನ್ನ ಮುಖ್ಯಮಂತ್ರಿ ಕಾನೂನು ಸಲಹೆಗಾರರಾಗಿತಕ್ಕಂತ ಮೋಹನ ಲಿಂಬಿಕಾಯಿ ಅವರಿಗೆ ನೀಡಬೇಕೆನ್ನುವುದು.

* ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮುದಾಯದ ಶಾಸಕತ್ವಕ್ಕನುಗುಣವಾಗಿ ಸಚಿವ ಸ್ಥಾನ ನೀಡುವಂತಾಗಬೇಕು.

ಈ ಮೂರು ವಿಚಾರಗಳನ್ನು ಚಚೆ೯ ಮಾಡಲಾಗಿದೆ ಎಂದು ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು. ಸಮುದಾಯದ ಎಲ್ಲ ಶಾಸಕರು ಒಕ್ಕೊರಲಿನಿಂದ ನೇತೃತ್ವ ವಹಿಸಿಕೊಂಡು ಸಿಎಂ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಲು ತಿಳಿಸಿದ್ದಾರೆ.

ಅವರ ಇಚ್ಛೆಯಂತೆ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇಪ೯ಡೆ ಮಾಡುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಒಟ್ಟಿನಲ್ಲಿ ಈ ಮೂರು ವಿಚಾರಗಳು  ಬಿಎಸ್‌ವೈಗೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!