ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜಗದೀಶ್ ಶೆಟ್ಟರ್

Published : Oct 20, 2025, 01:18 PM IST
Jagadish Shettar

ಸಾರಾಂಶ

ಸಿಎಂ ಸಿದ್ದರಾಮಯ್ಯ ಖರ್ಗೆ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ. ಇದು ಕಾಂಗ್ರೆಸ್ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.

ಹುಬ್ಬಳ್ಳಿ (ಅ.20): ಆರ್‌ಎಸ್‌ಎಸ್‌ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ. ಇದು ಕಾಂಗ್ರೆಸ್ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು. ನಂತರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಖರ್ಗೆ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಸಿದ್ದರಾಮಯ್ಯ ಅಂಡ್ ಕಂಪನಿ ಹಿಂದೂ ಸಮಾಜವನ್ನ ಒಡೆಯುವ ಕೆಲಸ ಮಾಡ್ತಾ ಇದೆ ಇತ್ತೀಚಿಗೆ ಸಿದ್ದರಾಮಯ್ಯ ಆಡಳಿತದಲ್ಲಿ ಬಿಗಿ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ, ಆರ್ಥಿಕತೆ ಕುಸಿದಿದೆ , ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರ ಆರೋಪಕ್ಕೆ ಕೋರ್ಟ್‌ಗೆ ಹೋಗಲಿ ಅಂತಾರೆ ಸಿದ್ದರಾಮಯ್ಯ.

ಖರ್ಗೆ ತಮ್ಮ ಇಲಾಖೆ ಬಗ್ಗೆ ಕಾಳಜಿ ವಹಿಸೋದನ್ನ ಬಿಟ್ಟು ಆರ್‌ಎಸ್‌ಎಸ್‌ ಬಗ್ಗೆ ಮಾತಾಡ್ತಾರೆ ಇವರಿಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋಕೆ ನೈತಿಕತೆ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ನಿಷೇದದ ಬಗ್ಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಏನು ಕ್ರಮ ಕೈಗೊಂಡಿದ್ದಾರೆ..? ಜಗದೀಶ್ ಶೆಟ್ಟರ್ ಸಿಎಂ ಇದ್ದಾಗ ಮಾಡಿದ ಆದೇಶ ಮುಂದುವರೆಸಿದ್ದೇವೆ ಅಂದಿದ್ದಾರೆ. ಶಿಕ್ಷಣ ಇಲಾಖೆಗೆ ಸ್ಪಷ್ಟಿಕರಣ ಕೊಟ್ಟ ಪತ್ರ ಅದು. ಶೈಕ್ಷಣಿಕ ಚಟುವಟಿಕೆ ಬಿಟ್ಟು ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬಗ್ಗೆ ಪತ್ರ. ಆದೇಶ ಪ್ರತಿ ಓದಿದ ಜಗದೀಶ್ ಶೆಟ್ಟರ್. ಇದು ಬ್ಯಾನ್ ಅಲ್ಲಾ, ಸೂಚನೆ ನೀಡಿದ್ದು ಎಂದು ಹೇಳಿದರು.

ಆರ್‌ಎಸ್‌ಎಸ್‌ ನಿಷೇದದ ಬಗ್ಗೆ ಏನಾದರೂ ಇದೆಯಾ? ಇವರು ಮೂರ್ಖರಿದ್ದಾರೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡ್ತಾ ಇದ್ದಾರೆ. ಸುಮ್ಮನೆ ಅಪಪ್ರಚಾರ ಮಾಡೋದು.ಆವಾಗಿನ ನಿರ್ಧಾರ ಕ್ಯಾಬಿನೆಟ್ ನಿರ್ಧಾರ ಅಲ್ಲ. 2013 ರಲ್ಲಿ ಎಲ್ಲೂ ಉಲ್ಲೇಖ ಬರಲಿಲ್ಲ. ಈಗ ಏಕಾಏಕಿ ನೆನಪಾಗಿದೆ. ನಿಮ್ಮ ತಪ್ಪುಗಳನ್ನ ಮುಚ್ಚಲು ಹೀಗೆ ಮಾಡ್ತಾ ಇದ್ದಾರೆ. ಎರಡನೇ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಸುತ್ತೋಲೆ ಹೊರಡಿಸಿದ್ದೀರಾ? ಆರ್ಡರ್ ಮಾಡದೆಯೇ ಲಿಂಗಸೂರನಲ್ಲಿ ಪಿಡಿಒ ಸಸ್ಪೆಂಡ್ ಮಾಡಿದ್ದಾರೆ. ಕಾನೂನು ಬಗ್ಗೆ ಸಿದ್ದರಾಮಯ್ಯ ಅವರಿಗೆ ಜ್ಞಾನವೇ ಇಲ್ಲ.

ಧೈರ್ಯ ಇದ್ರೆ ಆರ್‌ಎಸ್‌ಎಸ್‌ ಹೆಸರು ಹಾಕಿ

ಕೇಂದ್ರ ಸರ್ಕಾರದ ಆದೇಶದ ಬಗ್ಗೆ ನಿಮಗೆ ಅರಿವಿದೆಯಾ? ಇಲ್ಲವಾ? ಕೇಂದ್ರ ಸರಕಾರ 2024ರಲ್ಲಿ ಆರ್‌ಎಸ್‌ಎಸ್‌ ನಲ್ಲಿ ಭಾಗಿಯಾಗಬಾರದು ಎಂಬುದನ್ನ ನಿಷೇದವನ್ನ ಹಿಂಪಡೆದಿದ್ದಾರೆ. ದೇಶ ಪ್ರೇಮಿ ಸಂಘಟನೆಯನ್ನ ಅವಹೇಳನ ಮಾಡ್ತಾ ಇರೋದನ್ನ ನಿಲ್ಲಿಸಿ. ನಿಮಗೆ ಧೈರ್ಯ ಇದ್ರೆ ಆರ್‌ಎಸ್‌ಎಸ್‌ ಹೆಸರು ಹಾಕಿ. ಸಂಘ ಈಗ ಪ್ರಪಂಚದಲ್ಲೇ ಬೆಳಿತಾ ಇದೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದಾಗ ನಾವು ಮಾತನಾಡ್ತೇವೆ.ನಾನು ಕೂಡ ಸಂಘ ಪರಿವಾರದಿಂದ ಬಂದವನು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು - Jaya Bachchan ಬಾಯ್ಕಾಟ್‌ ಆಗ್ತಾರಾ?