ಮಡಿಕೇರಿ ನಗರಸಭೆ ಅಭಿವೃದ್ಧಿ ಹಿಂದೆ ಬೀಳಲು ರಾಜಕೀಯ ಜಿದ್ದಾಜಿದ್ದಿ ಕಾರಣವಾಯ್ತಾ?

By Govindaraj S  |  First Published Nov 25, 2023, 10:43 PM IST

ಚುನಾವಣೆ ಅಂದ್ಮೇಲೆ ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷ ಆರೋಪ, ಪ್ರತ್ಯಾರೋಪ ಮಾಡುವುದು ಇದ್ದಿದ್ದೇ ಬಿಡಿ. ಚುನಾವಣೆ ಮುಗಿದ ಬಳಿಕ ಪಕ್ಷಭೇದ ಮರೆತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಅಲ್ವಾ. 


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.25): ಚುನಾವಣೆ ಅಂದ್ಮೇಲೆ ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷ ಆರೋಪ, ಪ್ರತ್ಯಾರೋಪ ಮಾಡುವುದು ಇದ್ದಿದ್ದೇ ಬಿಡಿ. ಚುನಾವಣೆ ಮುಗಿದ ಬಳಿಕ ಪಕ್ಷಭೇದ ಮರೆತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಅಲ್ವಾ. ಆದರೆ ಮಡಿಕೇರಿ ನಗರಸಭೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಮುಂದುವರೆದಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮಡಿಕೇರಿ ಎಂದ ಕೂಡಲೇ ಮಂಜಿನ ನಗರಿ ದಕ್ಷಿಣದ ಕಾಶ್ಮೀರ ಎಂದೆಲ್ಲಾ ಪ್ರಸಿದ್ಧಿ. ಆದರೆ ಮಡಿಕೇರಿಗೆ ಬಂದಾಗಲೇ ನಿಜವಾಗಿಯೂ ಅಭಿವೃದ್ಧಿಯಿಂದ ಎಷ್ಟೊಂದು ಹಿಂದುಳಿದಿದೆ ಎನ್ನುವುದು ಗೊತ್ತಾಗುತ್ತದೆ. ಹೀಗೆ ಹಿಂದೆ ಉಳಿಯುವುದಕ್ಕೆ ರಾಜಕೀಯ ತಿಕ್ಕಾಟವೇ ಕಾರಣವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. 

Tap to resize

Latest Videos

undefined

ಹೌದು ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭ ಎರಡುವರೆ ವರ್ಷಗಳ ಹಿಂದೆಯೇ ಮಡಿಕೇರಿ ನಗರಸಭೆಗೆ ನಗರೋತ್ಥಾನದ ಅಡಿಯಲ್ಲಿ 40 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆ ಅನುದಾನದಲ್ಲಿ ಮಡಿಕೇರಿನಗರದ ರಸ್ತೆ, ಕಾವೇರಿ ಕಲಾಕ್ಷೇತ್ರದ ನೂತನ ಭವನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಅಷ್ಟೊತ್ತಿಗೆ ಕೊಡಗಿನಲ್ಲಿ ಮಳೆಗಾಲ ಶುರುವಾಗಿದ್ದು ಒಂದೆಡೆಯಾದರೆ ಚುನಾವಣೆ ನಡೆದು ಹೊಸ ಶಾಸಕರು ಆಯ್ಕೆಯಾಗಿ ಬಂದಿದ್ದು ಮತ್ತೊಂದೆಡೆ. ಹೀಗಾಗಿ ಹೊಸ ಸರ್ಕಾರ ಬರುತ್ತಿದ್ದಂತೆ ಹಳೆ ಕಾಮಗಾರಿಗಳಿಗೆ ತಡೆ ನೀಡಿತ್ತು. ಆದರೆ ಇಂದಿಗೂ ಆ ತಡೆಯನ್ನು ತೆರವು ಮಾಡಿಲ್ಲ. ಪರಿಣಾಮ ಎಲ್ಲಾ ಕಾಮಗಾರಿಗಳು ಬಾಕಿ ಉಳಿದಿವೆ. 

ಅಂಬರೀಶ್ ಗುರಿ, ಉದ್ದೇಶಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ: ಸುಮಲತಾ

ಇದು ಮಡಿಕೇರಿಯ ಜನತೆ ಪರಿತಪಿಸುವಂತೆ ಮಾಡಿದೆ. ಇವಿಷ್ಟೇ ಅಲ್ಲ ನಗರಸಭೆಯಲ್ಲಿ ಬರೋಬ್ಬರಿ 160 ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ನಗರೋತ್ಥಾನ ಅಡಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಅನುಮೋದನೆಗೆ ಅವಕಾಶ ಕೊಡಿಸುವಂತೆ ಹಲವು ಬಾರಿ ಶಾಸಕರ ಗಮನಕ್ಕೆ ತಂದಿದ್ದೇನೆ. ಸಿಎಂ ಅವರ ಬಳಿಗೆ ನಿಯೋಗ ಕರೆದೊಯ್ಯುವಂತೆ ಶಾಸಕರಿಗೆ ಮನವಿ ಮಾಡಿದ್ದೇವೆ. ಆದರೂ ಅವರು ಯಾವುದೇ ರೀತಿ ಗಮನ ಹರಿಸುತ್ತಿಲ್ಲ. ಕಾಮಗಾರಿಗಳಿಗೆ ಅನುಮೋದನೆ ನೀಡುವುದಕ್ಕಾಗಿ ಚರ್ಚಿಸಲು ಸಭೆ ಕರೆಯುವಂತೆ ಎರಡು ತಿಂಗಳ ಹಿಂದೆಯೇ ಉಸ್ತುವಾರಿ ಸಚಿವರು ಶಾಸಕರಿಗೆ ಸೂಚಿಸಿದ್ದರೂ ಶಾಸಕರು ಗಮನಹರಿಸುತ್ತಿಲ್ಲ ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಹೀಗೆ ಯಾವುದೇ ಕಾಮಗಾರಿಗಳು ಆಗದೆ ಬಾಕಿ ಉಳಿದಿರುವುದರಿಂದ ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿಂದ ನಗರಸಭೆಯಲ್ಲೂ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಇದು ನಗರಸಭೆಯ ವಿರೋಧ ಪಕ್ಷ ನಗರಸಭೆ ಆಡಳಿತದ ವಿರುದ್ಧ ತಿರುಗಿ ಬೀಳುವುದಕ್ಕೆ ಕಾರಣವಾಗಿದೆ. ಮಡಿಕೇರಿ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕಳೆದ ಎರಡು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಇದರಿಂದ ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಎರಡುವರೆ ವರ್ಷಗಳಿಂದ ಯಾವುದೇ ವಿಶೇಷ ಅನುದಾನವನ್ನು ಇವರು ನಗರಸಭೆಗೆ ತರಲು ಆಗಿಲ್ಲ. 

ಲೋಕಸಭೆ ಚುನಾವಣೆ: ಮತ್ತೆ ಪುತ್ರನ ಪರ ಬ್ಯಾಟ್ ಬೀಸಿದ ಸಚಿವ ಮಹದೇವಪ್ಪ

ಬದಲಾಗಿ ಬಂದಿರುವ ಅನುದಾನದಲ್ಲಿ ಆಡಳಿತ ಪಕ್ಷದ ಸದಸ್ಯರೇ ವಿವಿಧ ಕಾಮಗಾರಿಗಳನ್ನು ಮಾಡಿ ತಮ್ಮ ಖಾತೆಗಳಿಗೆ ಹಣ ಹಾಕಿಕೊಳ್ಳುತ್ತಿದ್ದಾರೆ. ಹೀಗಾಗಿ ನಗರಸಭೆಯನ್ನು ಕಾನೂನು ಬದ್ಧವಾಗಿಯೇ ಸೂಪರ್ ಸೀಡ್ ಮಾಡುವಂತೆ ವಿರೋಧ ಪಕ್ಷದ ಮುಖಂಡ ಅಮಿನ್ ಮೊಹಿನ್ಸಿನ್ ಅವರು ಒತ್ತಾಯಿಸುತ್ತಿದ್ದಾರೆ.  ಒಟ್ಟಿನಲ್ಲಿ ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಬಿಜೆಪಿ ಮುಖಂಡರ ನಡುವಿನ ಜಿದ್ದಾಜಿದ್ದಿಯೋ ಏನೋ ಮಡಿಕೇರಿ ನಗರಸಭೆಯ ಅಭಿವೃದ್ಧಿಗೆ ಗರಬಡಿದಿರುವುದಂತು ಸತ್ಯ. ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಮಡಿಕೇರಿ ನಗರಸಭೆ ವಿರೋಧ ಪಕ್ಷ ಎಸ್ಡಿಪಿಐ ಆಕ್ರೋಶ ವ್ಯಕ್ತಪಡಿಸುತ್ತಿದೆ. 

click me!