ಡಿ.ಕೆ. ಸುರೇಶ್‌ ದೇಶ ವಿಭಜನೆ ಹೇಳಿಕೆ ಸರಿಯೇ?: ಪ್ರಧಾನಿ ಮೋದಿ

By Kannadaprabha NewsFirst Published Apr 28, 2024, 6:19 AM IST
Highlights

ಸಂವಿಧಾನವನ್ನು ಬದಲಿಸಲು ಹಾಗೂ ಮೀಸಲು ಕಸಿಯಲು ಕಾಂಗ್ರೆಸ್‌ ಯತ್ನ ನಡೆಸುತ್ತಿದೆ. ಇದಕ್ಕೆ ತಾವು ಅವಕಾಶ ನೀಡಲ್ಲ’ ಎಂದರು. ಅಲ್ಲದೆ, ಇವಿಎಂ ಪ್ರಶ್ನಿಸಿದ್ದ ಕಾಂಗ್ರೆಸ್ ಬಣ್ಣವನ್ನು ಸುಪ್ರೀಂ ಕೋರ್ಟ್‌ ಬಯಲು ಮಾಡಿದೆ ಎಂದೂ ಹೇಳಿದ ಪ್ರಧಾನಿ ನರೇಂದ್ರ ಮೋದಿ 

ವಾಸ್ಕೋ(ಏ.28): ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಸಂಸದರೊಬ್ಬರು ದೇಶ ವಿಭಜನೆ ಬಗ್ಗೆ ಹೇಳಿಕೆ ನೀಡಿದ್ದರು ಇದು ಸರಿಯೇ? ದೇಶದ ಸಂವಿಧಾನವು ಗೋವಾಗೆ ಬೇಕಿರಲಿಲ್ಲ ಎಂದು ಗೋವಾದ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ

ಇದು ಸರಿಯೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು. ಈ ಮೂಲಕ ಈ ಹೇಳಿಕೆಗಳನ್ನು ನೀಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಹಾಗೂ ಗೋವಾ ಕಾಂಗ್ರೆಸ್‌ ಅಭ್ಯರ್ಥಿ ಫರ್ನಾಂಡಿಸ್‌ ಅವರನ್ನು ಪ್ರಶ್ನಿಸಿದರು.
ವಾಸ್ಕೋದಲ್ಲಿ ಶನಿವಾರ ರಾತ್ರಿ ಪ್ರಚಾರ ಭಾಷಣ ಮಾಡಿದ ಅವರು, ‘ಸಂವಿಧಾನವನ್ನು ಬದಲಿಸಲು ಹಾಗೂ ಮೀಸಲು ಕಸಿಯಲು ಕಾಂಗ್ರೆಸ್‌ ಯತ್ನ ನಡೆಸುತ್ತಿದೆ. ಇದಕ್ಕೆ ತಾವು ಅವಕಾಶ ನೀಡಲ್ಲ’ ಎಂದರು. ಅಲ್ಲದೆ, ಇವಿಎಂ ಪ್ರಶ್ನಿಸಿದ್ದ ಕಾಂಗ್ರೆಸ್ ಬಣ್ಣವನ್ನು ಸುಪ್ರೀಂ ಕೋರ್ಟ್‌ ಬಯಲು ಮಾಡಿದೆ ಎಂದೂ ಹೇಳಿದರು.

ಜನಸಂಖ್ಯೆಗೆ ತಕ್ಕುದಾಗಿ ಮೋದಿ ಮೀಸಲು ನೀಡಲಿ: ಸಿಎಂ ಸಿದ್ದರಾಮಯ್ಯ ಸವಾಲು

ಇನ್ನು ದೇಶದಲ್ಲಿ ಒಲಿಂಪಿಕ್ಸ್‌ ನಡೆಸಲು ತಮ್ಮ ಸರ್ಕಾರ ಯತ್ನಿಸಲಿದೆ. ಈ ಮೂಲಕ ಫುಟ್ಬಾಲ್‌ ತವರು ಗೋವನ್ನರ ಆಸೆ ನೆರವೇರಲಿದೆ ಎಂದೂ ಹೇಳಿದರು.

click me!