ಆಗಸ್ಟ್‌ ತಿಂಗಳಿಂದ ಇಂದಿರಾ ಕ್ಯಾಂಟೀನ್‌ ಆರಂಭ: ಶಾಸಕ ಜೆ.ಟಿ.ಪಾಟೀಲ್ ಭರವಸೆ

Published : Jul 02, 2023, 06:03 AM IST
ಆಗಸ್ಟ್‌ ತಿಂಗಳಿಂದ ಇಂದಿರಾ ಕ್ಯಾಂಟೀನ್‌ ಆರಂಭ: ಶಾಸಕ ಜೆ.ಟಿ.ಪಾಟೀಲ್ ಭರವಸೆ

ಸಾರಾಂಶ

ಪಟ್ಟಣದಲ್ಲಿ ಆಗಸ್ಟ್‌ ತಿಂಗಳಿಂದ ಇಂದಿರಾ ಕ್ಯಾಂಟೀನ್‌ ಪ್ರಾರಂಭವಾಗಲಿದೆ ಎಂದು ಶಾಸಕ ಜೆ.ಟಿ.ಪಾಟೀಲ್‌ ಹೇಳಿದರು. ಪಟ್ಟಣದಲ್ಲಿರುವ ಶಾಸಕರ ಖಾಸಗಿ ಬ್ಯಾಂಕ್‌ನಲ್ಲಿ ಶನಿವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹು ವರ್ಷಗಳಿಂದ ಸಾರ್ವಜನಿಕರ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್‌ ಅನ್ನು ಮತ್ತೆ ತೆರೆಯಲು ಆಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ಬೀಳಗಿ (ಜು.2) :  ಪಟ್ಟಣದಲ್ಲಿ ಆಗಸ್ಟ್‌ ತಿಂಗಳಿಂದ ಇಂದಿರಾ ಕ್ಯಾಂಟೀನ್‌ ಪ್ರಾರಂಭವಾಗಲಿದೆ ಎಂದು ಶಾಸಕ ಜೆ.ಟಿ.ಪಾಟೀಲ್‌ ಹೇಳಿದರು. ಪಟ್ಟಣದಲ್ಲಿರುವ ಶಾಸಕರ ಖಾಸಗಿ ಬ್ಯಾಂಕ್‌ನಲ್ಲಿ ಶನಿವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹು ವರ್ಷಗಳಿಂದ ಸಾರ್ವಜನಿಕರ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್‌ ಅನ್ನು ಮತ್ತೆ ತೆರೆಯಲು ಆಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗೆ ಬಹು ಬೇಡಿಕೆ ಇದ್ದು, ಈ ಬಾರಿ ಅಲ್ಪ ಮೊತ್ತದಲ್ಲಿ ಟಿಫಿನ್‌, ಊಟ, ಚಹಾ ಸೇರಿದಂತೆ ಮೂರೂ ಹೊತ್ತು ಗುಣಮಟ್ಟದ ಆಹಾರ ಒದಗಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

'ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿ'

ಎರಡು ದಿನಕ್ಕೊಮ್ಮೆ ನೀರು:

ಪಟ್ಟಣದ ನಿವಾಸಿಗಳಿಗೆ ಈಗಾಗಲೇ ನಾಲ್ಕು ದಿನಕೊಮ್ಮೆ ಬರುತ್ತಿರುವ ಕುಡಿಯುವ ನೀರು ಇನ್ನು ಮುಂದೆ ಎರಡು ದಿನಕ್ಕೊಮ್ಮೆ ಪೂರೈಕೆ ಮಾಡಲಾಗುವುದು. ಪಟ್ಟಣ ಪಂಚಾಯತಿಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಬೇಕಾಗುವಷ್ಟುಹಣವಿದ್ದು ಅದರ ಬಳಕೆ ಮಾಡಿಕೊಂಡು ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಜೆ.ಟಿ.ಪಾಟೀಲ್‌ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಆಶ್ರಯ ಕಾಲೋನಿ ವಸತಿ ಯೋಜನೆ ಮನೆಗಳ ಕುರಿತು ಬೆಂಗಳೂರಿನಲ್ಲಿ ಎರಡು ಬಾರಿ ಸಭೆ ಮಾಡಿದ್ದು, ಶೀಘ್ರವೇ ಟೆಂಡರ್‌ ಕರೆದು ಉತ್ತಮ ಗುತ್ತಿಗೆದಾರರಿಗೆ ವಹಿಸಿ ನೀರು, ಬೆಳಕು, ಚರಂಡಿ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಫಲಾನುಭವಿಗಳಿಗೆ ಶೀಘ್ರವಾಗಿ ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಹಣಮಂತ ಕಾಖಂಡಕಿ, ಹಿರಿಯರಾದ ರಾಮನಗೌಡ ಜಕ್ಕನಗೌಡರ್‌, ಈರಯ್ಯ ಗೋಠೆ, ಸಂಗಪ್ಪ ಕದಂಗಲ್‌, ಅಜ್ಜು ಭಾಯಿ ಸರ್ಕಾರ, ಸಿದ್ದು ಸಾರಾವರಿ, ಅಶೋಕ ಜೋಶಿ, ಬಿ.ಪಿ.ಪಾಟೀಲ, ಮಹಾದೇವ ಬೋರ್ಜಿ, ಶಿವಪ್ಪ ಗಾಳಿ, ಸಿದ್ದು ಮೇಟಿ ಸೇರಿದಂತೆ ಇತರರು ಇದ್ದರು.

ಇಂದಿರಾ ಕ್ಯಾಂಟಿನ್ ಗೆ ದಿಢೀರ್ ಭೇಟಿ ನೀಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಸ್ವಚ್ಚತೆ ಕಾಪಾಡಲು ಸೂಚನೆ

ಹೆಚ್ಚುವರಿ ಬಸ್‌ ಸೌಲಭ್ಯ

ಬೀಳಗಿ ಮತಕ್ಷೇತ್ರದಲ್ಲಿ ಬರುವ ಬಾಗಲಕೋಟೆ, ಬದಾಮಿ, ಬೀಳಗಿ ತಾಲೂಕಿನ ಸಾರ್ವಜನಿಕರ ಸಾರಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿನ್ನೆ ದಿನ ಬಾಗಲಕೋಟೆ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಉನ್ನತ ಅ​ಧಿಕಾರಿಗಳ ಸಭೆ ಕರೆದು ಹೆಚ್ಚುವರಿ ಬಸ್‌ ಸೌಲಭ್ಯ ಹಾಗೂ ಹುಬ್ಬಳ್ಳಿ ವಿಜಯಪುರ ಬಸ್‌ಗಳು ಬೀಳಗಿ ಪಟ್ಟಣದಲ್ಲಿ ಬಂದು ಹೋಗುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಬಸ್‌ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಶಾಸಕ ಜೆ.ಟಿ.ಪಾಟೀಲ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್