ನಾಯಕರು ನನ್ನ ಕೈ ಬಿಡೋಲ್ಲ ಎನ್ನುವ ವಿಶ್ವಾಸ ಇದೆ : ಡಿ.ಕೆ.ಶಿವಕುಮಾರ್

Kannadaprabha News   | Kannada Prabha
Published : Jan 23, 2026, 04:44 AM IST
DK Shivakumar

ಸಾರಾಂಶ

‘ನಾನು ಯಾವತ್ತೂ ಆಶಾವಾದಿ. ಭರವಸೆಯ ಮೇಲೆ ಬದುಕುತ್ತೇನೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ನನ್ನ ನಾಯಕರು ನನ್ನನ್ನು ಕೈಬಿಡಲಿಕ್ಕಿಲ್ಲ ಎನ್ನುವ ವಿಶ್ವಾಸ ಇದೆ’ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದಾವೋಸ್‌: ‘ನಾನು ಯಾವತ್ತೂ ಆಶಾವಾದಿ. ಭರವಸೆಯ ಮೇಲೆ ಬದುಕುತ್ತೇನೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ನನ್ನ ನಾಯಕರು ನನ್ನನ್ನು ಕೈಬಿಡಲಿಕ್ಕಿಲ್ಲ ಎನ್ನುವ ವಿಶ್ವಾಸ ಇದೆ’ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದಾವೋಸ್‌ನಲ್ಲಿ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡಿರುವ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುರಿತ ಪ್ರಶ್ನೆಗೆ ಎನ್‌ಡಿಟೀವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾಯಕತ್ವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಇದು ಮಾಧ್ಯಮದ ಮುಂದೆ ಚರ್ಚಿಸುವ ವಿಚಾರ ಅಲ್ಲ. ಬದಲಾಗಿ ತೆರೆಮರೆಯಲ್ಲಿ ನಡೆಸಬೇಕಿರುವ ಚರ್ಚೆ. ನಾನು ಯಾವತ್ತೂ ಧನಾತ್ಮಕವಾಗಿದ್ದೇನೆ. ನಾನು ಯಾವತ್ತೂ ಆಶಾವಾದಿ. ಕಠಿಣ ಪರಿಶ್ರಮ ಯಾವತ್ತೂ ಮೋಸ ಮಾಡುವುದಿಲ್ಲ, ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ನಂಬಿದವನು. ನನ್ನ ಪ್ರಕಾರ ನನ್ನ ನಾಯಕರು ನನ್ನ ಕೈಬಿಡುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ಭರವಸೆ ಮೇಲೆ ಬದುಕುತ್ತೇನೆ- ಡಿಕೆಶಿ:

ಈ ನಡುವೆ, ದಾವೋಸ್‌ನಲ್ಲಿ ‘ಇಂಡಿಯಾ ಟುಡೇ’ ವಾಹಿನಿಗೂ ನೀಡಿದ ಸಂದರ್ಶನದಲ್ಲಿ, ‘ಮುಂದಿನ ಬಾರಿ ದಾವೋಸ್‌ಗೆ ಸಿಎಂ ಆಗಿ ಬರುತ್ತೀರೋ ಅಥವಾ ಡಿಸಿಎಂ ಆಗಿ ಬರುತ್ತೀರೋ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಮುಖ್ಯಮಂತ್ರಿ ಸ್ಥಾನದತ್ತ ನೋಡುತ್ತಿಲ್ಲ. ನನ್ನ ಪ್ರಕಾರ ಇದು ಮಾಧ್ಯಮಗಳಲ್ಲಿ ಚರ್ಚೆ ಮಾಡುವ ವಿಷಯವಲ್ಲ. ಇದು ಪಕ್ಷದೊಳಗಿನ, ನಮ್ಮ ನಡುವಿನ ತಿಳಿವಳಿಕೆ. ನಾನು, ಸಿದ್ದರಾಮಯ್ಯ ಹಾಗೂ ನಮ್ಮ ನಾಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನು ಭರವಸೆಯ ಮೇಲೆ ಬದುಕುತ್ತೇನೆ. ನಮ್ಮ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ’ ಎಂದರು.

ನನಗೂ 140 ಶಾಸಕರ ಬೆಂಬಲ ಇದೆ:

ಇದೇ ವೇಳೆ, ಎನ್‌ಡಿಟೀವಿ ಸಂದರ್ಶನದಲ್ಲಿ ‘ನಿಮಗೆ ಶಾಸಕರ ಬೆಂಬಲದ ಕೊರತೆ ಇದೆಯಲ್ವಾ?’ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಹೀಗಂತ ಯಾರು ಹೇಳಿದ್ದು? ನನಗೂ 140 ಶಾಸಕರ ಬೆಂಬಲ ಇದೆ. ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ. ನಾಯಕತ್ವದ ವಿಚಾರ ಬಂದಾಗ ಸಂಖ್ಯೆಯ ಮೇಲೆ ನಿರ್ಧರಿಸುವಂಥದ್ದು ಏನೂ ಇಲ್ಲ. ನಾವು ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಅವರಿಗೂ 140 ಮಂದಿ ಶಾಸಕರ ಬೆಂಬಲ ಇದೆ. ಅದೇ ರೀತಿ ನನಗೂ ಅಷ್ಟೇ ಸಂಖ್ಯೆಯ ಶಾಸಕರು ಬೆಂಬಲ ನೀಡುತ್ತಿದ್ದಾರೆ. ನಾವಿಬ್ಬರೂ ನಾಯಕತ್ವ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಮುಂದಿನ ತೀರ್ಮಾನವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ’ ಎಂದು ತಿಳಿಸಿದರು.

2020ರ ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟಿಗೂ ಕರ್ನಾಟಕದ ನಾಯಕತ್ವ ಬಿಕ್ಕಟ್ಟಿಗೂ ಹೋಲಿಕೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಇತರೆ ರಾಜ್ಯಗಳು ಹಾಗೂ ಇತರೆ ವಿಚಾರಗಳ ಜತೆಗೆ ಹೋಲಿಕೆ ಮಾಡಲು ಬಯಸಲ್ಲ. ನಾಯಕತ್ವ ವಿಚಾರದಲ್ಲಿ ಪಕ್ಷದ ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯ ಮತ್ತು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ’ ಎಂದರು.--

ರಾಜ್ಯದಲ್ಲಿ ಹೂಡಿಕೆಗೆ ಹಲವು ಉದ್ಯಮಿಗಳು ಉತ್ಸುಕ: ಡಿಕೆಶಿ

ದಾವೋಸ್: ‘ದಾವೋಸ್‌ನಲ್ಲಿ ನಾನು ಹಲವು ಉದ್ಯಮಿಗಳನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಹಲವರು ಬೆಂಗಳೂರು ಮತ್ತು ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಹವಾಗುಣ ಮತ್ತು ಪರಿಸರ ಮಾಲಿನ್ಯದ ವಿಚಾರದಲ್ಲಿ ಬೆಂಗಳೂರು ಅತ್ಯಂತ ಸುರಕ್ಷಿತ ನಗರ. ದೆಹಲಿಯ ಪರಿಸರ ಮಾಲಿನ್ಯದಿಂದ ಆ ಉದ್ಯಮಿಗಳು ಬೇಸತ್ತಿದ್ದಾರೆ. ಆದರೆ, ಬೆಂಗಳೂರು ಮತ್ತು ಕರ್ನಾಟಕದ ವಿಚಾರದಲ್ಲಿ ಅವರಿಗೆ ಸಂತೃಪ್ತಿ ಇದೆ’ ಎಂದು ಶಿವಕುಮಾರ್‌ ಹೇಳಿದರು.

‘ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ. ನಾವೆಲ್ಲ ಜತೆಯಾಗಿ ಕೆಲಸ ಮಾಡಬೇಕು. ನಮ್ಮಲ್ಲಿರುವ ಮಾನವ ಸಂಪನ್ಮೂಲ, ನಾವು ನಿರ್ಮಿಸಿದ ಶಿಕ್ಷಣ ಸಂಸ್ಥೆಗಳು, ಕಾರ್ಮಿಕರನ್ನು ನೋಡಿದರೆ ಅವರು ಖಂಡಿತ ಭಾರತವು ಹೂಡಿಕೆಗೆ ಪ್ರಶಸ್ತವಾದ ಸ್ಥಳ ಎಂದು ಹೇಳಲಿದ್ದಾರೆ’ ಎಂದರು.--

ಟ್ರಂಪ್‌ರನ್ನು ಹೊಗಳಿದ ಡಿಕೆಶಿ

ದಾವೋಸ್: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿರುವ ಜ್ಞಾನ ಅದ್ಭುತ. ಅವರ ವಿಚಾರದಲ್ಲಿ ಏನೇ ಭಿನ್ನಾಭಿಪ್ರಾಯಗಳಿರಬಹುದು. ಪ್ಲಸ್‌ ಅಥವಾ ಮೈನಸ್‌ ಇರಬಹುದು. ಆದರೆ, ಒಬ್ಬ ನಾಯಕರಾಗಿ ನಾವು ಅವರ ಸಾಮರ್ಥ್ಯವನ್ನು ಒಪ್ಪಿಕೊಳ್ಳಲೇಬೇಕು’ ಎಂದು ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೊಗಳಿದರು.

- ನಾನು ಯಾವತ್ತೂ ಆಶಾವಾದಿ. ಭರವಸೆಯ ಮೇಲೆ ಬದುಕುತ್ತೇನೆ. ಧನಾತ್ಮಕವಾಗಿದ್ದೇನೆ

- ನಾಯಕತ್ವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ

- ಇದು ಮಾಧ್ಯಮದ ಮುಂದೆ ಚರ್ಚಿಸುವ ವಿಚಾರವಲ್ಲ. ತೆರೆಮರೆಯಲ್ಲಿ ನಡೆಸಬೇಕಾದ ಚರ್ಚೆ

- ಕಠಿಣ ಪರಿಶ್ರಮ ಯಾವತ್ತೂ ಮೋಸ ಮಾಡಲ್ಲ, ಅದಕ್ಕೆ ಪ್ರತಿಫಲ ಸಿಗುತ್ತೆ ಎಂದು ನಂಬಿದ್ದೇನೆ

- ಇದು ಪಕ್ಷದೊಳಗಿನ ನಮ್ಮ ನಡುವಣ ತಿಳುವಳಿಕೆ. ನಾನು, ಸಿಎಂ, ನಾಯಕರು ನಿರ್ಧರಿಸುತ್ತೇವೆ

- ನನಗೆ ಶಾಸಕರ ಬೆಂಬಲ ಇಲ್ಲ ಅಂತ ಯಾರು ಹೇಳಿದ್ದು, 140 ಶಾಸಕರ ಬೆಂಬಲವಿದೆ: ಡಿಕೆಶಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೆಡಿಎಸ್ ಕಿತ್ತೊಗೆಯುವ ತಾಕತ್ತಿದೆಯಾ?; ಕೆ.ಸುರೇಶ್‌ಗೌಡ
ಇದು ಸಂವಿಧಾನಕ್ಕೆ ಮಾಡಿದ ಅಪಚಾರ: ರಾಜ್ಯಪಾಲರ ನಡೆಗೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ!