ದಾವಣಗೆರೆ (ನ.26) : ಉತ್ತರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯೂ ಶಾಸಕ ಎಸ್.ಎ.ರವೀಂದ್ರನಾಥ್ ಸ್ಪರ್ಧಿಸಿದರೆ ಒಳ್ಳೆಯದು. ಒಂದು ವೇಳೆ ರವೀಂದ್ರನಾಥ್ ಸ್ಪರ್ಧಿಸದಿದ್ದರೆ, ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆಯೋ ಅದನ್ನು ನೋಡಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಶುಕ್ರವಾರ ಎಸ್‌ಟಿಪಿಐ ಉಪ ಕೇಂದ್ರ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರಕ್ಕೆ ಯಾರನ್ನು ನಿಲ್ಲಿಸಬೇಕೆಂಬ ಬಗ್ಗೆ ಕಾಂಗ್ರೆಸ್ ಇನ್ನೂ ಗೊಂದಲದಲ್ಲೇ ಇದೆ. ವಿಪಕ್ಷ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದನ್ನು ನೋಡಿಕೊಂಡು ನಮ್ಮ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದರು. ರವೀಂದ್ರನಾಥ ಮತ್ತೆ ಉತ್ತರ ಕ್ಷೇತ್ರದಿಂದ ನಿಲ್ಲಬಹುದು. ಬೇರೆಯವರೇ ಅಭ್ಯರ್ಥಿ ಆಗಬಹುದು. ಅಥವಾ ನಾನೇ ಸ್ಪರ್ಧಿಸಬಹುದು. ಒಂದು ವೇಳೆ ರವೀಂದ್ರನಾಥ್ ಒಪ್ಪಿದರೆ ಉತ್ತರ ಕ್ಷೇತ್ರಕ್ಕೆ ನಾನೇ ನಿಲ್ಲುತ್ತೇನೆ. ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಬಗ್ಗೆ ಪಕ್ಷ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.
Davanagere: ತ್ವರಿತವಾಗಿ ಕಾಮಗಾರಿಗಳ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ
.ಜಿಲ್ಲಾಸ್ಪತ್ರೆ ಪಿಪಿಪಿಯಿಂದ ಜನರಿಗೆ ತೊಂದರೆ ಇಲ್ಲ; ಸಂಸದ ಸ್ಪಷ್ಟನೆ
ಜಿಲ್ಲಾ ಆಸ್ಪತ್ರೆಯನ್ನು ಸರ್ಕಾರಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಸುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ವಿರೋಧ ಬಂದರೂ ಜಯಿಸಿ, ಕಾರ್ಯ ರೂಪಕ್ಕೆ ತರುವುದೇ ಒಳ್ಳೆಯತನ. ಪಿಪಿಪಿ ಮಾದರಿಯಾದರೆ ಜನರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಸರ್ಕಾರ ಏನು ಕೊಡಬೇಕೋ ಅದನ್ನು ಕೊಟ್ಟೆಕೊಡುತ್ತದೆ. ಗುತ್ತಿಗೆದಾರ ಏನು ಹಾಕಬೇಕೋ ಅದನ್ನು ಹಾಕುತ್ತಾನೆ. ಯಾವೊಬ್ಬ ರೋಗಿಯೂ ಔಷಧಿ, ಮಾತ್ರೆಯನ್ನು ಹೊರಗಿನಿಂದ ತರುವ ಅಗತ್ಯವೇ ಇಲ್ಲ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು.
ಪಿಪಿಪಿ ಮಾದರಿಯಲ್ಲಿ ಜಿಲ್ಲಾಸ್ಪತ್ರೆಯ ನಡೆಸಲು ಕೆಲವರು ವಿರೋಧಿಸುತ್ತಿದ್ದಾರೆ. ಎಲ್ಲದಕ್ಕೂ ವಿರೋಧ ಇದ್ದೇ ಇರುತ್ತದೆ. ನಾನು ಸಂಸದನಾಗಿರುವುದಕ್ಕೆ ಕೆಲವರ ವಿರೋಧವಿದೆ. ಅದನ್ನು ಜಯಿಸಿ, ಕೆಲಸ ಮಾಡುವುದೇ ಒಳ್ಳೆಯತನ. ಪ್ರತಿಯೊಂದಕ್ಕೂ ವಿರೋಧ ಸಹಜವಾಗಿ ಇದ್ದೇ ಇರುತ್ತದೆ. ಪಿಪಿಪಿ ಮಾದರಿಯಲ್ಲಿ ಜಿಲ್ಲಾಸ್ಪತ್ರೆಯನ್ನು ಯಾವೊಬ್ಬ ಬಡ ರೋಗಿಗಳಿಗೂ ತೊಂದರೆಯಾಗದಂತೆ, ಕೋವಿಡ್ ಸಂದರ್ಭದಲ್ಲಿ ನೀಡಿದ ಸೇವೆಯಂತೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುವೆ: ಶಾಸಕ ರವೀಂದ್ರನಾಥ್
ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒಲವು ನನಗಿದ್ದು, ಪಕ್ಷ ಟಿಕೆಟ್ ನೀಡಿದರೆ ಮತ್ತೆ ನಿಲ್ಲುತ್ತೇನೆ ಎಂದು ಉತ್ತರ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದರು. ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಶುಕ್ರವಾರ ಎಸ್‌ಟಿಪಿಐ ಉಪ ಕೇಂದ್ರ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವರಿಷ್ಠರು, ಪಕ್ಷ ಹೇಳಿದಂತೆ ಕೇಳುವುದಷ್ಟೇ ನಮ್ಮ ಕೆಲಸ ಎಂದರು. ಪಕ್ಷದಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ಕೊಡಲ್ಲ ಅಂತಾ ಪ್ರಶ್ನೆಯೇ ಇಲ್ಲವೆಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶಿಗ್ಗಾಂವಿ ಕ್ಷೇತ್ರವೇ ಸುರಕ್ಷಿತವಾಗಿದ್ದು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವ ಸಂದರ್ಭ ಒದಗಲಾರದು ಎಂದು ಉತ್ತರಿಸಿದರು.
Davanagere: ಸೋಷಿಯಲ್ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ
ವಿಮಾನ ನಿಲ್ದಾಣ ಸ್ಥಾಪನೆಗೆ ಜಮೀನು ಗುರುತಿಸಲು ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಜಿಲ್ಲಾಧಿಕಾರಿಯವರು ಶೀಘ್ರವೇ ಭೂಮಿಯನ್ನು ನೋಟಿಫೈ ಮಾಡಲಿದ್ದಾರೆ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬುದು ಬಹು ದಶಕಗಳ ಕನಸಾಗಿದೆ. ಅದನ್ನು ನಮ್ಮ ಸರ್ಕಾರ ಸಾಕಾರಗೊಳಿಸಲು ಬದ್ಧವಿದೆ.
ಡಾ.ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಸಂಸದ