ಅದೃಷ್ಟವಿದ್ದರೆ ಮುಂದಿನ ಸಲ ಸಿಎಂ ಆಗುವೆ: ಡಾ.ಜಿ.ಪರಮೇಶ್ವರ್‌

By Govindaraj S  |  First Published Dec 19, 2022, 1:20 AM IST

ಅದೃಷ್ಟವಿದ್ದರೆ ನಾನು ಮುಂದಿನ ಭಾರಿ ರಾಜ್ಯದ ಸಿಎಂ ಆಗುತ್ತೇನೆ. ಈಗಾಗಲೇ ನನಗೆ ಎರಡು ಸಲ ಸಿಎಂ ಅವಕಾಶವಿದ್ದರೂ ಸ್ವಲ್ಪದರಲ್ಲಿಯೇ ಕೈ ತಪ್ಪಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನುಡಿದರು.


ಮಧುಗಿರಿ (ಡಿ.19): ಅದೃಷ್ಟವಿದ್ದರೆ ನಾನು ಮುಂದಿನ ಭಾರಿ ರಾಜ್ಯದ ಸಿಎಂ ಆಗುತ್ತೇನೆ. ಈಗಾಗಲೇ ನನಗೆ ಎರಡು ಸಲ ಸಿಎಂ ಅವಕಾಶವಿದ್ದರೂ ಸ್ವಲ್ಪದರಲ್ಲಿಯೇ ಕೈ ತಪ್ಪಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನುಡಿದರು. ಶನಿವಾರ ತಾಲೂಕಿನ ಪುರವರ ಹೋಬಳಿ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ 1 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ಸಾಧುನಿವಾಸ ಮತ್ತು ಭೋಜನಾಲಯ ಉದ್ಘಾಟಿಸಿ ಮಾತನಾಡಿದರು. 

ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ರಾಜಕೀಯ, ಜನ ಸೇವೆ ಮಾಡುತ್ತಾ ಬಂದಿದ್ದು , ಈ ಭಾಗದ ಜನತೆ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸವಿರಿಸಿ ರಾಜಕೀಯವಾಗಿ ಬೆಳಸಿದ್ದು ಈ ಜನರ ಪ್ರೀತಿ, ಸಹಕಾರ ನಾನು ಎಂದಿಗೂ ಮರೆಯಲಾರೆ, ರಾಜ್ಯದಲ್ಲಿ ಎರೆಡು ಬಾರಿ ಸಿಎಂ ಆಗುವ ಅವಕಾಶ ಕೈ ತಪ್ಪಿದೆ. ಆದರೂ ಸಹ ಈ ಸಲ ರಾಜ್ಯದಲ್ಲಿ ಸಿಎಂ ಆಗುವ ಅವಕಾಶವಿದೆ. ನಾನು ಸಿಎಂ ಆಗಲಿ ಬಿಡಲಿ ನನ್ನ ರಾಜಕೀಯ ಸೇವೆ ನಿರಂತರವಾಗಿ ಜನಪರವಾಗಿ ನಡೆಯಲಿದೆ ಎಂದು ತಿಳಿಸಿದರು. 

Tap to resize

Latest Videos

ದೇಶಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ: ಡಾ.ಜಿ.ಪರಮೇಶ್ವರ್‌

ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಪಟ್ಟಿದ್ದು, ಪ್ರಸ್ತುತ ರಾಮಕೃಷ್ಣಶ್ರಮ ತುಂಬಾ ಚೆನ್ನಾಗಿದೆ. ಇಡೀ ಪ್ರಪಂಚದಲ್ಲಿ ಭಾರತದ ಧಾರ್ಮಿಕ ಆಚರಣೆಗಳು ವಿಭಿನ್ನವಾಗಿದೆ. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದ ಧಾರ್ಮಿಕ ಕ್ರಾಂತಿ ನಡೆಯಬೇಕಿದ್ದು, ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಧಾರ್ಮಿಕ ಆಚರಣೆಗಳು ನಡೆಯಬೇಕು. ಇದು ಈ ದೇಶದ ಸ್ವಾಮೀಜಿಗಳಿಂದ ಮಾತ್ರ ಸಾಧ್ಯ ಎಂದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಕೇವಲ ಹಿಂದುಗಳಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿನ ಮನುಕುಲಕ್ಕೆ ಆದರ್ಶಪ್ರಾಯವಾಗಿವೆ.

ಬೆಂಗಳೂರು ಮೂಲದವರಿಗೆ ಜಮೀನು ನೀಡಲ್ಲ: ಡಾ.ಜಿ.ಪರಮೇಶ್ವರ್‌

ಹಾಗಾಗಿ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಪಾಲಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮಥುರಾದ ಮಹಾಮಂಡಲೇಶ್ವರ ಕಾರ್ಷಿಣಿ ಗುರುಶಣಾನಂದಜಿ, ತುಮಕೂರು ರಾಮಕೃಷ್ಣಶ್ರಮದ ವಿರೇಶಾನಂದಮಹರಾಜ್‌, ರೂಪನಂದಜಿ ಮಹರಾಜ್‌, ತಗ್ಗಿಹಳ್ಳಿ ಆಶ್ರಮದ ರಮಾನಂದಸ್ವಾಮಿ, ಕೊರಟಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್ಥನಾರಾಯಣ್‌, ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಜಯಮ್ಮ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಸೇರಿದಂತೆ ಅನೇಕರಿದ್ದರು.

click me!