ಮೋದಿ ಹೆಸರಲ್ಲಿ ಮತ ಕೇಳುವೆ: ಬಿಜೆಪಿ ಅಭ್ಯರ್ಥಿ ಸಿ.ಎನ್.ಮಂಜುನಾಥ್

By Kannadaprabha News  |  First Published Mar 26, 2024, 10:54 AM IST

ಪ್ರಧಾನಿ ನರೇಂದ್ರ ಮೋದಿಯವರ ಕನಸುಗಳನ್ನು ಹೇಳಿ, ಮತಯಾಚಿಸಬೇಕಿದೆ. ದೇಶಕ್ಕೆ ಇಂದು ಮೋದಿಯವರ ಅವಶ್ಯಕತೆ ಎಷ್ಟಿದೆ? ಎಂಬುದನ್ನು ಮನಗಾಣಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರದ್ದು ಆಗಿದೆ ಎಂದ ಡಾ.ಸಿ.ಎನ್.ಮಂಜುನಾಥ್


ಕುದೂರು(ಮಾ.26):  ರಾಜಕಾರಣ ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರವಲ್ಲ. ಆಕಸ್ಮಿಕವಾಗಿ ದೊರೆತ ಅವಕಾಶವಾದರೂ ಭಯ ದಿಂದಲೇ ಇದ್ದೆ. ಆದರೆ, ಜನರ ನಡುವೆ ಬಂದಾಗ ಅವರು ತೋರಿಸುವ ಅಭಿಮಾನ, ಪ್ರೀತಿ ಇವುಗಳನ್ನು ಕಂಡಾಗ ನನ್ನ ವೈದ್ಯಕೀಯ ಸೇವೆ ಸಾರ್ಥಕ ಭಾವ ಮೂಡಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. 

ಸೋಮವಾರ ಪಟ್ಟಣದಲ್ಲಿ ಮಾತನಾಡಿದ ಅವರು, ಇದೊಂದು ದೊಡ್ಡ ಕ್ಷೇತ್ರ. ನೀವೆಲ್ಲರೂ ಅಭ್ಯರ್ಥಿ ಎಂದು ಭಾವಿಸಿ ಮನೆ,ಮನೆಗೆ ಹೋಗಿ ಮೋದಿ ಯವರ ಸಾಧನೆಗಳನ್ನು ಪ್ರಚುರಪಡಿಸಿ. ಯಾರನ್ನೂ ಕೆಣಕಿ ಜಗಳಕ್ಕೆ ಆಹ್ವಾನ ಮಾಡ ಬೇಡಿ ಎಂದು ಹೇಳಿದ್ದಾರೆ.

Tap to resize

Latest Videos

ಲೋಕಸಭೆ ಚುನಾವಣೆ 2024: ಬಿಜೆಪಿ ನಾಯಕರಿಂದ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಸಭೆ

ಪ್ರಧಾನಿ ನರೇಂದ್ರ ಮೋದಿಯವರ ಕನಸುಗಳನ್ನು ಹೇಳಿ, ಮತಯಾಚಿಸಬೇಕಿದೆ. ದೇಶಕ್ಕೆ ಇಂದು ಮೋದಿಯವರ ಅವಶ್ಯಕತೆ ಎಷ್ಟಿದೆ? ಎಂಬುದನ್ನು ಮನಗಾಣಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರದ್ದು ಆಗಿದೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ. 

click me!