ಲೋಕಸಭಾ ಚುನಾವಣೆ ಬಳಿಕ ಮತ್ತೆ ಡಿಸಿಎಂ ಹುದ್ದೆ ಕೇಳ್ತೀನಿ: ಸಚಿವ ಸತೀಶ್ ಜಾರಕಿಹೊಳಿ

By Kannadaprabha NewsFirst Published Jan 28, 2024, 11:21 AM IST
Highlights

ಡಿಸಿಎಂ ವಿಚಾರ ಸದ್ಯಕ್ಕಿಲ್ಲ. ಈಗ ನಾವು ಲೋಕಸಭಾ ಚುನಾವಣೆ ಫೋಕಸ್ ಮಾಡುತ್ತಿದ್ದೇವೆ. ಚುನಾವಣೆ ಬಳಿಕ ಮತ್ತೆ ಡಿಸಿಎಂ ಹುದ್ದೆ ಕೇಳುತ್ತೇನೆ. ಹೈಕಮಾಂಡ್ ಜತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಸಿಎಂ ಕೂಡಾ ಆಗಬೇಕು ಎಂಬ ಆಸೆ ಇದೆಯಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ 

ಹಾವೇರಿ(ಜ.28):  ಲೋಕಸಭಾ ಚುನಾವಣೆ ಬಳಿಕ ಮತ್ತೆ ಡಿಸಿಎಂ ಹುದ್ದೆ ಕೇಳೀನಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ವಿಚಾರ ಸದ್ಯಕ್ಕಿಲ್ಲ. ಈಗ ನಾವು ಲೋಕಸಭಾ ಚುನಾವಣೆ ಫೋಕಸ್ ಮಾಡುತ್ತಿದ್ದೇವೆ. ಚುನಾವಣೆ ಬಳಿಕ ಮತ್ತೆ ಡಿಸಿಎಂ ಹುದ್ದೆ ಕೇಳುತ್ತೇನೆ. ಹೈಕಮಾಂಡ್ ಜತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಸಿಎಂ ಕೂಡಾ ಆಗಬೇಕು ಎಂಬ ಆಸೆ ಇದೆಯಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ ಎಂದರು. 

ನುಡಿದಂತೆ ನಡೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ: ಸಚಿವ ಸತೀಶ್‌ ಜಾರಕಿಹೊಳಿ

ಕಾಂಗ್ರೆಸ್‌ನಲ್ಲಿ ತಾವು ಪವರ್ ಸೆಂಟರಾಗಲು ಹೊರಟಿದ್ದೀರಾ ಎಂಬ ವಿಚಾರಕ್ಕೆ, ನಾವು ಪವರ್ ಸೆಂಟರ್ ಅಲ್ಲ. ಪಕ್ಷದಲ್ಲಿಯೇ ಇದ್ದೀವಿ. ಹೊರಗಡೆ ಹೋಗಿಲ್ಲ. ಇದ್ದಲ್ಲೇ ಕಾಠ್ಯ ತಂತ್ರ ಮಾಡುತ್ತಿದ್ದೇವೆ. ಸಮಾನ ಮನಸ್ಕರು ಒಂದೆಡೆ ಸೇರಿದ್ದೆವು ಎಂದರು.

click me!