ವಿಜಯ ಮಲ್ಯನಂತೆ ನಾನು ಓಡಿ ಹೋಗಲ್ಲ, ಕುತಂತ್ರದಿಂದ ನನ್ನನ್ನು ಜೈಲಿಗಟ್ಟಿದರು: ಜನಾರ್ದನ ರೆಡ್ಡಿ

Published : Apr 04, 2023, 05:43 PM ISTUpdated : Apr 04, 2023, 06:25 PM IST
ವಿಜಯ ಮಲ್ಯನಂತೆ ನಾನು ಓಡಿ ಹೋಗಲ್ಲ, ಕುತಂತ್ರದಿಂದ ನನ್ನನ್ನು ಜೈಲಿಗಟ್ಟಿದರು:  ಜನಾರ್ದನ ರೆಡ್ಡಿ

ಸಾರಾಂಶ

ಬೆಳಗಾವಿಯ ಚಿಕ್ಕೋಡಿಯಲ್ಲಿ  ಪ್ರಚಾರ ಸಭೆಯಲ್ಲಿ ಮಾತನಾಡಿದ ಗಾಲಿ  ಜನಾರ್ದನ ರೆಡ್ಡಿ, ಒಬ್ಬ ನಾಯಕನಾದವನು ಯಾವತ್ತೂ ಎದೆ ಗುಂದಬಾರದು. ಸಿಬಿಐ ಬಂದಾಗ ನಾನು ಕಾನೂನಿಗೆ ಗೌರವ ನೀಡಿ ಹೋದೆ.  ನಾನು ಲಂಡನ್‌ನಲ್ಲಿ ಇದ್ದೇ ಲಕ್ಷ್ಮಿ ಮಿತ್ತಲ್ ಜೊತೆ ಸಭೆ ಮಾಡುತ್ತಿದ್ದೆ ಎಂದಿದ್ದಾರೆ.

ಚಿಕ್ಕೋಡಿ (ಏ.4): ಬಿಜೆಪಿ ಭದ್ರಕೋಟೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಬ್ಬರದ ಪ್ರಚಾರ ನಡೆಸುತ್ತಿದೆ. ಬೆಳಗಾವಿಯ ಚಿಕ್ಕೋಡಿಯಲ್ಲಿ KRPP ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿರುವ ಗಾಲಿ ಜನಾರ್ದನ ರೆಡ್ಡಿ ಅವರು, ಒಬ್ಬ ನಾಯಕನಾದವನು ಯಾವತ್ತೂ ಎದೆ ಗುಂದಬಾರದು. ಸಿಬಿಐ ಬಂದಾಗ ನಾನು ಕಾನೂನಿಗೆ ಗೌರವ ನೀಡಿ ಹೋದೆ. ವಿಜಯ ಮಲ್ಯನ ರೀತಿಯಲ್ಲಿ ನಾನು ಬೆನ್ನು ತೊರಿ ಓಡಿ ಹೋಗುವುದಿಲ್ಲ. ನಾನು ಲಂಡನ್‌ನಲ್ಲಿ ಇದ್ದೇ ಲಕ್ಷ್ಮಿ ಮಿತ್ತಲ್ ಜೊತೆ ಸಭೆ ಮಾಡುತ್ತಿದ್ದೆ. ನನ್ನ ಮೋಬೈಲ್ ನಲ್ಲಿ ಮೆಸೇಜ್ ಬರ್ತಾ ಇತ್ತು. ನನ್ನನ್ನು ಯಾವಾಗ ಬೇಕಾದ್ರೂ ಬಂಧಿಸಬಹುದು ಅಂದುಕೊಂಡೆ. ಆಗ ನಾನು ಲಕ್ಷ್ಮಿ ಮಿತ್ತಲ್ ಹೇಳಿದೆ. ನಾನು ಬೆಂಗಳೂರಿಗೆ ಹೋಗುತ್ತೇನೆಂದು. ಆದರೆ ಲಕ್ಷ್ಮಿ ಮಿತ್ತಲ್ ಹೇಳಿದರು ನೀವು ಇಲ್ಲೇ ಇರು ಎಂದು ಸಲಹೆ ನೀಡಿದರು.

ನಾನು ಯಾವುದೇ ತಪ್ಪು ಮಾಡಿಲ್ಲ ನಾನು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದೆ. ಐದು ವರ್ಷ ಅಧಿಕಾರ ನಡೆಸಿ  ಮೋಸದಿಂದ ನನ್ನನ್ನು ಜೈಲಿಗೆ ಕಳುಹಿಸಿದರು. ನಾನು ಜೈಲಿಗೆ ಹೋದರೂ ದುಡಿದ ಹಣವನ್ನು ಅವರಿಂದ ಮರಳಿ ಪಡೆಯುದಕ್ಕೆ ಆಗಲಿಲ್ಲ. ಕುತಂತ್ರದಿಂದ ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ನಮ್ಮ ಅಥಣಿ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೆಲಸವನ್ನು ಬಿಟ್ಟು ಬರುವುದು ಅಷ್ಟು ಸುಲಭವಲ್ಲ. ನಾನು ಇವರನ್ನು ಯಾವತ್ತೂ ಕೈ ಬಿಡುವುದಿಲ್ಲ, ನೀವು ಇವರನ್ನು ಕೈ ಬಿಡಬೇಡಿ. ದಕ್ಷಿಣ ಭಾರತದಲ್ಲಿ ನನ್ನ ಜೊತೆ ಮಂತ್ರಿ ಆದವರು ಅಥಣಿ ಕ್ಷೇತ್ರವನ್ನು ಯಾಕೆ ಅಭಿವೃದ್ಧಿ ಮಾಡಲ್ಲ? ಎಂದು ಎಂದ ಹೆಸರು ಹೇಳದೆ ಲಕ್ಷ್ಮಣ್ ಸವದಿ ಅವನ್ನು ಪ್ರಶ್ನಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಆಶೀರ್ವಾದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ಬಳ್ಳಾರಿ ಸಂಸತ್ ಚುನಾವಣೆಯಲ್ಲಿ ಸೋತರು ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ಬೆಳೆಯಿತು. ನಾನು ಮಂತ್ರಿ ಆಗಿರುವ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಂಪಿ, ಕೂಡಲಸಂಗಮ ಬಾದಾಮಿ, ಬೆಂಗಳೂರು, ಜೋಗಪಾಲ್ಸ್ , ಹಲವು ಪ್ರವಾಸಿ ಸ್ಥಳಗಳನ್ನು ಒಂದು ದಿನದಲ್ಲಿ ನೋಡಬೇಕು. ಮೂವತ್ತು ವಿಮಾನ ನಿಲ್ದಾಣ ಮಾಡಬೇಕು ಎಂದು ಕನಸು ಕಂಡಿದ್ದೆ. ಗುಲ್ಬರ್ಗಾ ವಿಜಯಪುರ ಜಿಲ್ಲೆಯಲ್ಲಿ ನಾನೇ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದೆ. ಮೈಸೂರು ಭಾಗದಲ್ಲಿ ವಿಮಾನ ಆಶ್ರಯ ಮಾಡಿದ್ದು ನಾನೇ. ನಾನು ಹೆಲಿಕಾಪ್ಟರ್ ನಲ್ಲಿ ತಿರುಗುತ್ತಿದ್ದೇನೆ ಮುಂದೆ ಸಿಎಂ ಆಗುತ್ತಾನೆ ಎಂದು ನಮ್ಮವರು ಶತ್ರುಗಳು  ಜೈಲಿಗೆ ಕಳುಹಿಸಿದರು ಎಂದು ತಮ್ಮ ಹಳೆಯ ಕಹಿ ದಿನಗಳನ್ನು ಮೆಲುಕು ಹಾಕಿದರು.

 ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ : ಜನಾರ್ದನ ರೆಡ್ಡಿ

 ಬಹುಮತದಿಂದ ಯಾವುದೇ ಸರ್ಕಾರ ರಚನೆ ಆಗುವುದಿಲ್ಲ ಸಿ ವೋಟರ್ಸ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಆ ರೀತಿ ಆದರೆ ನಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ. ರಾಜ್ಯದಲ್ಲಿ ನಮ್ಮದು ಸ್ವತಂತ್ರ್ಯವಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ನಮ್ಮ ಬೆಂಬಲವನ್ನು ಯಾರು ಬೇಕು ಅನ್ನುತ್ತಾರೆ ಅವರಿಗೆ ನೀಡಲಾಗುವುದು.

2028ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಜನಾರ್ದನ ರೆಡ್ಡಿಯ ಕೆಆರ್‌ಪಿಪಿ!

ರಾಜ್ಯದಲ್ಲಿ ಕಾಂಗ್ರೆಸ್ ಕುಂದಿಸುವ ನಿಟ್ಟಿನಲ್ಲಿ ಕೆಆರ್‌ಪಿಪಿ ಪಕ್ಷ ನಿರ್ಮಾಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ನಮ್ಮದು ಯಾವುದೇ ಪಕ್ಷವನ್ನು ಕುಂದಿಸುವ ಪಕ್ಷವಲ್ಲ. ನಮ್ಮದು ರೈತಪರ ಪಕ್ಷ. ಬಿಜೆಪಿ ಬೆಂಬಲ ನೀಡುವ ಪಕ್ಷ ಎಂದರೆ ಅಥಣಿ ಕುಡಚಿ ಯಲ್ಲಿ ಯಾರು ಶಾಸಕರಾಗಿದ್ದಾರೆ? ನಾವು ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಈ ಪಕ್ಷ ನಿರ್ಮಾಣ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಪಕ್ಷದಿಂದ 25 ರಿಂದ 30 ಸೀಟ್ ಗೆಲ್ಲುತ್ತೇವೆ ಎಂದು  ಅಥಣಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌