ಲೋಕಸಭೆ ಚುನಾವಣೆ 2024: ಟಿಕೆಟ್‌ಗಾಗಿ ಲಾಬಿ ಮಾಡಲ್ಲ, ಎಂಟಿಬಿ ನಾಗರಾಜ್

By Kannadaprabha News  |  First Published Feb 1, 2024, 10:37 PM IST

ಎರಡು ಬಾರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದರ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನರೇಂದ್ರ ಮೋದಿ ಅವಧಿಯಲ್ಲಿ ಆರ್ಥಿಕ ಪ್ರಗತಿಗೆ ಒತ್ತು ನೀಡುವ, ನಿರ್ಣಾಯಕ ನಾಯಕತ್ವ ಗುಣ ಹೊಂದಿರುವ ಒಬ್ಬ ನಾಯಕನನ್ನು ನಾವು ಕಂಡಿದ್ದೇವೆ. ಇಂತಹ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ ಎಂದ ಮಾಜಿ ಸಚಿವ ಎಂಟಿಬಿ ನಾಗರಾಜ್ 


ಹೊಸಕೋಟೆ(ಫೆ.01):  ದೇಶದಲ್ಲಿ ನರೇಂದ್ರ ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ದೃಢಸಂಕಲ್ಪ ಹೊತ್ತು ಮುಂದಿನ ಲೋಕಸಭೆ ಚುನಾವಣೆಗೆ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಬಾರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದರ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನರೇಂದ್ರ ಮೋದಿ ಅವಧಿಯಲ್ಲಿ ಆರ್ಥಿಕ ಪ್ರಗತಿಗೆ ಒತ್ತು ನೀಡುವ, ನಿರ್ಣಾಯಕ ನಾಯಕತ್ವ ಗುಣ ಹೊಂದಿರುವ ಒಬ್ಬ ನಾಯಕನನ್ನು ನಾವು ಕಂಡಿದ್ದೇವೆ. ಇಂತಹ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

Latest Videos

undefined

ಉಪಚುನಾವಣೆ : ಕೈ ಕೊಟ್ಟು ಹೋದ ಪುಟ್ಟಣ್ಣ ಮಣಿಸಲು ದಳ ಕಮಲ ಪಟ್ಟು

3 ಬಾರಿ ಪ್ರಧಾನಿಯಾದವರು ಇತಿಹಾಸದಲ್ಲಿಲ್ಲ:

ದೇಶದಲ್ಲಿ ಮೂರು ಬಾರಿ ಪ್ರಧಾನಮಂತ್ರಿಯಾದವರು ಇತಿಹಾಸದಲ್ಲೇ ಇಲ್ಲ. ಆದರೆ ಈ ಬಾರಿ ಪ್ರಧಾನಮಂತ್ರಿಯಾಗುವುದರ ಮೂಲಕ ನರೇಂದ್ರ ಮೋದಿ ಅವರು ರಾಜಕೀಯ ಕ್ಷೇತ್ರದಲ್ಲಿ ಇತಿಹಾಸವನ್ನು ಬರೆಯಲಿದ್ದಾರೆ. ಅವರ ಅವಧಿಯಲ್ಲಿ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರನ್ನು ಪಡೆದಿದೆ. ಆದ್ದರಿಂದ ಮೋದಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎಂದು ಹೇಳಿದರು.

ಸರ್ವೇ ಮಾಡಿಸಿ ಟಿಕೆಟ್ ಅಂತಿಮ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರಿಂದ ಸಾಕಷ್ಟು ಒತ್ತಡ ನನ್ನ ಮೇಲಿದೆ. ಆದರೆ ಪಕ್ಷದ ಹೈಕಮಾಂಡ್ ಆ ರೀತಿ ಟಿಕೆಟ್ ಕೊಡುವುದಿಲ್ಲ. ಬದಲಾಗಿ ಮೂರ್ನಾಲ್ಕು ಬಾರಿ ಕ್ಷೇತ್ರಗಳಲ್ಲಿ ಸರ್ವೆ ಮಾಡಿಸಿ ಟಿಕೆಟ್ ಘೋಷಣೆ ಮಾಡಲಿದೆ. ಈಗಾಗಲೇ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಮೂರ್ನಾಲ್ಕು ಜನರ ಹೆಸರು ಕೇಳಿ ಬರುತ್ತಿದೆ. ಸರ್ವೆ ವರದಿಯನ್ನು ಆದರಿಸಿ ಹೈಕಮಾಂಡ್ ಟಿಕೆಟ್ ಹಂಚಿಕೆಯ ತೀರ್ಮಾನ ಮಾಡಲಿದೆ. ಅಲ್ಲಿಯವರೆಗೂ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು ಎಂದರು.

ಹನುಮನ ನಾಡಲ್ಲಿ ಧ್ವಜ ಹಾರಿಸೋಕೆ ಕಾಂಗ್ರೆಸ್‌ನ ಕೇಳಬೇಕಾ?: ಆರ್.ಅಶೋಕ್

ಸಭೆಯಲ್ಲಿ ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

ಟಿಕೆಟ್ ಗಾಗಿ ಲಾಬಿ ಮಾಡಲ್

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಬೆಂಬಲ ಇಲ್ಲದವರು ಟಿಕೆಟ್‌ಗಾಗಿ ಈಗಾಗಲೇ ಹಲವರು ದೆಹಲಿ ನಾಯಕರ ಮನೆ ಕದ ತಟ್ಟಿದ್ದಾರೆ. ಆದರೆ ನಾನು ಮಾತ್ರ ಲಾಭಿ ಮಾಡುವುದಿಲ್ಲ. ಪಕ್ಷದಲ್ಲಿ ನಮಗೆ ವರ್ಚಸ್ ಇದ್ದರೆ ಅದು ನಮ್ಮ ಬಳಿಗೆ ಬರುತ್ತದೆ. ನಾನು ಸಚಿವನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರ ಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ಬಿಜೆಪಿ ಕಾರ್ಯಕರ್ತರ ಬೆಂಬಲ ಇದೆ. ಆದ್ದರಿಂದ ನಾನು ಯಾವ ನಾಯಕರ ಮನೆಯ ಕದ ತಟ್ಟಲ್ಲ, ಲಾಬಿ ಮಾಡಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಟಿಕೆಟ್ ಬಗ್ಗೆ ಸ್ಪಷ್ಟಪಡಿಸಿದರು.

click me!