ಕೊರೋನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಬಿಜೆಪಿ ಹಿರಿಯ ಮುಖಂಡ ಮನೆಯಲ್ಲಿ ನಿಧನರಾಗಿದ್ದಾರೆ. ಕೊರೋನಾ ವಿರುದ್ಧ ಹೋರಾಡಿ ಬಂದಿದ್ದ ಅವರಿಗೆ ಸಾವು ಗೆಲ್ಲಲಾಗಲಿಲ್ಲ.
ಹುಬ್ಬಳ್ಳಿ, (ಜುಲೈ.26): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಬಿಜೆಪಿ ಹಿರಿಯ ಮುಖಂಡ (67) ರಾಘವೇಂದ್ರ ರಾಮದುರ್ಗ ಅವರು ವಿಧಿವಶರಾಗಿದ್ದಾರೆ.
ಇಂದು (ಭಾನುವಾರ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಅವರಿಗೆ ಕೊರೋನಾ ಅಟ್ಯಾಕ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದರು.
ಕರ್ನಾಟಕ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ತಾಯಿ ನಿಧನ
ಆದ್ರೆ, ಭಾನುವಾರ ಮಧ್ಯಾಹ್ನ ಮನೆಯಲ್ಲಿ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿ ಬಂದಿದ್ದ ರಾಘವೇಂದ್ರ ಅವರಿಂದ ಸಾವು ಗೆಲ್ಲಲಾಗಲಿಲ್ಲ.
67 ವರ್ಷದ ನನಗೆ ಕೊರೋನಾ ಬಂದಿದ್ದು ಕೇಳಿ, ಅನೇಕರು ಮಂದಿ ಜೀವಂತವಾಗಿ ಮನೆಗೆ ವಾಪಸ್ ಬರುವುದಿಲ್ಲ ಅಂದುಕೊಂಡಿದ್ದರು. ಆದ್ರೆ, ನನ್ನಲ್ಲಿದ್ದ ಆತ್ಮವಿಶ್ವಾಸ ಹಾಹೂ ಕಿಮ್ಸ್‌ನಲ್ಲಿ ಸಿಕ್ಕ ಉತ್ತಮ ಚಿಕಿತ್ಸೆಯಿಂದ ಮರುಜನ್ಮ ಪಡೆದಿದ್ದೇನೆ ಎಂದು ಹೇಳಿದ್ದರು.
ಇನ್ನು ಇವರ ನಿಧನಕ್ಕೆ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಸಂತಾಪ ಸೂಚಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪಾಲಿಕೆಯ ಮಾಜಿ ಸದಸ್ಯರು, ಬಿಜೆಪಿಯ ಹಿರಿಯ ಮುಖಂಡರು ಹಾಗೂ ಆತ್ಮೀಯರಾಗಿದ್ದ ಶ್ರೀ ರಾಘವೇಂದ್ರ ರಾಮದುರ್ಗ ಅವರು ನಿಧನರಾದ ಸುದ್ದಿ ಕೇಳಿ ತುಂಬಾ ದುಃಖವಾಯಿತು.
ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ🙏 pic.twitter.com/mIKfs1MF5S