ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯಕ್ಕೆ ಕಾಣ್ತಿಲ್. ಸದ್ಯ ಆ ತರಹ ವಾತಾವರಣ ಇಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್ ನಾವೇನು ಸನ್ಯಾಸಿಗಳಾ ಎಂದು ಪ್ರಶ್ನಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ
ಹುಬ್ಬಳ್ಳಿ(ಜು.31): ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಅತ್ಯಂತ ವ್ಯವಸ್ಥಿತವಾಗಿದೆ. ಯಾವುದೇ ಸಂದರ್ಭದಲ್ಲೂ ಹತೋಟಿ ಮೀರಿಹೋಗಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ಜಿ.ಪರಮೇಶ್ವರ ಅವರು, ಸ್ವಾಭಾವಿಕವಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಅವರ ಆಪಾದನೆ ಸತ್ಯಕ್ಕೆ ದೂರವಾಗಿದೆ. ಯಾವ ಕೈಗಾರಿಕೆ ರಾಜ್ಯವನ್ನ ಬಿಟ್ಟು ಹೊರ ಹೋಗುವ ಉದಹಾರಣೆ ಇಲ್ಲ. ನಿರ್ಮಲಾ ಸೀತಾರಾಮನ್ ಅವರು ಹೇಳಿದ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ, ಡ್ರಗ್ಸ್ ಧಂದೆ ಇರೋದು ನಿಜ. ಆದ್ರೆ ಯಾವಾಗಿಂದ ಇಂತಹ ಚಟುವಟಿಕೆಗಳಾಗಿವೆ ಅನ್ನೋದು ಅವಲೋಕನ ಮಾಡುವ ಅಗತ್ಯವಿದೆ. ಬಿಜೆಪಿ ಸರ್ಕಾರದ ಅವಧಿಗಿಂತಲೂ ಕಡಿಮೆ ಚಟುವಟಿಕೆ ಇದೆ. ರಾಜ್ಯದಲ್ಲಿ ಡ್ರಗ್ಸ್ ಮುಕ್ತವನ್ನಾಗಿಸುವ ಗುರಿ ಹೊಂದಿದ್ದೇವೆ. ಈ ಭಾಗದಲ್ಲೂ ಸಹ ಡ್ರಗ್ಸ್ ದಂಧೆ ಕಡಿವಾಟಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮಾದಕ ವ್ಯಸನಿಗಳನ್ನ ಹಿಡಿದು ತಂದು ಅವರಿಗೆ ಪರೀಕ್ಷೆಗೊಳಪಡಿಸಲಾಗಿದೆ. ಅವರ ಮೂಲಕ ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸುವ ಕಾರ್ಯ ನಡೆಯುತ್ತಿದೆ. ಈ ಮೂಲಕ ನಾವು ಇಡೀ ರಾಜ್ಯದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮುಡಾದಲ್ಲಿ ಹಗರಣ ನಡೆದಿಲ್ಲ; ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ: ಗೃಹಸಚಿವ ಪರಮೇಶ್ವರ್
ರಾಜ್ಯದ ಪ್ರತಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿನ್ನೆಯಷ್ಟೇ ಒಬ್ಬ ಡ್ರಗ್ ಪೆಡ್ಲರ್ ನನ್ನ ಬಂಧಿಸಲಾಗಿದೆ. ಅವನು ನೈಜೇರಿಯಾದಿಂದ ಡ್ರಗ್ಸ್ ತಂದು ಮಾರಾಟ ಮಾಡಿರುವುದು ಗಮನಕ್ಕೆ ಬಂದಿದೆ. ಇದಲ್ಲದೇ ಸೈಬರ್ ಕ್ರೈಂಗಳ ಹಾವಳಿ ಹೆಚ್ಚಾಗಿದೆ. ಸೈಬರ್ ಕ್ರೈಂ ತಡೆಗಟ್ಟಯವ ಪ್ರಯತ್ನಗಳು ಕೂಡ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹತೋಟಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಹುದ್ದೆ ಬೇಡ ಅನ್ನಲು ನಾವೇನು ಸನ್ಯಾಸಿಗಳಲ್ಲ
ಸಿಎಂ ಹುದ್ದೆ ಬೇಡ ಅನ್ನಲು ನಾವೇನು ಸನ್ಯಾಸಿಗಳಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾರ್ಮಿಕ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯಕ್ಕೆ ಕಾಣ್ತಿಲ್. ಸದ್ಯ ಆ ತರಹ ವಾತಾವರಣ ಇಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್ ನಾವೇನು ಸನ್ಯಾಸಿಗಳಾ ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣ: ಬಿಜೆಪಿ ಪಾದಯಾತ್ರೆಗೆ ಅನುಮತಿ ನೀಡೋದಿಲ್ಲ, ಸಚಿವ ಜಿ.ಪರಮೇಶ್ವರ್
ನಿನ್ನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಂದಿನ ಮುಖ್ಯಮಂತ್ರಿ ಜಿ.ಪರಮೇಶ್ವರ್ ಎಂದು ಘೋಷಣೆ ಕೂಗಿದ್ರು. ಇದಕ್ಕೆ ಪುಷ್ಠಿ ನೀಡುವಂತೆ ನಾವೇನು ಸನ್ಯಾಸಿಗಳಲ್ಲ ಎಂದು ಪರಮೇಶ್ವರ್ ಹೇಳಿಕೆ ಕೊಟ್ಟಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಯಾರ ಸೈಟ್ ಕೊಟ್ಟವರು, ಕಮೀಟಿಯಲ್ಲಿ ಜಿಟಿ ದೇವೆಗೌಡ ಇದ್ರು, ರಾಮದಾಸ್ ಇದ್ರು, ತನ್ವೀರ್ ಶೇಠ್ ಇದ್ರು. ಇಲ್ಲಿದ್ದವರ ಪೈಕಿ ಎಲ್ಲರೂ ಕಾಂಗ್ರೆಸ್ ನವರ ಅಲ್ಲ. ಅದಕ್ಕೂ ಸಿದ್ದರಾಮಯ್ಯ ಕಮಿಟಿ ರಚನೆ ಮಾಡಿದ್ದಾರೆ. ವರದಿ ಬರಲಿ, ಅಕಸ್ಮಾತ್ ತಪ್ಪಿತಸ್ಥರಿದ್ದರೇ ಹೈಕಮಾಂಡ್ ಕ್ರಮ ಕೈಗೊಳ್ಳುತ್ತೆ. ವಾಲ್ಮೀಕಿ ಹಗರಣ ನಮಗೆ ಮಾಹಿತಿ ಬಂದ ನಂತರ. ನಾವು ಕೂಡಲೇ SIT ರಚನೆ ಮಾಡಿದ್ದೇವೆ. ಚಂದ್ರಶೇಖರ್ ಆತ್ಮಹತ್ಯೆಯಾದ ಬಳಿಕ, ಡೆಥ್ ನೋಟ್ ಸಿಕ್ಕ ನಂತರ SIT ರಚನೆ ಮಾಡಿದ್ದೇವೆ. ನಂತರ ಸಿಬಿಐ, ಇಡಿ ತನಿಖೆ ಮಾಡ್ತಿದಾರೆ. ಇನ್ನು ವರದಿ ಬರಬೇಕಿದೆ, ಸುಮ್ನೆ ಆಪಾದನೆ ಮಾಡ್ತಿದಾರೆ. ಆಪಾದನೆ ಬಂದ ಬಳಿಕ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದೆ. ರಾಜೀನಾಮೆ ಕೊಡು ಅಂತಾ ನಾವ ನಾಗೇಂದ್ರ ಅವರಿಗೆ ಹೇಳಿದ್ವೀ. ಈ ಮದ್ಯೆ ಇಡಿ ಅವರು ನಾಗೇಂದ್ರ ಅವರ ನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.