₹75 ಲಕ್ಷ ವೆಚ್ಚದಲ್ಲಿ ಈದ್ಗಾ ಮೈದಾನ, ₹4 ಕೋಟಿ ವೆಚ್ಚದಲ್ಲಿ ಏರ್‌ ಕಂಡಿಷನ್ಡ್ ಶಾದಿಮಹಲ್.. ಸರ್ವೇ ಜನಃ ಸುಖಿನೋ ಭವಂತು ಎಂದ ಬಿಜೆಪಿ ಶಾಸಕ

Kannadaprabha News   | Kannada Prabha
Published : May 29, 2026, 01:05 PM IST
Holalkere BJP MLA M Chandrappa Launches Eidgah Ground Works Worth Rs 75 Lakh

ಸಾರಾಂಶ

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರು 75 ಲಕ್ಷ ರು. ವೆಚ್ಚದ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ʻಸರ್ವೇ ಜನಃ ಸುಖಿನೋ ಭವಂತುʼ ಧ್ಯೇಯದಡಿ ತಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಹೊಳಲ್ಕೆರೆ (ಮೇ.29): ಕ್ಷೇತ್ರದಲ್ಲಿ ವಿಭಿನ್ನ ಮನೋಧರ್ಮದ ಜನರು ಇರುವುದು ಸಹಜ. ನನಗೆ ಆಗದವರು ಇದ್ದಾರೆ, ವಿಶ್ವಾಸಿಕರೂ ಇದ್ದಾರೆ. ಆದರೆ ನಾನು ಯಾರನ್ನೂ ಕಡೆಗಣಿಸದೆ ʻಸರ್ವೇ ಜನಃ ಸುಖಿನೋ ಭವಂತುʼ ಎಂಬ ಧ್ಯೇಯವನ್ನಿಟ್ಟುಕೊಂಡು ಕೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

75 ಲಕ್ಷ ರು. ವೆಚ್ಚದಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಏರ್‌ ಕಂಡಿಷನ್‌ವುಳ್ಳ ಶಾದಿ ಮಹಲ್ ನಿರ್ಮಾಣ

ರಾಜ್ಯ ಸರ್ಕಾರದ ಅನುದಾನದಲ್ಲಿ ಶಾದಿ ಮಹಲ್‌ಗೆ ಹಣ ನೀಡಲು ಅವಕಾಶವಿಲ್ಲ. ಆದರೂ 4 ಕೋಟಿ ರು. ವೆಚ್ಚದಲ್ಲಿ ಏರ್ ಕಂಡೀಷನ್‌ವುಳ್ಳ ಶಾದಿ ಮಹಲ್ ಕಟ್ಟಿಸಲಾಗುತ್ತಿದೆ. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮನವೊಲಿಸಿ ಶಾದಿ ಮಹಲ್‌ ನಿರ್ಮಾಣಕ್ಕೆ ಅನುದಾನ ತಂದಿದ್ದೆ ಎಂದರು.

ಎಲ್ಲಿ ಯಾರಿಗೆ ನ್ಯಾಯ ಕೊಡಬೇಕು, ಅಲ್ಲಾನಿಗೆ ಗೊತ್ತಿದೆ!

ಹುಟ್ಟು-ಸಾವಿನ ನಡುವೆ ಇರುವ ಜೀವನ ಅತ್ಯಂತ ಪವಿತ್ರವಾದುದು. ಮನುಷ್ಯತ್ವವಿರುವ ಎಲ್ಲರೂ ಅವಕಾಶ ಸಿಕ್ಕಾಗ ಹತ್ತಾರು ಜನ ಮೆಚ್ಚುವ ರೀತಿ ಕೆಲಸ ಮಾಡಬೇಕು. ಅದೆ ನಿಜವಾದ ಮಾನವ ಧರ್ಮ. 32 ವರ್ಷಗಳ ಹಿಂದೆ ಭರಮಸಾಗರದಿಂದ ಪ್ರಥಮ ಬಾರಿ ಸ್ಪರ್ಧಿಸಿ ಈಗ ಐದು ಬಾರಿ ಶಾಸಕನಾಗಿದ್ದೇನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಎಲ್ಲಿ ಯಾರಿಗೆ ನ್ಯಾಯ ಕೊಡಬೇಕೆಂಬುದು ಅಲ್ಲಾನಿಗೆ ಗೊತ್ತಿದೆ. ನನಗೆ ಜಾತಿ ಗೊತ್ತಿಲ್ಲ. ಎಲ್ಲರನ್ನು ಕುಟುಂಬದವರಂತೆ ಕಾಣುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಗೆ ಅವಕಾಶ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಪ್ರಾಮಾಣ ಕವಾಗಿ ಶ್ರಮಿಸುತ್ತಿದ್ದೇನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್.ಎ.ಅಶೋಕ್, ಪಿ.ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ಮುಸ್ಲಿಂ ಮುಖಂಡರಾದ ಮುತ್ತುಲಿ ಸಾಬ್, ಅಲಿಂಸಾಬ್, ಸೈಯದ್‌ಸಾಬ್, ಭಕ್ಷಿಸಾಬ್, ಜಾಕಿರ್ ಇನ್ನಿತರರು ಹಾಜರಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿ!
MP Kakoli Ghosh Dastidar: TMC ಸೋಲಿನ ಬೆನ್ನಲ್ಲೇ ಭಾರೀ ಸ್ಫೋಟ; ತಮ್ಮದೇ ಪಕ್ಷದ ಸಂಸದನಿಂದ ನಿಂದನೆ ಎಂಪಿ ಕಕೋಲಿ ಘೋಷ್ ದೂರು