ಸಿಎಂ ವಿರುದ್ಧ ಯತ್ನಾಳ್ ಸಿಡಿಸಿದ್ದ CD ಬಗ್ಗೆ ಮಾತನಾಡಿದ ಕುಮಾರಸ್ವಾಮಿ

By Suvarna News  |  First Published Jan 31, 2021, 10:12 PM IST

ಸಚಿವ ಸ್ಥಾನ ಸಿಗದಿದ್ದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಡಿ ಬಾಂಬ್ ಸಿಡಿಸಿದ್ದರು. ಇನ್ನು ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಬೆಂಗಳೂರು, (ಜ.31): ಅದೇನೋ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರುವಂತೆ ಸಿಡಿಯನ್ನು ಕೆಲವರು ಬಳಕೆ ಮಾಡುಕೊಂಡಿರಬಹುದು. ಆದರೆ ನಾನು ಆ ಸಿಡಿಯ ಪಾಲುದಾರ ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​ಡಿಕೆ, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರುವಂತೆ ಸಿಡಿಯನ್ನು ಕೆಲವರು ಬಳಕೆ ಮಾಡುಕೊಂಡಿರಬಹುದು. ಆದರೆ ನಾನು ಆ ಸಿಡಿಯ ಪಾಲುದಾರ ಅಲ್ಲ. ಶ್ರಮಪಟ್ಟು ಯಾವುದೋ ರೀತಿಯಿಂದ ಕಷ್ಟಪಟ್ಟು ಸರ್ಕಾರ ಮಾಡಿದ್ದೀರಿ. ಖಾತೆ ಕ್ಯಾತೆ ಬಿಟ್ಟು ಜನರ ಸಮಸ್ಯೆಗಳ‌ ಕಡೆ ಗಮನ ಕೊಡಿ ಎಂದರು.

Tap to resize

Latest Videos

ಬಿಎಸ್‌ವೈ ವಿರುದ್ಧ CD ಬಾಂಬ್ ಸಿಡಿಸಿದ ಯತ್ನಾಳ್: ರಾಜಕಾರಣಲ್ಲಿ ಶುರುವಾಯ್ತು ಸಿಡಿ ಚರ್ಚೆ

ಈ ದೇಶದ ವ್ಯವಸ್ಥೆಯಲ್ಲಿ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ. ನನ್ನ 12 ವರ್ಷದ ರಾಜಕೀಯ ಅನುಭವ ಇದು. ಇದರಿಂದ ಕೆಲವರಿಗೆ ಸಹಾಯ ಆಗಿರಬಹುದು ಎಂದು ಮಾರ್ಮಿಕವಾಗಿ ನುಡಿದರು.

 ಮುಖ್ಯಮಂತ್ರಿಗಳ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿಯಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಆದರೆ ಖಾತೆ ಕ್ಯಾತೆ ಬಿಟ್ಟು ಜನರ ಸಮಸ್ಯೆಗಳ‌ ಕಡೆ ಗಮನ ಕೊಡಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು. 

click me!