ಖಾತೆ ಅಸಮಾಧಾನದ ಹೊತ್ತಲ್ಲೇ ಎಚ್‌ಡಿಕೆ-ಸಚಿವರು ಭೇಟಿ: ನಾಯಕರ ಚರ್ಚೆ ಕುತೂಹಲ

By Suvarna NewsFirst Published Jan 21, 2021, 3:24 PM IST
Highlights

ಖಾತೆ ಬದಲವಾಣಿಯ ಅಸಮಾಧಾನ ಸ್ಪೋಟಗೊಂಡಿರುವ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸಚಿವರೊಬ್ಬರು ಭೇಟಿ ಮಾಡಿದ್ದಾರೆ.

ಬೆಂಗಳೂರು, (ಜ.21): ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಮಾಧುಸ್ವಾಮಿ, ಎಂಟಿಬಿ ನಾಗರಾಜ್ ಸೇರಿದಂತೆ ಹಲವರು ಅಸಮಧಾನಗೊಂಡಿದ್ದಾರೆ.

ಇದರ ಮಧ್ಯೆ  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು (ಗುರುವಾರ) ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.

ಖಾತೆ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನ ಸ್ಫೋಟ: ಇದಕ್ಕೆ ಹೊಸ ಸೂತ್ರ ಹೆಣೆದ ಸಿಎಂ 

ಜೆಡಿಎಸ್- ಬಿಜೆಪಿ ನಾಯಕರ ಈ ಭೇಟಿಯೂ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದಲ್ಲದೇ ಹಲವು ಚರ್ಚೆ ಗ್ರಾಸವಾಗಿದೆ. ಭೇಟಿಯ ಬಳಿಕ ಉಭಯ ನಾಯಕರೂ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಯಾವುದೇ ರಾಜಕೀಯ ಚರ್ಚೆಯಾಗಿಲ್ಲಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ಬೆಳವಣಿಗೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಮ್ಮದು ಹಳೆಯ ಸ್ನೇಹ. ದೇವೇಗೌಡರು ಹಾಗೂ ಎಸ್.ಆರ್ ಬೊಮ್ಮಾಯಿ‌ ಸ್ನೇಹಿತರು. ಆ ಕಾಲದಿಂದಲೂ ನಮ್ಮ ಸ್ನೇಹ ಇದೆ. ಒಂದೇ ಕುಟುಂಬದ ರೀತಿ ಇದ್ದೇವೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ್ ಬೊಮ್ಮಯಿ ಮಾತನಾಡಿ, ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಕುಮಾರಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

ಇನ್ನು ಈ ಬಗ್ಗೆ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮತ್ತು ನಾನು ತುಂಬಾ ಹಳೇ ಸ್ನೇಹಿತರು. ನನ್ನ ತಂದೆ ಕಾಲದಿಂದಲೇ ದೇವೇಗೌಡರ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ. ನಿನ್ನೆಯೇ ನನ್ನ ಮನೆಗೆ ಬರುತ್ತೇನೆ ಎಂದಿದ್ದರು. ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ ಎಂದು ಬೊಮ್ಮಾಯಿ ಎಂದರು.

click me!