ಗಟ್ಟಿ ಮಾತನಾಡೋರು ಒಂಟಿಯಾಗೋದು ಗ್ಯಾರಂಟಿ : ಹತಾಶೆ ಹೇಳಿಕೆ ನೀಡಿದ ಹಳ್ಳಿಹಕ್ಕಿ

Kannadaprabha News   | Asianet News
Published : Jan 24, 2021, 09:39 AM IST
ಗಟ್ಟಿ  ಮಾತನಾಡೋರು ಒಂಟಿಯಾಗೋದು ಗ್ಯಾರಂಟಿ : ಹತಾಶೆ ಹೇಳಿಕೆ ನೀಡಿದ ಹಳ್ಳಿಹಕ್ಕಿ

ಸಾರಾಂಶ

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಇದೀಗ ತಮ್ಮ ಜೊತೆ ಬಿಜೆಪಿಗೆ ವಲಸೆ ಬಂದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅವರೆಲ್ಲಾ ಮಂತ್ರಿಯಾಗಲು ಮಾತ್ರ 

 ಚಿತ್ರದುರ್ಗ (ಜ.24):  ರಾಜಕಾರಣದಲ್ಲಿ ಯಾರು ಗಟ್ಟಿಯಾಗಿ ಏರು ದನಿಯಲ್ಲಿ ಮಾತನಾಡುತ್ತಾರೋ ಅವರು ಒಂಟಿಯಾಗುವುದು ಗ್ಯಾರಂಟಿ. ಹಾಗಂತ ನಾನು ಒಂಟಿಯಾಗಿಲ್ಲ, ರಾಜ್ಯದ ಜನ ನನ್ನ ಜೊತೆ ಇದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಕಾಗಿನೆಲೆ ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹದಿನೇಳು ಜನರ ಟೀಂ ಕಟ್ಟಿಕೊಂಡು ಮುನ್ನಡೆಸಿದ್ದೆ. ಸದಾ ವಾಸ್ತವ ನೆಲೆಗಟ್ಟಿನಲ್ಲಿ ಮಾತನಾಡಿಕೊಂಡು ಬಂದಿದ್ದೆ. ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋಗಿದ್ದಾರೆ. ಕೇವಲ ಬಿಡಿ ಮಂತ್ರಿ ಆಗಲು ಮಾತ್ರ ಅವರು ಸೀಮಿತ ಎಂದು ಹೇಳಿದರು.

ಜೆಡಿಎಸ್ ಮುಖಂಡಗೆ ಬಿಜೆಪಿಗೆ ಆಹ್ವಾನ : BSY ವಿರುದ್ಧ ವಿಶ್ವನಾಥ್ ಕಿಡಿ ..

ನನಗೆ ಮಂತ್ರಿಗಿರಿ ಸಿಗುತ್ತೋ, ಇಲ್ಲವೋ ಬೇರೆ ವಿಚಾರ. ನನ್ನ ಬಿಟ್ಟು ಸ್ನೇಹಿತರು ಸಭೆ ನಡೆಸಿದ್ದಾರೆ. ನನ್ನ ಬಳಿ ಮಾತನಾಡಿದರೆ ಸಿಎಂ ಬಿ.ಎಸ್‌ ವೈ ಏನಂದುಕೊಂಡಾರೋ ಎಂಬ ಅಳಕು ಅವರಿಗಿದೆ ಎಂದು ಪ್ರಶ್ನೆಯೊಂದಕ್ಕೆ ವಿಶ್ವನಾಥ್‌ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ