ಚಿತ್ರದುರ್ಗದಲ್ಲಿ ಸವಿತಾ ರಘುಗೆ ನಿಗಮ ಮಂಡಳಿ ನೀಡಲು ಸರ್ಕಾರ ಚಿಂತನೆ: ವ್ಯಾಪಕ‌ ವಿರೋಧ

By Govindaraj S  |  First Published Feb 1, 2024, 6:16 PM IST

ಮೊನ್ನೆ ತಾನೆ ರಾಜ್ಯದ ಕೆಲ ಶಾಸಕರುಗಳಿಗೆ ನಿಗಮ ಮಂಡಳಿಗಳನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ‌. ಆದ್ರೆ ಕಾರ್ಯಕರ್ತರಿಗೂ ನಿಗಮ ಮಂಡಳಿ ಕೊಡುವ ಬಗ್ಗೆ ಚಿಂತನೆ ನಡೆಸಿರೋ ಸರ್ಕಾರಕ್ಕೆ ಈಗ‌ ಮತ್ತೊಂದು ತಲೆ ನೋವು ಶುರುವಾಗಿದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಫೆ.01): ಮೊನ್ನೆ ತಾನೆ ರಾಜ್ಯದ ಕೆಲ ಶಾಸಕರುಗಳಿಗೆ ನಿಗಮ ಮಂಡಳಿಗಳನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ‌. ಆದ್ರೆ ಕಾರ್ಯಕರ್ತರಿಗೂ ನಿಗಮ ಮಂಡಳಿ ಕೊಡುವ ಬಗ್ಗೆ ಚಿಂತನೆ ನಡೆಸಿರೋ ಸರ್ಕಾರಕ್ಕೆ ಈಗ‌ ಮತ್ತೊಂದು ತಲೆ ನೋವು ಶುರುವಾಗಿದೆ. ಕೋಟೆನಾಡಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೂ ನಿಗಮ ಮಂಡಳಿ ಕೊಡುವ ಪ್ಲಾನ್ ಸರ್ಕಾರ ಮಾಡ್ತಿರೋದಕ್ಕೆ ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತಾದ ಡಿಟೈಲ್ಸ್ ಇಲ್ಲಿದೆ. ಈಗಾಗಲೇ ಸರ್ಕಾರ ರಚನೆ ಆದ್ಮೇಲೆ ಎಲ್ಲಾ ಶಾಸಕರು ನಾನು ಮಂತ್ರಿ ಆಗಬೇಕು ಎಂದು ಕನಸು ಕಾಣ್ತಿದ್ದರು. ಆದ್ರೆ ಏಕಾಏಕಿ ಸರ್ಕಾರ ಮಂತ್ರಿ ಆಸೆ ಇಟ್ಕೊಂಡಿದ್ದ ಅನೇಕ ಹಿರಿಯ ಶಾಸಕರುಗಳಿಗೆ ನಿಗಮ ಮಂಡಳಿ ನೀಡಿ ಗಪ್ ಚುಪ್‌ ಮಾಡಿರುವಂತದ್ದು. 

Tap to resize

Latest Videos

undefined

ಅದೇ ರೀತಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೂ ನಿಗಮ ಮಂಡಳಿ ನೀಡಿಬೇಕು ಎಂದು ಕೈ ನಾಯಕರು ಹಲವು ಬಾರಿ ಚರ್ಚೆ ನಡೆಸಿದ್ದರು. ಅದರಂತೆ ಈಗಾಗಲೇ ಒಂದು ಸಂಭಾವ್ಯ ಪಟ್ಟಿ ಕೂಡ ತಯಾರಾಗಿರುವಂತದ್ದು, ಆದ್ರೆ ಕೋಟೆ ನಾಡು ಚಿತ್ರದುರ್ಗದಿಂದ ನಾಮ ನಿರ್ದೇಶನ ಆಗಿರುವ ಹೆಸರುಗಳಲ್ಲಿ ಸವಿತಾ ರಘು ಎಂಬುವವರಿಗೆ ನಿಗಮ ಮಂಡಳಿ ನೀಡಲು ಸರ್ಕಾರ ಚಿಂತಿಸಿದ್ದು, ಸ್ಥಳೀಯವಾಗಿ ವ್ಯಾಪಕ‌ ವಿರೋಧ ವ್ಯಕ್ತವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸವಿತಾ ಹಾಗೂ ಪತಿ ರಘು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು, ಚುನಾವಣೆಯಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ರು. 

ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರ ಯತ್ನ: ಮುಖ್ಯಮಂತ್ರಿ ಚಂದ್ರು

ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವವರಿಗೆ ಸರ್ಕಾರ ಮಣೆ ಹಾಕ್ತಿರುವುದು ಎಷ್ಟು ಸರಿ, ಆದ್ದರಿಂದ ಕೂಡಲೇ ಸರ್ಕಾರ ಅವರಿಗೆ ಯಾವುದೇ ಕಾರಣಕ್ಕೂ ನಿಗಮ ಮಂಡಳಿ ಸ್ಥಾನವನ್ನು ನೀಡಬಾರದು ಎಂದು ಕಾಂಗ್ರೆಸ್ NSUIನ ಮಾಜಿ ಅಧ್ಯಕ್ಷ ವಿನಯ್ ಗೋಡೆಮನೆ ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನೂ ವಿಚಾರ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನೇ ವಿಚಾರಿಸಿದ್ರೆ, ಈಗಾಗಲೇ ಚುನಾವಣೆ ನಡೆದು ಎಂಟು ತಿಂಗಳುಗಳು ಕಳೆದು ಹೋಗಿದೆ. ಅಂದಿನಿಂದ‌ ಇಂದಿನವರೆಗೂ ಯಾವುದೇ ಹಾಲಿ, ಮಾಜಿ ಶಾಸಕರು ನನ್ನ ಗಮನಕ್ಕೆ ಸವಿತಾ ರಘು ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದರ ಕುರಿತು ಲಿಖಿತ ರೂಪದಲ್ಲಿ ದೂರು ನೀಡಿಲ್ಲ. 

ಜನಾರ್ದನ ರೆಡ್ಡಿ ಒಬ್ಬರೇ ಗೆದ್ದು ಸಾಧನೆ ಮಾಡಿದ್ದಾದರೂ ಏನು: ಸೋಮಶೇಖರ ರೆಡ್ಡಿ

ಹಾಗಾಗಿ ಈ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಮೇಲಾಗಿ ನಿಗಮ ಮಂಡಳಿ ನೇಮಕ ಮಾಡುವುದು ಪಕ್ಷದ ಅಧ್ಯಕ್ಷರು, ಹೈಕಮಾಂಡ್ ಹಾಗೂ ಸಿಎಂ ಬಿಟ್ಟ ವಿವೇಚನೆ, ಆದುದರಿಂದ ಆರೋಪ ಮಾಡಿರುವುದು ಅವರವರ ಅಭಿಪ್ರಾಯವಾಗಿದೆ. ಇದನ್ನು ಪಕ್ಷ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು. ಒಟ್ಟಾರೆಯಾಗಿ ಕೈ ಕಾರ್ಯಕರ್ತರಿಗೆ ನಿಗಮ ಮಂಡಳಿ ನೀಡಿ ಪಕ್ಷ ಸಂಘಟನೆಗೆ ಮಾಡುವ ಚಿಂತನೆ ನಡೆಸ್ತಿರೋ ಸರ್ಕಾರಕ್ಕೆ ಕೆಲ ಜಿಲ್ಲೆಗಳಲ್ಲಿ ವಿರೋಧ ವ್ಯಕ್ತವಾಗ್ತಿದ್ದು ಸರ್ಕಾರ ಯಾವ ರೀತಿ ನಿಭಾಯಿಸಲಿದೆ ಎಂಬುವುದೇ ಪ್ರಶ್ನೆಯಾಗಿದೆ.

click me!