ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾದರೆ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲಲೇಬೇಕು. ಹೀಗಾಗಿ ಬೀದರ್ ಲೋಕಸಭಾ ಕ್ಷೇತ್ರದಿಂದ ಒಳ್ಳೆಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಶಾಸಕ ಪ್ರಭು ಚವ್ಹಾಣ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡ ಘಟನೆ ಜರುಗಿತು.
ಬೀದರ್ (ಜ.30): ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಾದರೆ ರಾಜ್ಯದ 28ಕ್ಕೆ 28 ಸ್ಥಾನ ಗೆಲ್ಲಲೇಬೇಕು. ಹೀಗಾಗಿ ಬೀದರ್ ಲೋಕಸಭಾ ಕ್ಷೇತ್ರದಿಂದ ಒಳ್ಳೆಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಶಾಸಕ ಪ್ರಭು ಚವ್ಹಾಣ್ ಅವರು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡ ಘಟನೆ ಜರುಗಿತು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಬೀದರ್‌ಗೆ ಆಗಮಿಸಿದ ಬಿವೈ ವಿಜಯೇಂದ್ರ ಅವರಿಗೆ ಗಣೇಶ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಭು ಚವ್ಹಾಣ್ ಅವರು, ನಾವು ಇರುವದೇ ಕಾರ್ಯಕರ್ತರಿಂದ ಹೀಗಾಗಿ ಕಾರ್ಯಕರ್ತರಿಗೆ ಅನ್ಯಾಯ, ಧೋಖಾ ಮಾಡಬಾರದು. ನಮ್ಮ ಕಾರ್ಯಕರ್ತರು ತನುಮನ ಧನದಿಂದ ಕೆಲಸ ಮಾಡ್ತಾರೆ. ಕಾರ್ಯಕರ್ತರು ಫೋನ್ ಮಾಡಿದರೆ ಅವರ ಕರೆಯನ್ನು ಸ್ವೀಕರಿಸಬೇಕಲ್ಲವೇ ಆದರೆ, ನಮ್ಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವುದು ಎಷ್ಟು ಸೂಕ್ತ ಎಂದು ಪರೋಕ್ಷವಾಗಿ ಖೂಬಾ ವಿರುದ್ಧ ಗುಡುಗಿದರು.
ನಿತೀಶ್ ಕುಮಾರ್ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮತ್ತೊಮ್ಮೆ ಬೀದರ್ ಸಂಸದ ಸ್ಥಾನವನ್ನು ಮತ್ತೊಮ್ಮೆ ಗೆಲ್ಲಬೇಕಿದೆ ಅದಕ್ಕೆ ಸೂಕ್ತವಾದ ಉತ್ತಮ ವ್ಯಕ್ತಿಯನ್ನು ನೀಡಿದ್ದೆಯಾದಲ್ಲಿ ಭಾರಿ ಮತಗಳಿಂದ ಗೆಲ್ತೇವೆ, ಬೀದರ್ ಅಭಿವೃದ್ಧಿ ಆಗುತ್ತದೆ. ಇದಕ್ಕಾಗಿ ನಿಮಗೆ ನಾನು ಕೈಮುಗಿಯುತ್ತೇನೆ, ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ ಎಂದು ಹೇಳಿ ವೇದಿಕೆ ಮೇಲೆ ಕುಳಿತಿದ್ದ ಬಿವೈ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು.
ಭಾರತದ್ದು ವಿಶ್ವ ಶ್ರೇಷ್ಠ ಸಂವಿಧಾನ: ಲಿಂಗ, ವರ್ಗ, ಧರ್ಮ ಮತ್ತು ಜನಾಂಗೀಯ ಆಧಾರಿತ ಕಾನೂನು, ನಿಯಮಗಳಿಂದ ನೈಜ ಸ್ವಾತಂತ್ರ್ಯ ನೀಡಿರುವ ಭಾರತ ದೇಶದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ ಎಂದು ಮಾಜಿ ಸಚಿವ ಶಾಸಕ ಪ್ರಭು ಚವ್ಹಾಣ ಹೇಳಿದರು. ಎಲ್ಲ ಧರ್ಮಿಯರು ವಾಸಿಸುವ ಭಾರತ ದೇಶದ ವಿವಿಧತೆಯಲ್ಲಿ ಏಕತೆ ವಿಶೇಷತೆಯಾಗಿದೆ. ಸಂವಿಧಾನವು ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸಿದೆ. ಡಾ.ಬಿ.ಆರ್ ಅಂಬೇಡ್ಕರ್ ಮಹೋನ್ನತ ಉದ್ದೇಶಗಳೊಂದಿಗೆ ಸಂವಿಧಾನ ರಚಿಸಿದ್ದಾರೆ. ನಮ್ಮ ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕೆಂದರು.
ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸಿರುವ ಭಾರತದ ಸಂವಿಧಾನ ದೇಶದ ಆದರ್ಶಗಳಿಗೆ ಹಿಡಿದ ಕನ್ನಡಿ. ಶಿಕ್ಷಣ, ಆರೋಗ್ಯ, ಕೃಷಿ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. 13 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಿಸುವುದು, ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ₹84 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ಪಡೆದಿದ್ದು, ಶೀಘ್ರ ಕೆಲಸ ಆರಂಭಿಸಲಾಗುತ್ತದೆ ಎಂದರು.
ಧ್ವಜ ಇಳಿಸೋ ದುಸ್ಸಾಹಕ್ಕೆ ಮುಂದಾದ ಕಾಂಗ್ರೆಸ್ ನಡೆ ಖಂಡನೀಯ: ಬಿ.ವೈ.ವಿಜಯೇಂದ್ರ
ಹೊರಂಡಿ, ಚಿಂತಾಕಿ ಹಾಗೂ ಬಲ್ಲೂರನಲ್ಲಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ₹73 ಕೋಟಿ ವಿವಿಧ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕೆಲಸಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಔರಾದ್ ಪಟ್ಟಣದಲ್ಲಿ ಉದ್ಯಾನವನ ನಿರ್ಮಾಣವಾಗುತ್ತಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧ ಎಂದು ತಿಳಿಸಿದರು.