ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...!

By Suvarna News  |  First Published Dec 7, 2020, 10:47 PM IST

ಸುಧಾಕರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಇಂದು (ಸೋಮವಾರ) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದರು.


ಬೆಂಗಳೂರು, (ಡಿ.07):  ಬಿಜೆಪಿಗೆ ಸೇರ್ಪಡೆಯಾದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ನಿನ್ನೆ (ಭಾನುವಾರ) ಚಿಕ್ಕಬಳ್ಳಾಪುರದಲ್ಲಿಯೇ ಸೇರ್ಪಡೆಯಾಗಿದ್ದರು. ಇದೀಗ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ತೆರಳಿ ಸಿಎಂ ಬಿಎಸ್‌ವೈ ಅವರನ್ನ ಭೇಟಿ ಮಾಡಿದರು. 

Tap to resize

Latest Videos

ಕಾಂಗ್ರೆಸ್‌ಗೆ ಬಿಗ್ ಶಾಕ್: ರಾಜಕೀಯ ನಿವೃತ್ತಿ ಘೋಷಿಸಿದ ಕರ್ನಾಟಕದ ಕೈ ಹಿರಿಯ ನಾಯಕ

ಈ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕ ಎಂ.ರಾಜಣ್ಣ ಅವರನ್ನ ಸಿಎಂ ಯಡಿಯೂರಪ್ಪ ಅಭಿನಂದಿಸಿದರು. ಅಲ್ಲದೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವೆ ಮಾಡಿ ಪಕ್ಷ ಸಂಘಟನೆ ಮಾಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಅಬ್ಲೂಡು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್,ಕುಂದಲಗುರ್ಕಿ ಗ್ರಾಪಂ ಮಾಜಿ ಉಪಾಧ್ಯಕ್ಷ ಆಂಜಿನಪ್ಪ,ಯುವ ಮುಖಂಡ ಭರತ್ ಮತ್ತಿತರರು ಉಪಸ್ಥಿತರಿದ್ದರು.

click me!