ನಾನು ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದವನು. ಕೆಲ ಸಂದರ್ಭದಲ್ಲಿ ನಮ್ಮ ದುರಂಹಕಾರ ನಮಗೆ ತೊಂದರೆ ಕೊಟ್ಟಿತು. ನಾನು ಮಾಡಿದ ಒಂದು ತೀರ್ಮಾನ ನನಗೆ ಮುಳುವಾಯಿತು. ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದ ಮಾಜಿ ಸಚಿವ ವಿ.ಸೋಮಣ್ಣ
ತುಮಕೂರು(ಡಿ.07): ಹೈಕಮಾಂಡ್ ನ.30ರಂದು ಮಾತನಾಡುವಂತೆ ಟೈಮ್ ಕೊಟ್ಟಿತ್ತು. ಅಂದು ನಾನು ಹೋಗಿರಲಿಲ್ಲ. ಆಗಿರುವ ತಪ್ಪುಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸುವ ಚಿಂತನೆ ಮಾಡುತ್ತೋ ನೋಡೋಣ. ಹೈಕಮಾಂಡ್ ಚಿಂತನೆ ಆದ ಮೇಲೆ ಮುಂದಿನದ್ದನ್ನು ನೋಡೋಣ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದವನು. ಕೆಲ ಸಂದರ್ಭದಲ್ಲಿ ನಮ್ಮ ದುರಂಹಕಾರ ನಮಗೆ ತೊಂದರೆ ಕೊಟ್ಟಿತು. ನಾನು ಮಾಡಿದ ಒಂದು ತೀರ್ಮಾನ ನನಗೆ ಮುಳುವಾಯಿತು. ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ಇದೇ ವೇಳೆ ಡಿ.7-8ರಂದು ಹೈಕಮಾಂಡ್ ಭೇಟಿ ಕುರಿತು ತಾವು ಈ ಹಿಂದೆ ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ, ನೋಡೋಣ ಎಂದಷ್ಟೇ ಉತ್ತರಿಸಿದರು.
undefined
ಸಿದ್ದು ವಿರುದ್ಧ ಗೆದ್ದರೆ ಸಿಎಂ ಆಗ್ತೀನಿ ಅಂತ 2 ಕಡೆ ಸ್ಪರ್ಧೆಗೆ ಒಪ್ಪಿದ್ದ ಸೋಮಣ್ಣ: ರೇಣುಕಾಚಾರ್ಯ
ನಾಯಿ-ನರಿಗಳಿಂದ ವತ್ಯಾಸ:
45 ವರ್ಷ ಸಿದ್ಧಗಂಗಾ ಮಠದಲ್ಲಿ ತೊಡಗಿಸಿಕೊಂಡಿದ್ದೇನೆ. ಒಂದಲ್ಲ, ಎರಡಲ್ಲ ಹತ್ತಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಪಾರ್ಟಿ ಗೀಟಿ ಅನ್ನುವುದು ಈ ವೇಳೆ ನನ್ನ ತಲೆಯಲ್ಲೇ ಇರಲ್ಲ. ಇತ್ತೀಚಿನ ದಿನಗಳಲ್ಲಿ ನಾಯಿ, ನರಿಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಹೇಳುವ ಮೂಲಕ ತಮ್ಮ ಗುರುಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜಕೀಯ ಥಳಕು ಹಾಕಿಕೊಂಡಿರುವ ಕುರಿತು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಜತೆಗೆ ಗುರುಗಳ ಮುಂದೆ ಬಂದಿದ್ದೇನೆ, ನೋವು ತೋಡಿಕೊಂಡಿದ್ದೇನೆ ಎಂದ ಅವರು, ಸತ್ಯವನ್ನು ಯಾರೂ ಮರೆಮಾಚಲು ಆಗಲ್ಲ. ಎರಡ್ಮೂರು ದಿನ ಕಾಯಿರಿ, ಆ ಬಳಿಕ ಮುಂದಿನ ವಿಚಾರ ನೋಡೋಣ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಆಕಾಂಕ್ಷಿಗಳಲ್ಲಿ ತಳಮಳ: ಕಮಲ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ..?
ಪರಮೇಶ್ವರ್ ಅವರು ತಮ್ಮನ್ನು ಹೊಗಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ಅಧೈರ್ಯವಂತ ಆಗಿಲ್ಲ. ಪರಮೇಶ್ವರ್ ಜೊತೆಗೆ ನನಗೆ 50 ವರ್ಷದ ಸ್ನೇಹವಿದೆ. ಅವರು ನನ್ನ ಬಗ್ಗೆ ಮಾತನಾಡಿದ್ದಾರೆಂದರೆ ಅದು ಅವರ ದೊಡ್ಡತನ. ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧವೇ ಬೇರೆ ಎಂದರು.
ಪಕ್ಷದ ಕುರಿತು ಯತ್ನಾಳ್ ವ್ಯಕ್ತಪಡಿಸಿರುವ ಅಸಮಾಧಾನ ಕುರಿತ ಪ್ರಶ್ನೆಗೆ, ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ ಈಗ ನೇರವಾಗಿ ಹೇಳುವಂತಹವರು ಯಾರಿದ್ದಾರೆ? ಅವರ ನೋವನ್ನು ನೇರವಾಗಿ ತೋಡಿಕೊಂಡಿದ್ದಾರೆ. ಯತ್ನಾಳ್ ಅವರನ್ನು ಇತ್ತೀಚೆಗೆ ಭೇಟಿಯಾಗಿಲ್ಲ ಎಂದರು,