ಡಬಲ್‌ ಗೇಮ್‌ ಗೊತ್ತಿಲ್ಲ, ಕಾಲ ಬರಲಿ ಮಾತಾಡುವೆ: ಸೋಮಣ್ಣ

Published : Nov 17, 2023, 04:37 AM ISTUpdated : Nov 17, 2023, 12:29 PM IST
ಡಬಲ್‌ ಗೇಮ್‌ ಗೊತ್ತಿಲ್ಲ, ಕಾಲ ಬರಲಿ ಮಾತಾಡುವೆ: ಸೋಮಣ್ಣ

ಸಾರಾಂಶ

ನನಗೆ ನನ್ನದೇ ಆದ ಅನುಭವವಿದೆ. ನಾನು ಆಸೆಬುರುಕನಲ್ಲ. ನಾನು ನೇರವಾಗಿ ಮಾತನಾಡುವ ಸ್ವಭಾವದವನು. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ ಬಿಜೆಪಿ ನಾಯಕ ವಿ.ಸೋಮಣ್ಣ 

ಬೆಂಗಳೂರು(ನ.17):  ಕಾಲ ಕೂಡಿ ಬಂದಾಗ ನಾನು ಮಾತನಾಡುತ್ತೇನೆ. ನನಗೆ ಡಬಲ್ ಗೇಮ್‌ ಅಥವಾ ಡಬಲ್ ಸ್ಟ್ಯಾಂಡರ್ಡ್‌ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ.ಸೋಮಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಪದಗ್ರಹಣಕ್ಕೆ ಗೈರಾಗಿದ್ದ ಬೆನ್ನಲ್ಲೇ ಅವರ ಈ ಹೇಳಿಕೆ ಹೊರಬಿದ್ದಿದೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನನ್ನದೇ ಆದ ಅನುಭವವಿದೆ. ನಾನು ಆಸೆಬುರುಕನಲ್ಲ. ನಾನು ನೇರವಾಗಿ ಮಾತನಾಡುವ ಸ್ವಭಾವದವನು. ಕೆಲವೇ ದಿನಗಳಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಲೋಕಸಭಾ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ಆಯ್ಕೆಯಿಂದ ಮುನಿಸಿಕೊಂಡ ವಿ ಸೋಮಣ್ಣ, ತುಮಕೂರಿನಲ್ಲಿ ಶಕ್ತಿ ಪ್ರದರ್ಶನ!

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಸಿದ್ದಗಂಗಾ ಕ್ಷೇತ್ರ ಯಾವುದೋ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಇದ್ದರೂ ಮಠವನ್ನು ಬಳಸಿಕೊಳ್ಳುವುದಿಲ್ಲ. ಸಿದ್ದಗಂಗಾ ಮಠಕ್ಕೂ ಮತ್ತು ನನಗೂ ನಾಲ್ಕೈದು ದಶಕಗಳ ಸಂಬಂಧ. ಹಿಂದಿನ ಪೂಜ್ಯ ಶ್ರೀಗಳ ಅಣತಿಯಂತೆ ನಮ್ಮ ಕುಟುಂಬದ ವತಿಯಿಂದ ಸಿದ್ದಗಂಗಾ ಮಠದಲ್ಲಿ ಒಂದು ಸಣ್ಣ ಕಟ್ಟಡ ನಿರ್ಮಿಸಲಾಗಿದೆ. ಅದನ್ನು ಲೋಕಾರ್ಪಣೆ ಮಾಡಿ ಮಠಕ್ಕೆ ಹಸ್ತಾಂತರಿಸಲಾಗುವುದು. ಮೂರು ವರ್ಷಗಳ ಹಿಂದೆ ನಿರ್ಮಾಣ ಆರಂಭವಾಗಿತ್ತು. ಈಗ ಮುಗಿದಿದೆ. ಡಿ.6ರಂದು ಕಾರ್ಯಕ್ರಮ ಮಾಡಬೇಕು ಎಂಬುದನ್ನು ಎರಡು ತಿಂಗಳ ಹಿಂದೆಯೇ ತೀರ್ಮಾನಿಸಲಾಗಿತ್ತು. ಆ ಪ್ರಕಾರ ಸರಳ ಕಾರ್ಯಕ್ರಮ ನಡೆಸಲಾಗುವುದು ಅಷ್ಟೇ ಎಂದು ವಿವರಿಸಿದರು.

ಸ್ವಾಭಾವಿಕವಾಗಿ ಅಧಿಕಾರದಲ್ಲಿರುವವರನ್ನು ಕಾರ್ಯಕ್ರಮಕ್ಕೆ ಕರೆಸಲಾಗುತ್ತದೆ. ಆ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲೆಯ ಮತ್ತೊಬ್ಬ ಸಚಿವರಾದ ರಾಜಣ್ಣ, ಸ್ಥಳೀಯ ಶಾಸಕರಾದ ಸುರೇಶ್‌ಗೌಡ, ಜ್ಯೋತಿ ಗಣೇಶ್‌, ಸಂಸದ ಜಿ.ಎಸ್‌.ಬಸವರಾಜು, ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಆಹ್ವಾನಿಸಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ