ಕಾಂಗ್ರೆಸ್ಸಿಗೆ ಭಾರತ ಅಂದ್ರೆ ಅಸಹನೆ: ಸಿ.ಟಿ.ರವಿ

Published : Sep 08, 2023, 10:54 PM IST
ಕಾಂಗ್ರೆಸ್ಸಿಗೆ ಭಾರತ ಅಂದ್ರೆ ಅಸಹನೆ: ಸಿ.ಟಿ.ರವಿ

ಸಾರಾಂಶ

ಕಾಂಗ್ರೆಸ್ ತನ್ನ ಮೈತ್ರಿಕೂಟದ ಒಡಲಿನಲ್ಲಿ ಸನಾತನ ಧರ್ಮದ ವಿಷಬೀಜ ತುಂಬಿಕೊಂಡಿದೆ ಎಂದು ಕಾಂಗ್ರೆಸ್  ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕಾಂಗ್ರೆಸ್ ಮೈತ್ರಿಕೂಟ ತನ್ನ ಒಡಲಿನಲ್ಲಿ ಸನಾತನ ಧರ್ಮದ ವಿಷಬೀಜ ತುಂಬಿಕೊಂಡಿದೆ: ಸಿ.ಟಿ.ರವಿ  

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್‌ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.08): ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ‌.  ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಮೈತ್ರಿಯಾಗುವ ಬಗ್ಗೆ ಮಾಧ್ಯಮದಲ್ಲಿ ಬರುವ ಎಲ್ಲಾ ಸುದ್ದಿಗಳು ಅಧಿಕೃತ ಅಂತಾ ಈಗಲೇ ಮುದ್ರೆ ಒತ್ತಲು ಸಾಧ್ಯವಿಲ್ಲ, ನಮ್ಮ ವರಿಷ್ಠರು ಅಳೆದು-ತೂಗಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನೋದು ನಮ್ಮ ನಂಬಿಕೆಯಾಗಿದೆ. ಅಲ್ಲದೆ ಮತ್ತೊಂದೆಡೆ ಕಾಂಗ್ರೆಸ್‌ನಿಂದ ದೇಶಕ್ಕೆ ಒಳ್ಳೆಯದು ಆಗುತ್ತದೆ ಎನ್ನುವುದು ದೂರದ ಮಾತು. ಆದ್ದರಿಂದ ಮತ್ತೆ ಮೋದಿಯವರೇ ಪ್ರಧಾನಿಯಾಗಬೇಕು ಎಂದರು. ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ನಮ್ಮ ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ದೇಶಕ್ಕೆ ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿ ಆಗಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಅಪೇಕ್ಷೆಯಾಗಿದೆ ಎಂದರು. 

ಮೈತ್ರಿಕೂಟದ ಒಡಲಿನಲ್ಲಿ ಸನಾತನ ಧರ್ಮದ ವಿಷಬೀಜ:

ಕಾಂಗ್ರೆಸ್ ತನ್ನ ಮೈತ್ರಿಕೂಟದ ಒಡಲಿನಲ್ಲಿ ಸನಾತನ ಧರ್ಮದ ವಿಷಬೀಜ ತುಂಬಿಕೊಂಡಿದೆ ಎಂದು ಕಾಂಗ್ರೆಸ್  ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕಾಂಗ್ರೆಸ್ ಮೈತ್ರಿಕೂಟ ತನ್ನ ಒಡಲಿನಲ್ಲಿ ಸನಾತನ ಧರ್ಮದ ವಿಷಬೀಜ ತುಂಬಿಕೊಂಡಿದೆ. ಉದಯನಿಧಿ ಸ್ಟಾಲಿನ್, ಎ. ರಾಜ ಕೊಟ್ಟಿರುವ ಹೇಳಿಕೆಯನ್ನು ಅನೇಕ ಕಾಂಗ್ರೆಸಿಗರು ಸಮರ್ಥಿಸಿಕೊಂಡಿದ್ದಾರೆ. ಈಗ ಡ್ಯಾಮೇಜ್ ಆಗುತ್ತಿದೆ ಅಂತ ಗೊತ್ತಾಗಿ ದೂರ ಇರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಗಿರುವುದು ಸನಾತನ ಧರ್ಮದ ಮೇಲೆ ದ್ವೇಷ, ಭಾರತದ ಬಗ್ಗೆ ಅಸಹನೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲಾ ಬರಗಾಲ ಬರುವುದು ಸತ್ಯ: ಸಿ.ಟಿ.ರವಿ

ಎ. ಯೂ.ಹ್ಯೂಮ್...ಅಂಟಾನಿಯಾ ಮೈನೋ ಮಾನಸಿಕತೆಯಲ್ಲೇ ಕಾಂಗ್ರೆಸ್ 

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಹೆಸರಿಟ್ಟುಕೊಂಡು ಭಾರತದ ಮೇಲೆ ಅಸಹನೆ ಹೊಂದಿದೆ. ಲಾಲ್, ಬಾಲ್, ಪಾಲ್ ಮನೋಸ್ಥಿತಿಗೆ ಬಂದಿಲ್ಲ, ಗಾಂಧಿ, ಸರ್ದಾರ್ ವಲ್ಲಾಬಾಯಿ ಪಟೇಲ್ ಮಾನಸೀಕತೆಯಿಂದಲೂ ತುಂಬಾ ದೂರ ಇದ್ದಾರೆ. ಈಗ ಅವರದ್ದು ಎ... ಯೂ... ಹ್ಯೂಮ್... ಹಾಗೂ ಅಂಟಾನಿಯಾ ಮೈನೋ ಮಾನಸಿಕತೆಯಲ್ಲೇ ಕಾಂಗ್ರೆಸ್ ಪಕ್ಷವಿದೆ ಎಂದು ಕುಟುಕಿದ್ದಾರೆ. 

ಈ ರೀತಿಯ ಮಾನಸಿಕತೆ ಹೊಂದಿದವರಿಂದ ದೇಶಕ್ಕೆ ಒಳ್ಳೆಯದು ಆಗುವುದು ದೂರದ ಮಾತು. ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿರುವ ಪಕ್ಷವಾಗಿದ್ದು, ಪ್ರಜಾಪ್ರಭುತ್ವವನ್ನು ವಂಶ ಪಾರಂಪರ್ಯ ಅಂತ ಭಾವಿಸಿದೆ. ಜಾತ್ಯಾತೀತತೆ ಎಂದರೇ ಕಾಂಗ್ರೆಸ್ಸಿಗೆ ಜಾತಿಯನ್ನ ಎತ್ತಿ ಕಟ್ಟುವುದು ಎಂದು ಭಾವಿಸಿದೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ