ಬಿಜೆಪಿಗೆ ಎರಡೆರಡು ಬಂಡಾಯದ ಬಿಸಿ: ಕಾಂಗ್ರೆಸ್‌ ಸೇರಿದ ಕಮಲ ನಾಯಕ..!

By Kannadaprabha News  |  First Published Mar 20, 2024, 1:44 PM IST

ಸುಕುಮಾರ್‌ ಶೆಟ್ಟಿ ಅವರು ತನ್ನ ರಾಜಕೀಯ ಗುರು ಬಿಎಸ್‌ವೈ ವಿರುದ್ಧ ತೊಡೆ ತಟ್ಟಿದ್ದಾರೆ. ಹಿಂದಿನ ಮೂರು ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಭಾರಿ ಮುನ್ನಡೆ ನೀಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಸುಕಮಾರ್ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಬೈಂದೂರು(ಮಾ.20): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎರಡೆರಡು ಬಂಡಾಯದ ಬಿಸಿ ತಟ್ಟಲಿದೆ. ಅತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಎದ್ದಿದ್ದು, ಇತ್ತ ಬೈಂದೂರಿನಲ್ಲಿ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಸುಕುಮಾ‌ರ್ ಶೆಟ್ಟಿ ಬಿಜೆಪಿಗೆ ಬಿಸಿ ತುಪ್ಪವಾಗಿದ್ದಾರೆ.

ಸುಕುಮಾರ್‌ ಶೆಟ್ಟಿ ಅವರು ತನ್ನ ರಾಜಕೀಯ ಗುರು ಬಿಎಸ್‌ವೈ ವಿರುದ್ಧ ತೊಡೆ ತಟ್ಟಿದ್ದಾರೆ. ಹಿಂದಿನ ಮೂರು ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಭಾರಿ ಮುನ್ನಡೆ ನೀಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಸುಕಮಾರ್ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

Latest Videos

undefined

ಕೋಟಾ ಶ್ರೀನಿವಾಸ ಆಯ್ಕೆಯಿಂದ ನಾಲ್ಕು ಕ್ಷೇತ್ರ ಮೇಲೆ ಪ್ರಭಾವ; ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಕುಮಾರ ಶೆಟ್ಟಿ, ಈ ಹಿಂದೆ ಬೈಂದೂರಲ್ಲಿ ಭಾರಿ ಅಂತರದಿಂದ ರಾಘವೇಂದ್ರರನ್ನು ಗೆಲ್ಲಿಸಿದ್ದೇವೆ. ಕಳೆದ ಎರಡು ಚುನಾವಣೆಯಲ್ಲಿ 14 ಸಾವಿರ ಲೀಡ್ ಇತ್ತು, ಕಳೆದ ಬಾರಿ 75 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬಾರಿ ಬೈಂದೂರಿನಲ್ಲಿ 14 ಸಾವಿರಕ್ಕಿಂತ ಹೆಚ್ಚು ಮತ ಬಿಜೆಪಿಗೆ ಸಿಗಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿಲ್ಲ, ಚುನಾವಣೆ ನಡೆದು 9 ತಿಂಗಳಾದರೂ ನನ್ನನ್ನು ಯಾರು ಮಾತನಾಡಿಸಿಲ್ಲ. ಕಾಂಗ್ರೆಸ್‌ನವರು ಆಹ್ವಾನಿಸಿದರು, ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಮತ ಬೀಳುವಂತೆ ಮಾಡುತ್ತೇನೆ ಎಂದಿದ್ದಾರೆ. ಈಶ್ವರಪ್ಪ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಈಶ್ವರಪ್ಪ ಹಿಂದುತ್ವದ ಮತ ಪಡೆದರೆ ರಾಘವೇಂದ್ರ ಮೂರನೇ ಸ್ಥಾನಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದವರು ಹೇಳಿದ್ದಾರೆ.

click me!