ಬಂದೇ ಬಾರಿಗೆ ಸಿಎಂ, ಪಿಎಂನಿಂದ ರೈತರಿಗೆ ಭರ್ಜರಿ ಗಿಫ್ಟ್...!

By Suvarna News  |  First Published Aug 9, 2020, 4:24 PM IST

ಅತ್ತ ಪ್ರಧಾನಿ ನರೇಂದ್ರ ಮೋದಿ, ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿ ಇಬ್ಬರೂ ಒಂದೇ ಬಾರಿಗೆ ರೈತರಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.


ಬೆಂಗಳೂರು, (ಆ.09): ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ರೆ, ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರಾಜ್ಯದ ರೈತರ ಖಾತೆಗಳಿಗೆ ಹಣ ಜಮಾ ಮಾಡಿದ್ದಾರೆ. 

"

Tap to resize

Latest Videos

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ರಾಜ್ಯದ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಿ.ಎಂ.ಕಿಸಾನ್ ಯೋಜನೆಗಾಗಿ ನನ್ನ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದ 52.50 ಲಕ್ಷ ರೈತರ ಖಾತೆಗಳಿಗೆ 1049 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಇಂದು ಭಾನುವಾರ) ಜಮಾ ಮಾಡಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಹೊಸ ವರ್ಷಕ್ಕೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್

ರಾಜ್ಯದ ರೈತರ ಪರವಾಗಿ ಪ್ರಧಾನಿ ಶ್ರೀ ಯವರಿಗೆ ಪಿ.ಎಂ.ಕಿಸಾನ್ ಯೋಜನೆಗಾಗಿ ನನ್ನ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದ 52.50 ಲಕ್ಷ ರೈತರ ಖಾತೆಗಳಿಗೆ 1049 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಇಂದು ಜಮಾ ಮಾಡಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿದೆ. pic.twitter.com/pHGgnKxqDT

— CM of Karnataka (@CMofKarnataka)

ರಾಜ್ಯದ ಸುಮಾರು 52.50 ಲಕ್ಷ ಕೃಷಿ ಕುಟುಂಬಗಳಿಗೆ ಲಾಭದಾಯಕವಾಗಿರುವ ಈ ಯೋಜನೆಯಡಿ ಈ ವರ್ಷದ ಮೂರು ಕಂತುಗಳ ಮೊದಲ  ಕಂತಿನಲ್ಲಿ 1049 ಕೋಟಿ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಚಾಲನೆ
ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ  ಭಾನುವಾರ ಚಾಲನೆ ನೀಡಿದರು. ಇದೇ ವೇಳೆ 8.5 ಕೋಟಿ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯ 6ನೇ ಕಂತಿನ 17 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ, ಒಟ್ಟು 1 ಲಕ್ಷ ಕೋಟಿ ರೂ. ಯೋಜನೆಗೆ ಚಾಲನೆ ನೀಡಿದರು.

किसानों के कल्याण के लिए महत्वपूर्ण कदम। https://t.co/EypUIvrQKq

— Narendra Modi (@narendramodi)
click me!