ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಭಿನ್ನಮತ!

By Gowthami K  |  First Published Mar 26, 2023, 1:00 PM IST

 ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವರ್ತೂರು ಪ್ರಕಾಶ್ ಹಾಗೂ ಓಂ  ಶಕ್ತಿ ಚಲಪತಿ ಬಣದಿಂದ ಟಿಕೆಟ್ ಲಾಭಿ ನಡೆದಿದೆ.


ಕೋಲಾರ (ಮಾ.26): ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವರ್ತೂರು ಪ್ರಕಾಶ್ ಹಾಗೂ ಓಂ  ಶಕ್ತಿ ಚಲಪತಿ ಬಣದಿಂದ ಟಿಕೆಟ್ ಲಾಭಿ ನಡೆದಿದೆ. ಇಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಬಿ.ವೈ ವಿಜಯೇಂದ್ರ ಹಾಗೂ ತೇಜಸ್ವಿ ಸೂರ್ಯ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ  ವರ್ತೂರು ಪ್ರಕಾಶ್ ಹಾಗೂ ಓಂ ಶಕ್ತಿ ಚಲಪತಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಲಪತಿ ಇದ್ದರು. ಈ ಬಾರಿ  ವರ್ತೂರು ಪ್ರಕಾಶ್ ಬಿಜೆಪಿ ಗೆ ಸೇರ್ಪಡೆ ಆದ ಬಳಿಕ ಭಿನ್ನಮತ  ಸ್ಫೋಟಗೊಂಡಿದೆ. ಚುನಾವಣೆ ಸಮೀಪ ಆಗ್ತಿರೋದ್ರಿಂದ ಟಿಕೆಟ್ ಗಾಗಿ ಲಾಭಿ ನಡೆದಿದೆ. ಗಣ್ಯರನ್ನು ಸ್ವಾಗತ ಮಾಡಲು ಪ್ರತ್ಯೇಕವಾಗಿ ಎರಡು ಬಣದ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಕೋಲಾರ ಹೊರಹೊಲಯದ ಬಂಗಾರಪೇಟೆ ರಸ್ತೆಯಲ್ಲಿ  ಕಾರ್ಯಕರ್ತರು ಅಣ್ಣಾಮಲೈ, ಬಿ.ವೈ ವಿಜಯೇಂದ್ರ ಹಾಗೂ ತೇಜಸ್ವಿ ಸೂರ್ಯ ಆಗಮನಕ್ಕೆ ಕಾಯುತ್ತಿದ್ದಾರೆ.

 

Tap to resize

Latest Videos

click me!