ಜಾತಿಗಣತಿ: ಕಾಂಗ್ರೆಸ್‌ v/s ಬಿಜೆಪಿ ಫೈಟ್..!

By Kannadaprabha News  |  First Published Oct 8, 2023, 4:24 AM IST

ಜಾತಿಗಣತಿ ವಿಚಾರದಲ್ಲಿ ಸರ್ಕಾರ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. 2015-16ರಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆದೇಶ ಮಾಡಲಾಗಿತ್ತು. ಎಲ್ಲೂ ಜಾತಿ ಗಣತಿ ನಡೆಸುವಂತೆ ಆದೇಶ ನೀಡಿಲ್ಲ. ಆದರೆ ಈಗ ಅದನ್ನು ಜಾತಿ ಗಣತಿ ಎಂದು ಯಾಕೆ ಬಿಂಬಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಮೈಸೂರು/ಹುಬ್ಬಳ್ಳಿ(ಅ.08): ರಾಜ್ಯದಲ್ಲೀಗ ಜಾತಿ ಗಣತಿ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮತ್ತೊಂದು ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿದೆ. ಜಾತಿ ಗಣತಿಯ ಯೋಜನೆನ್ನು ರೂಪಿಸಲು ಪೂರಕವಾಗಿದೆ. ರಾಜ್ಯದಲ್ಲಿ ನವೆಂಬರ್‌ನಲ್ಲಿ ಜಾತಿಗಣತಿ ವರದಿ ಸರ್ಕಾರದ ಕೈಸೇರಲಿದ್ದು, ಆ ಬಳಿಕ ಈ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ, ರಾಜ್ಯದಲ್ಲಿ ಜಾತಿಗಣತಿಯೇ ಆಗಿಲ್ಲ, ಸರ್ಕಾರ ಈ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಜಾತಿ ಗಣತಿಗೆ ಆರಂಭದಿಂದಲೂ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ರೀತಿಯ ಗಣತಿ ಸಮಾಜಕ್ಕೆ ಮಾರಕವಲ್ಲ. ಯಾವ ಸಮುದಾಯ ಎಷ್ಟಿದೆ ಎಂಬ ಅಂಕಿ-ಅಂಶಗಳು ಸರ್ಕಾರಕ್ಕೆ ಬೇಕು. ಯೋಜನೆಗಳನ್ನು ಸಿದ್ಧಪಡಿಸಲು ಈ ರೀತಿಯ ಗಣತಿ ಅವಶ್ಯಕ ಎಂದು ಮೈಸೂರಿನಲ್ಲಿ ಸುದ್ದಿಗಾರರ ಮುಂದೆ ಶನಿವಾರ ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ರಾಜ್ಯದಲ್ಲಿ ಜಾತಿ ಗಣತಿ ವರದಿ ನವೆಂಬರ್‌ನಲ್ಲಿ ನನ್ನ ಕೈಸೇರುವ ನಿರೀಕ್ಷೆ ಇದ್ದು, ನಂತರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Tap to resize

Latest Videos

ಏಕೆ ಜಾತಿಗಣತಿ ದತ್ತಾಂಶ ಪ್ರಕಟಿಸಿದ್ದೀರಿ: ಬಿಹಾರಕ್ಕೆ ಸುಪ್ರೀಂ ಪ್ರಶ್ನೆ, ನೋಟಿಸ್ ಜಾರಿ

ಇದೇ ವೇಳೆ ಜಾತಿ ಗಣತಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿಯಿಂದ ಕೇಳಿಬರುತ್ತಿರುವ ವಿರೋಧ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಅವರು ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ ಎನ್ನುತ್ತಾರೆ. ಅವರ ನಡೆಗೂ ನುಡಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಅವರು ಜಾತಿ ಗಣತಿ ವಿರೋಧಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಹಿಂದೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ಜಾತಿಗಣತಿ ವರದಿ ನೀಡಲು ಹೋದಾಗ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಈಗ ಆಯೋಗದ ಅಧ್ಯಕ್ಷರು ಬದಲಾಗಿದ್ದಾರೆ. ಅವರು ಮುಂದಿನ ತಿಂಗಳು ವರದಿ ಕೊಡುವುದಾಗಿ ತಿಳಿಸಿದ್ದಾರೆಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಜಾತಿ ಗಣತಿ ಆಗೇ ಇಲ್ಲ: 

ನವೆಂಬರ್‌ನಲ್ಲಿ ಜಾತಿಗಣತಿ ವರದಿ ಕೈಸೇರಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದಲ್ಲಿ ಆಗಿರುವುದು ಆರ್ಥಿಕ, ಶೈಕ್ಷಣಿಕ ಸಮಿಕ್ಷೆಯೇ ಹೊರತು ಜಾತಿ ಗಣತಿ ಅಲ್ಲ. ನಮ್ಮಲ್ಲಿ ಜಾತಿ ಗಣತಿ ಬಗ್ಗೆ ಎಲ್ಲೂ ಚರ್ಚೆಯೇ ಆಗಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ನವೆಂಬರ್‌ನಲ್ಲಿ ಸಲ್ಲಿಕೆಯಾಗುತ್ತಿರುವುದು ಜಾತಿ ಗಣತಿಯೋ ಅಥವಾ ಶೈಕ್ಷಣಿಕ, ಆರ್ಥಿಕ ಗಣತಿಯೋ ಎಂಬುದರ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಾತಿಗಣತಿ ವಿಚಾರದಲ್ಲಿ ಸರ್ಕಾರ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. 2015-16ರಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆದೇಶ ಮಾಡಲಾಗಿತ್ತು. ಎಲ್ಲೂ ಜಾತಿ ಗಣತಿ ನಡೆಸುವಂತೆ ಆದೇಶ ನೀಡಿಲ್ಲ. ಆದರೆ ಈಗ ಅದನ್ನು ಜಾತಿ ಗಣತಿ ಎಂದು ಯಾಕೆ ಬಿಂಬಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯೋಜನೆ ರೂಪಿಸಲು ಜಾತಿಗಣತಿ ಸಹಕಾರಿ

ಜಾತಿಗಣತಿ ಸಮಾಜಕ್ಕೆ ಮಾರಕವಲ್ಲ. ಯಾವ ಸಮುದಾಯ ಎಷ್ಟಿದೆ ಎಂಬ ಅಂಕಿ-ಅಂಶಗಳು ಸರ್ಕಾರಕ್ಕೆ ಬೇಕು. ಯೋಜನೆಗಳನ್ನು ಸಿದ್ಧಪಡಿಸಲು ಈ ರೀತಿಯ ಗಣತಿ ಅವಶ್ಯಕ. ನವೆಂಬರಲ್ಲಿ ಜಾತಿಗಣತಿ ವರದಿ ಸರ್ಕಾರದ ಕೈಸೇರಲಿದೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಜಾತಿಗಣತಿಯಿಂದ ಮೀಸಲಾತಿ ಹೆಚ್ಚಳಕ್ಕೆ ಅನುಕೂಲ: ಗೃಹ ಸಚಿವ ಪರಮೇಶ್ವರ್‌

ಗಣತಿ ಯಾವುದೆಂದು ಸಿಎಂ ಸ್ಪಷ್ಟಪಡಿಸಲಿ

ರಾಜ್ಯದಲ್ಲಿ ಆಗಿರುವುದು ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯೇ ಹೊರತು ಜಾತಿ ಗಣತಿ ಅಲ್ಲ. ನಮ್ಮಲ್ಲಿ ಜಾತಿ ಗಣತಿ ಬಗ್ಗೆ ಎಲ್ಲೂ ಚರ್ಚೆ ಆಗಿರಲಿಲ್ಲ. ಹಾಗಾಗಿ, ನವೆಂಬರ್‌ನಲ್ಲಿ ಸಲ್ಲಿಕೆಯಾಗುತ್ತಿರುವುದು ಜಾತಿ ಗಣತಿಯೋ ಅಥವಾ ಶೈಕ್ಷಣಿಕ, ಆರ್ಥಿಕ ಗಣತಿಯೋ ಎಂಬ ಬಗ್ಗೆ ಸಿಎಂ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  

ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಜಾತಿಗಣತಿ: ಕಾಂಗ್ರೆಸ್‌

ಜೈಪುರ/ ರಾಯ್‌ಪುರ: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ಮುಂದಿನ ಚುನಾವಣೆಗೆ ಇದನ್ನೇ ಅಸ್ತ್ರವಾಗಿ ಬಳಸಲು ಉದ್ದೇಶಿಸಿರುವ ಕಾಂಗ್ರೆಸ್‌, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಾತಿ ಗಣತಿ ನಡೆಸುವ ಭರವಸೆ ನೀಡಿದೆ.

click me!