'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟಿದ್ದು ನೋವು ತಂದಿದೆ'

By Kannadaprabha News  |  First Published Apr 8, 2023, 10:35 PM IST

ಕಳೆದ 50 ವರ್ಷಗಳಲ್ಲಿ ಕಾಣದ ಬಾದಾಮಿ ಅಭಿವೃದ್ಧಿ ಕೇವಲ 4 ವರ್ಷ 8 ತಿಂಗಳ ಅಧಿಕಾರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಾದಾಮಿ ಶಾಸಕರಾಗಿ ಆಯ್ಕೆಯಾದ ಸಿದ್ದರಾಮಯ್ಯನವರು ಕೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತಂದು ಇಲ್ಲಿಯ ಜನತೆಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. 


ಬಾದಾಮಿ(ಏ.08): ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಾದಾಮಿ ಮತಕ್ಷೇತ್ರ ಅವರ ರಾಜಕೀಯ ಜೀವನಕ್ಕೆ ಮರುಜನ್ಮ ಕೊಟ್ಟಂತಹ ಕ್ಷೇತ್ರ. ಹೀಗಿದ್ದರೂ ಅವರು ಬಾದಾಮಿ ಬಿಟ್ಟು ಬೇರೆ ಕಡೆ ಸ್ಫರ್ಧೆ ಮಾಡುತ್ತಿರುವುದು ಬಾದಾಮಿ ತಾಲೂಕಿನ ಕ್ಷೇತ್ರದ ಜನತೆಗೆ ಬಹಳಷ್ಟು ನೋವುಂಟು ಮಾಡುತ್ತಿದೆ ಎಂದು ಬಾದಾಮಿ ತಾಲೂಕಿನ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶುಕ್ರವಾರ ನಗರದ ಅಕ್ಕಮಹಾದೇವಿ ಸಭಾಭವನದಲ್ಲಿ 2023ನೇ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಫರ್ಧಿಸಲು ಆಗ್ರಹಿಸಿ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 50 ವರ್ಷಗಳಲ್ಲಿ ಕಾಣದ ಬಾದಾಮಿ ಅಭಿವೃದ್ಧಿ ಕೇವಲ 4 ವರ್ಷ 8 ತಿಂಗಳ ಅಧಿಕಾರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಾದಾಮಿ ಶಾಸಕರಾಗಿ ಆಯ್ಕೆಯಾದ ಸಿದ್ದರಾಮಯ್ಯನವರು ಕೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತಂದು ಇಲ್ಲಿಯ ಜನತೆಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳ ರಸ್ತೆ ಮತ್ತು ವಿವಿಧ ಕಾಮಗಾರಿಗಳು ಸತತ 5 ವರ್ಷಗಳಕಾಲ ಮಲಪ್ರಭಾ ನದಿಯನ್ನು ಎಂದು ಭತ್ತದ ಹಾಗೆ ನೀರನ್ನು ಬಿಡಿಸಿದ್ದಾರೆ. ಈ ಭಾಗದ ಪ್ರತಿ ಒಬ್ಬ ರೈತರು ಅವರನ್ನು ಪಕ್ಷಾತೀತವಾಗಿ ಸ್ಮರಿಸುವಂತ ಸಾಕಷ್ಟುಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಮತ್ತೆ ಅವರು ಬಾದಾಮಿಯಿಂದ ಸ್ಫರ್ಧೆಮಾಡಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗ ಬೇಕು. ಆಗ ಬಾದಾಮಿ ಐತಿಹಾಸಿಕ ತಾಣ ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುವುದು ಈ ಭಾಗದ ಕ್ಷೇತ್ರದ ಜನತೆಯ ಒಕ್ಕೂರಲಿನ ಅಭಿಪ್ರಾಯವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರ ಹೇಳಿದರು.

Tap to resize

Latest Videos

undefined

ಕಾಂಗ್ರೆಸ್‌ ಟಿಕೆಟ್‌ ಫೈಟ್‌ಗೆ ಸ್ವಾಮೀಜಿಗಳ ಎಂಟ್ರಿ: ಉಮಾಶ್ರೀಗೆ ಟಿಕೆಟ್‌ ನೀಡದಂತೆ ಮಠಾಧೀಶರ ಒತ್ತಡ

ಮಾಜಿ ಜಿಪಂ ಉಪಾಧ್ಯಕ್ಷ ಪಿ.ಆರ್‌. ಗೌಡರ, ಎಂ.ಬಿ. ಹಂಗರಗಿ ಎಂ.ಡಿ. ಯಲಿಗಾರ ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ ಮಾತನಾಡಿ, ಅವರ ರಾಜಕೀಯ ಜೀವನ ಮುಗಿಯುವ ಸಂದರ್ಭದಲ್ಲಿ ಅವರಿಗೆ ಮರು ಜನ್ಮವನ್ನು ನೀಡಿದ ಕ್ಷೇತ್ರ ಬಾದಾಮಿ ಚಾಮುಂಡೇಶ್ವರಿ ಕೈ ಬಿಟ್ಟರು ಬಾದಾಮಿ ಬನಶಂಕರಿ ಚಾಲುಕ್ಯರ ಆರಾಧ್ಯ ದೇವತೆ ಅವರನ್ನು ಕೈ ಬಿಡಲ್ಲಿಲ್ಲ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯನವರು ಮತ್ತೆ ಬಾದಾಮಿಯಲ್ಲಿ ಸ್ಪರ್ಧೆಸಬೇಕು. ಇಲ್ಲಿರುವ ಮುಖಂಡರು ಮತ್ತು ಕಾರ‍್ಯಕರ್ತರು ಹಗಲಿರುಳು ಶ್ರಮಿಸಿ ಸಿದ್ದರಾಮಯ್ಯನವರನ್ನು ಈ ಬಾರಿ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅವರನ್ನು ಆರಿಸಿತರುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಶಶಿಕಾಂತ ಉದಗಟ್ಟಿ, ರೇವಣಸಿದ್ದಪ್ಪ ನೋಟಗಾರ, ಮದು ಯಡ್ರಾಮಿ, ರಂಗು ಗೌಡರ, ಯಮುನಾ ಹೊಸಗೌಡರ, ಹನಮಂತ ದೇವರಮನಿ, ಶಿವು ಮಣ್ಣೂರ, ಗುರುನಾಥ ಹುದ್ದಾರ, ಶಿವಪ್ಪ ಹನಮಸಾಗರ, ಯಮನಪ್ಪ ಶೆಟಗಾರ, ಮಹೇಶ ಪೂಜಾರ, ಚಂದ್ರಶೇಖರ ಚಿಂತಾಕಲ್‌, ಪ್ರವೀಣ ಜೋಗಿನ, ಬಸವರಾಜ ಬ್ಯಾಹಟ್ಟಿ, ಬಸವರಾಜ ಡೊಳ್ಳಿನ, ಸಿದ್ದನಗೌಡ ಗೌಡರ ಸೇರದಂತೆ ಇತರರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ 500ಕ್ಕೂ ಹೆಚ್ಚು ಕಾರ‍್ಯಕರ್ತರು ಭಾಗವಹಿಸಿದ್ದರು.

ನನ್ನನ್ನು ಸಿಎಂ ಮಾಡಲು ಅಧಿಕ ಮತದಿಂದ ಗೆಲ್ಲಿಸಿ: ಸಚಿವ ಮುರುಗೇಶ್‌ ನಿರಾಣಿ

ಸ್ಪರ್ಧೆಗಾಗಿ ರಸ್ತೆ ತಡೆ

ಸಭೆ ಮುಗಿದನಂತರ ಸಿದ್ದರಾಮಯ್ಯನವರ ಅಭಿಮಾನಿಗಳ ಸಂಘದವತಿಯಿಂದ ಸಿದ್ದರಾಮಯ್ಯನವರು ಬಾದಾಮಿಗೆ ಬರುವವರೆಗೆ ನಮ್ಮ ಹೋರಾಟವನ್ನು ಬಿಡುವುದಿಲ್ಲ ಎಂದು ಬಾದಾಮಿ ಕ್ಷೇತ್ರಕ್ಕೆ ಅವರು ಬೇಕೆ ಬೇಕು ಎಂದು ಅಕ್ಕಮಹಾದೇವಿ ಕಲ್ಯಾಣ ಮಂಟಮದಿಂದ ಫುಲಕೇಶಿ ವೃತ್ತದವರೆಗೆ ಸಿದ್ದರಾಮಯ್ಯನವರ ಪರ ಘೋಷಣೆಗಳನ್ನು ಕೂಗುತ್ತಾ ಸುಮಾರು ಅರ್ಧ ಗಂಟೆಗಳಕಾಲ ರಸ್ತೆ ತಡೆನ್ನು ನಡೆಸಿ ತಮ್ಮ ಹೋರಾಟವನ್ನು ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!