ಅಣ್ಣನನ್ನ ಸಿಎಂ ಮಾಡಬೇಕೆಂಬ ಆಸೆ ನನಗೂ ಇದೆ, ಆದ್ರೆ... ಮಾಜಿ ಸಂಸದ‌ ಡಿ.ಕೆ. ಸುರೇಶ್ ಹೇಳಿದ್ದೇನು?

Published : Oct 29, 2025, 11:43 AM IST
DK Suresh

ಸಾರಾಂಶ

ರಾಹುಲ್ ಗಾಂಧಿಯವರ ರಾಜ್ಯಕ್ಕೆ ಆಗಮನ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ. ಕಾಂಗ್ರೆಸ್ ಭನವಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ ಎಂದು ಮಾಜಿ ಸಂಸದ‌ ಡಿ.ಕೆ. ಸುರೇಶ್ ಹೇಳಿದರು.

ಬೆಂಗಳೂರು (ಅ.29): ರಾಹುಲ್ ಗಾಂಧಿಯವರ ರಾಜ್ಯಕ್ಕೆ ಆಗಮನ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ. ಕಾಂಗ್ರೆಸ್ ಭನವಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ ಎಂದು ಮಾಜಿ ಸಂಸದ‌ ಡಿ.ಕೆ. ಸುರೇಶ್ ಹೇಳಿದರು. ನಂತರ ಮಾತನಾಡಿದ ಅವರು, ನವೆಂಬರ್ 15ರ ಕ್ರಾಂತಿಯ ಬಗ್ಗೆ ಮಾಹಿತಿ ಇಲ್ಲ. ನವೆಂಬರ್ ಅಂದ್ರೆ ನನಗೆ ನೆನಪಾಗೋದು ಕನ್ನಡ ರಾಜ್ಯೋತ್ಸವ, ಅದ್ದೂರಿಯಾಗಿ ಮಾಡೋಣ. ಅಣ್ಣನನ್ನ ಸಿಎಂ ಮಾಡಬೇಕೆಂಬ ಆಸೆ ನನಗೂ ಇದೆ, ಅವರ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಎಂದರು.

95-98 ವಯಸ್ಸು ಆಗಿರುವವರೂ ಇನ್ನೂ ರಾಜಕೀಯದಲ್ಲಿ ಇದ್ದಾರೆ. ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದ್ರೆ ಒಳ್ಳೆಯದು. ರಾಜಣ್ಣ ಹಿರಿಯರಿದ್ದಾರೆ ಅವರ ಸಲಹೆ, ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸ್ತಾರೆ ಸ್ವಾಗತ. ಕಾಂಗ್ರೆಸ್ ಸರ್ಕಾರ 5 ವರ್ಷ ಇರಲಿ ಎಂದು ಜನತೆ 137 ಸ್ಥಾನ ನೀಡಿದ್ದಾರೆ ಎಂದರು. ಸದ್ಯದ ವಿದ್ಯಮಾನಗಳಿಂದ ಆಡಳಿತದ ಮೇಲೆ ಪರಿಣಾಮ ವಿಚಾರವಾಗಿ, ನನಗೆ ಆಡಳಿತ ಮಾಡಿ ಅನುಭವ ಇಲ್ಲ. ಎಲ್ಲಾ ಸಂದರ್ಭದಲ್ಲಿ ಎಲ್ಲರನ್ನೂ ಸಂತೋಷ ಪಡಿಸಲು ಆಗಲ್ಲ. ನಾನು ಯಾವಾಗಲೂ ಎಣ್ಣಿ ಮೈಗೂ ಹಚ್ಚಿಕೊಳಲ್ಲ, ಮೈಗೂ ಹಾಕೊಳಲ್ಲ‌ ಎಂದು ತಿಳಿಸಿದರು.

ಯಾರಿಗೂ ವಿರೋಧ ಇಲ್ಲ

ಹೆಚ್ಚುವರಿ ಡಿಸಿಎಂಗಳ‌ ನೇಮಕ ವಿಚಾರವಾಗಿ, ಎಲ್ಲರ ಸಲಹೆಗಳನ್ನು ಹೈಕಮಾಂಡ್ ಗಮನಿಸುತ್ತದೆ, ನನ್ನ ಅಭಿಪ್ರಾಯ ಮುಖ್ಯವಾಗೊದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಯಾರಿಗೂ ವಿರೋಧ ಇಲ್ಲ. ಆದರೆ ದೊಣ್ಣೆ ಹಿಡಿದು ಪಥಸಂಚಲನ ಮಾಡಿದ್ರೆ. ಇತರೆ ಸಮುದಾಯಗಳೂ ಅದೇ ರೀತಿ ಮಾಡಿದ್ರೆ? ಮೊದಲು ಚಡ್ಡಿ ಹಾಕಿಕೊಳ್ತಿದ್ರು, ಈಗ ಪ್ಯಾಂಟ್ ಹಾಕಿಕೊಳ್ತಿದ್ದಾರೆ ಎಂದರಲ್ಲದೇ ದಲಿತ ಸಿಎಂ ಚರ್ಚೆ ವಿಚಾರವಾಗಿ, ದಲಿತ ಸಿಎಂ ಚರ್ಚೆ ವಿಚಾರ ಸ್ವಾಗತ, ಸಮಾವೇಶ ಮಾಡೋದು ಒಳ್ಳೆಯದು ಎಂದು ಡಿ.ಕೆ. ಸುರೇಶ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ
ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ