ಆ ಪೋತಪ್ಪನಿಗೆ ಹೆದರೋ ಜಾಯಮಾನ ನನ್ನದಲ್ಲ: ಶಾಸಕ ಎಂ.ಚಂದ್ರಪ್ಪ ವಿರುದ್ಧ ಮಾಜಿ ಶಾಸಕ ತಿಪ್ಪಾರೆಡ್ಡಿ ವಾಗ್ದಾಳಿ

By Kannadaprabha News  |  First Published Mar 31, 2024, 12:55 PM IST

ಹಿಂದೆ ಕೆಟ್ಟದಾಗಿ ಬೈಯ್ದು ಮುಂದೆ ಕಾಲಿಗೆ ಮುಗಿಯುವ ಕೆಲಸ ಚಂದ್ರಪ್ಪನದು. ಇಂತಹ ಪೋತಪ್ಪನಾಯಕಗೆ ಹೆದರೋ ಜಾಯಮಾನ ನನ್ನದಲ್ಲವೆಂದು ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು. 


ಚಿತ್ರದುರ್ಗ (ಮಾ.31): ಹಿಂದೆ ಕೆಟ್ಟದಾಗಿ ಬೈಯ್ದು ಮುಂದೆ ಕಾಲಿಗೆ ಮುಗಿಯುವ ಕೆಲಸ ಚಂದ್ರಪ್ಪನದು. ಇಂತಹ ಪೋತಪ್ಪನಾಯಕಗೆ ಹೆದರೋ ಜಾಯಮಾನ ನನ್ನದಲ್ಲವೆಂದು ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚಂದ್ರಪ್ಪ ಅವರ ಏಕವಚನದಲ್ಲಿಯೇ ನಿಂದಿಸುತ್ತಾ ತೀವ್ರ ವಾಗ್ದಾಳಿ ಮಾಡಿದ ಅವರು, ಬಿಎಸ್ ವೈಗಿಂತ ದೊಡ್ಡ ವ್ಯಕ್ತಿ ನಿನ್ನೆ ಬೆಂಬಲಿಗರ ಸಭೆ ನಡೆಸಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನು ಮುಂದೆ ನಾನು ಅವನ ಬಗ್ಗೆ ಏಕವಚನದಲ್ಲಿ ಮಾತಾಡುತ್ತೇನೆ ಎಂದರು.

ಅವನಿಗಿಂತ ವಯಸ್ಸಿನಲ್ಲಿ ನಾನು ಹಿರಿಯ. ನಾನು ಶಾಸಕನಾದಾಗ ಅವನು ಚಳ್ಳಕೆರೆಯಲ್ಲಿ ನಿಕ್ಕರ್ ಹಾಕಿಕೊಳ್ಳುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ನಾನು ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಇಡೀ ಜಿಲ್ಲೆಯ ಪ್ರತಿ ಪ್ರದೇಶದ ಚಿತ್ರಣ ನನಗೆ ಗೊತ್ತಿದೆ. ವರಿಷ್ಠರು ಮಾಹಿತಿ ಕೇಳಿದಾಗ ನನ್ನ ಅಭಿಪ್ರಾಯ ಹೇಳಿದ್ದೇನೆ. ಈ ಪೋತಪ್ಪ ನಾಯಕನಿಗೆ ಹೆದರಿ ಸುಮ್ಮನಿರಲು ಆಗಲ್ಲ. ಮಗನಿಗೆ ಟೆಕೆಟ್ ತಪ್ಪಿತೆಂದು ಹೇಳಲು ಅವನೇನು ದೊಡ್ಡ ಲೀಡರ್ರಾ? ಎಂದು ಪ್ರಶ್ನಿಸಿದರು.

Tap to resize

Latest Videos

undefined

ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ: ನಿಖಿಲ್ ಕುಮಾರಸ್ವಾಮಿ

ಕೋಲಾರದಲ್ಲಿ ಜೆಡಿಎಸ್ ಜತೆ ನಮ್ಮ ಪಕ್ಷದ ಹೊಂದಾಣಿಕೆ ಆಗಿದೆ. ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ವರಿಷ್ಠರು ಗೋವಿಂದ ಕಾರಜೋಳಗೆ ಟಿಕೆಟ್ ನೀಡಿದ್ದಾರೆ.ಬಿಜೆಪಿಯಲ್ಲಿ ಈ ಹಿಂದೆಯೇ ರಘುಚಂದನ್ ಗೆ ಟಿಕೆಟ್ ಭರವಸೆ ನೀಡಿದ್ದರು ಎಂದಿದ್ದಾನೆ. ಕೋರ್‌ ಕಮಿಟಿ ಸಭೆ ನಡೆದಾಗ ನಾನು ಸಹ ಅಲ್ಲಿದ್ದೆ. ಕ್ಷೇತ್ರದಲ್ಲಿ ಮತಗಳ ಕಾಂಬಿನೇಷನ್ ಬಗ್ಗೆ ಹೇಳಿದ್ದೆ. ನನ್ನ ಪುತ್ರನಿಗೆ ಟಿಕೆಟ್ ಕೊಟ್ಟರೆ ಕೊಡಲಿ, ಇಲ್ಲ ಬಿಡಲಿ ಎಂದಿದ್ದ. ಈ ಬಗ್ಗೆ ಅವನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲಿ ಎಂದು ತಿಪ್ಪಾರೆಡ್ಡಿ ಹೇಳಿದರು.

ಬಿಎಸ್ ವೈಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೆನು ಎಂದು ಹೇಳಲು ಕಿಂಚಿತ್ತಾದರೂ ಅಳುಕು ಬೇಕು. ಪೋತಪ್ಪ ನಾಯಕಗೆ ಬಿಎಸ್‌ ವೈ ಕೆಎಸ್‌ಆರ್‌ಟಿಸಿ ಚೇರ್ಮನ್ ಹುದ್ದೆ ಕೊಟ್ಟಿದ್ದರು. ಅವಕಾಶ ಇಲ್ಲದಿದ್ದರೂ ಕಾರಿಗೆ ಸೈರನ್ ಹಾಕಿಕೊಂಡು ಓಡಾಡಿದ್ದ ಭೂಪ ಇವನು. ಬಿಎಸ್ ವೈ ಆಶೀರ್ವಾದದಿಂದ ಕೆಎಸ್ ಆರ್ ಟಿಸಿ ಚೇರ್ಮನ್ ಆಗಿದ್ದು ಮರೆತಿದ್ದಾನೆ ಎಂದರು. 1994ರಲ್ಲಿ‌ ಪಕ್ಷೇತರ ಶಾಸಕನಾಗಿ ಗೆದ್ದು ಗೃಹಮಂಡಳಿ ಅಧ್ಯಕ್ಷ ಆಗಿದ್ದೆ.ಎರಡನೇ ಸಲವು ಪಕ್ಷೇತರ ಶಾಸಕನಾಗಿ ಗೆದ್ದಿದ್ದೆ. ಈ ಪೋತಪ್ಪ ನಾಯಕ ತಿಪ್ಪಾರೆಡ್ಡಿಗೆ ಎಂಎಲ್ಸಿ ಮಾಡಿದ್ದೆ ಎಂದು ಹೇಳುತ್ತಾನೆ. ಬಿಜೆಪಿಯ ಯಾವುದೇ ಎಂಎಲ್‌ಸಿಗಳ ಕೇಳಲಿ. 

ಆತ ಎಂದಿಗೂ ಪಕ್ಷದ ಪರ ಚುನಾವಣೆ ಮಾಡಿಲ್ಲ. ಜಿಲ್ಲೆಯಲ್ಲಿ ಎಲ್ಲರೂ ಸೋತು ನಾನು ಗೆದ್ದರೆ ಮಂತ್ರಿ ಆಗುತ್ತೇನೆ ಎಂಬ ಭಾವನೆ ಅವನಲ್ಲಿದೆ ಎಂದು ತಿಪ್ಪಾರೆಡ್ಡಿ ದೂರಿದರು. ಈ ಪೋತಪ್ಪ ನಾಯಕನ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಚಿತ್ರದುರ್ಗದಲ್ಲಿ ಹಿಂದೆ ಇದ್ದ ಜನತಾ ಬಜಾರ್ ನಲ್ಲಿ ಅವರಿವರ ಕ ಕೈಕಾಲು ಹಿಡಿದು ಸಕ್ಕರೆ, ಸೀಮೆ ಎಣ್ಣೆ ತೂಗಲು ಸೇರಿಕೊಂಡಿದ್ದ. ಸೀಮೆ ಎಣ್ಣೆ ಹಂಚುತ್ತಿದ್ದೇನೆಂದು ಜನರ ಬಳಿ ಹೇಳಿಕೊಳ್ಳುತ್ತಿದ್ದ. 1979ರಲ್ಲಿ ಚಿತ್ರದುರ್ಗ ಪುರಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ. 2023ರ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಪರ ಕೆಲಸ ಮಾಡಿದ್ದ ಎಂದರು.

ಬೆಳಿಗ್ಗೆ ಪಟೇಲರ ಜಪ, ಸಂಜೆ ಗೌಡರ ನೆಪ: ಆತ ಸತ್ತರೆ 20 ಸಾವಿರ ಜನ, ನಾನು ಸತ್ತರೆ ನಾಲ್ಕು ಜನ ಸೇರಲ್ಲ ಎಂದಿದ್ದಾರೆ. ಈ ಟ್ರೈಲರ್ ಎಲ್ಲಿಂದ ನೋಡಲಿ. ದೊಡ್ಡ ಉಳ್ಳಾರ್ಥಿ ಸ್ವಗ್ರಾಮದಲ್ಲೇ ಅವನಿಗೆ ಯಾರೂ ಮಾತಾಡಿಸಲ್ಲ. ಹೊಳಲ್ಕೆರೆ ಬಿಜೆಪಿ ಪ್ರಭಾವವಿರುವ ಕ್ಷೇತ್ರ. ಅಲ್ಲಿ ಯಾರು ಸ್ಪರ್ಧಿಸಿದರೂ ಬಿಜೆಪಿ ಗೆಲ್ಲುತ್ತದೆ. ಈತನ ಬಗ್ಗೆ ಜೆ.ಎಚ್.ಪಟೇಲರು ಒಮ್ಮೆ ಹೇಳಿದ್ದರು. ಬೆಳಗ್ಗೆ ನನ್ನ ಬಳಿ ಬಂದು ನನಗೆ ತುಂಬಾ ಹೊಗಳುತ್ತಾನೆ, ಸಂಜೆ ದೇವೇಗೌಡರ ಬಳಿ ಹೋಗಿ ತೆಗಳುತ್ತಾನೆ ಎಂದಿದ್ದರು. ಪುತ್ರನಿಗೆ ಲೋಕಸಭೆ ಟಿಕೆಟ್‌ಗಾಗಿ ನನ್ನ ಜತೆ ಈತ ರಾಜಿಗೆ ಪ್ರಯತ್ನಿಸಿದ್ದನು. 

ಪ್ರಧಾನಿ ಮೋದಿ ಸಾಧನೆಯೇ ಬಿಜೆಪಿ ಗೆಲುವಿಗೆ ನಾಂದಿ: ಗೋವಿಂದ ಕಾರಜೋಳ

ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್‌ಗೆ ಹೇಳಿ ಕಳಿಸಿದ್ದ. ಜೋಗಿಮಟ್ಟಿಯಲ್ಲಿ ಪಾರ್ಟಿಗೆ ಸೇರೋಣ ಎಂದು ಕೂಡ ಹೇಳಿದ್ದ. ಆದರೆ ನಾನು ಭೇಟಿಗೆ ನಿರಾಕರಿಸಿ ವಾಪಸ್ಸುಕಳಿಸಿದ್ದೆ. ಬಿಜೆಪಿ ಕಚೇರಿ ಮೊಟ್ಟೆ, ಕಲ್ಲು ಹೊಡೆದರೆ ಮುಗಿಯಲ್ಲ. ನಾನು ಅವನಿಗಿಂತ ಎರಡು ಸಲ ಹೆಚ್ಚು ಗೆದ್ದಿದ್ದೇನೆ. ಎರಡು ಸಲ ಪಕ್ಷೇತರವಾಗಿ ಗೆದ್ದು ಶಾಸಕನಾಗಿದ್ದೇನೆ. ಲೋಕಸಭೆಗೆ ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಇದು ಆತನಿಗೆ ಗೊತ್ತೇ ಇಲ್ಲ. ರಾಜಕೀಯವಾಗಿ ಪಕ್ಷ ಸೋತರೂ ಪರವಾಗಿಲ್ಲ, ಪಕ್ಷ ವಿರೋಧಿಗಳ ವರಿಷ್ಠರು ಗಮನಿಸುತ್ತಾರೆ ಎಂದು ತಿಪ್ಪಾರೆಡ್ಡಿ ಹೇಳಿದರು.

click me!