ನಾವು ಬಿಜೆಪಿಗೆ ಬಂದಾಗ ಈಶ್ವರಪ್ಪ ಎಷ್ಟು ಕೋಟಿ ಕೊಟ್ಟಿದ್ದರು: ಮಾಜಿ ಸಚಿವ ಶಿವರಾಮ ಹೆಬ್ಬಾರ್‌

By Govindaraj SFirst Published Mar 4, 2024, 4:35 AM IST
Highlights

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು ಎಂಬುದನ್ನು ಹೇಳಬೇಕಾಗುತ್ತದೆ ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ್‌ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. 

ಶಿರಸಿ (ಉತ್ತರ ಕನ್ನಡ) (ಮಾ.04): ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು ಎಂಬುದನ್ನು ಹೇಳಬೇಕಾಗುತ್ತದೆ ಎಂದು ಮಾಜಿ ಸಚಿವ ಶಿವರಾಮ ಹೆಬ್ಬಾರ್‌ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ತಾಲೂಕಿನ ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಗೈರಾಗಲು ಕಾಂಗ್ರೆಸ್‌ನವರು ನನಗೆ ಹಣ ಕೊಟ್ಟರು ಎಂದು ಈಶ್ವರಪ್ಪ ಆರೋಪಿಸುವಾಗ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರಿಗೆ ಎಷ್ಟು ಹಣ ನೀಡಿದರು ಎಂಬುದನ್ನೂ ಪ್ರಶ್ನಿಸಬೇಕಾಗುತ್ತದೆ. 

ಬೇರೆ ರಾಜ್ಯದಲ್ಲಿ ಬಿಜೆಪಿ ಎಷ್ಟೆಷ್ಟು ಇನ್‌ವೆಸ್ಟ್‌ಮೆಂಟ್‌ ಮಾಡಿದೆ ಎಂಬುದನ್ನೂ ಹೇಳಬೇಕು. ಅಲ್ಲದೆ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು ಎಂಬುದನ್ನು ಹೇಳಬೇಕಾಗುತ್ತದೆ. ಈಶ್ವರಪ್ಪ ಗಾಜಿನ ಮನೆಯಲ್ಲಿ ಕೂತು ಇನ್ನೊಂದು ಇನ್ನೊಬ್ಬರ ಗಾಜಿಗೆ ಕಲ್ಲು ಹೊಡೆಯುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, ಇದು ಕೇವಲ ಮಾಧ್ಯಮ ಸೃಷ್ಟಿ ಎಂದು ಪ್ರತಿಕ್ರಿಯಿಸಿದರು.

ಪ್ರವಾಸೋದ್ಯಮ ನಿರೀಕ್ಷೆಯಂತೆ ಪ್ರಗತಿ ಕಂಡಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

ಬನವಾಸಿ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಅನುದಾನ: ಬನವಾಸಿ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಬನವಾಸಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ೨೦೨೧-೨೨ನೇ ಸಾಲಿನ ಜಲಜೀವನ ಮಿಷನ್ ಯೋಜನೆಯ ಮೂಲಕ ₹ ೬.೯೬ ಕೋಟಿ ವೆಚ್ಚದಲ್ಲಿ ಮಂಜೂರಾದ ಬನವಾಸಿ ಗ್ರಾಪಂ ಬಹುಗ್ರಾಮ ಕುಡಿಯುವ ನೀರಿನ ವರ್ಧನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.

ಶಾಶ್ವತ ನೀರಿನ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರೈತರು ದೇಶದ ಬೆನ್ನೆಲುಬು. ಕೃಷಿ ಜಮೀನಿಗೆ ನೀರು ಪೂರೈಕೆಯಾದರೆ ರೈತರು ಸಮೃದ್ಧಿಯಿಂದ ಇರುತ್ತಾರೆ. ಶಾಶ್ವತ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಾಂದಾರ್‌ ನಿರ್ಮಿಸಿ ರೈತರ ಗದ್ದೆಗಳಿಗೆ ನೀರು ನೀಡಲಾಗುತ್ತಿದೆ. ಹಳೆ ಯೋಜನೆಯ ಜತೆ ಹೊಸ ಯೋಜನೆ ಸೇರಿಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದರು. ಯೋಜನೆಯನ್ನು ₹ ೫.೯೬ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ೧೦ ಎಚ್‌ಪಿ ೨ ಪಂಪ್‌ಸೆಟ್, ೩ ಎಚ್‌ಪಿ ೨ ಪಂಪ್‌ಸೆಟ್, ೭೨೨೦ ಮೀಟರ್ ಪೈಪ್‌ಲೈನ್ ಅಳವಡಿಸಲಾಗುತ್ತದೆ. ೧೦ ಸಾವಿರ ಲೀಟರ್, ೨೦ ಸಾವಿರ ಲೀಟರ್, ೧೦ ಸಾವಿರ ಲೀಟರ್ ಹಾಗೂ ೫ ಸಾವಿರದ ೨ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತದೆ. 

ಹೋಟೆಲ್‌ ಸ್ಫೋಟಕ್ಕೆ ಸಿಎಂ, ಡಿಸಿಎಂ ನೇರ ಹೊಣೆಗಾರರು: ಪ್ರಲ್ಹಾದ್‌ ಜೋಶಿ

ಒಟ್ಟಾರೆ ಜನರಿಗೆ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು. ಇದೇ ವೇಳೆ ವಿಐಎನ್‌ಪಿ ಇನ್ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‌ನ ₹ ೨೦ ಲಕ್ಷ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ನಾಗಶ್ರೀ ಪ್ರೌಢಶಾಲೆಯ ನೂತನ ೨ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬನವಾಸಿಯಲ್ಲಿ ಕುಡಿಯುವ ನೀರಿನ ಜಾಕ್‌ವೆಲ್ ಉದ್ಘಾಟಿಸಿ, ಬಾಶಿಯ ಸರ್ಕಾರಿ ಪ್ರೌಢಶಾಲೆಯ ಕೊಠಡಿ ಲೋಕಾರ್ಪಣೆಗೊಳಿಸಿ, ಬಾಂದಾರು ಸಮೇತ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

click me!