ಬರಗಾಲ ಘೋಷಣೆಗೆ ಮೂಹೂರ್ತ ತೆಗೆಸುತ್ತಿದ್ದೀರಾ: ಕಾಂಗ್ರೆಸ್‌ ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ?

By Govindaraj SFirst Published Sep 9, 2023, 5:00 PM IST
Highlights

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪಕ್ಷದಿಂದ ಆರ್ಥಿಕ ಸಹಾಯ ಮಾಡಲು ನಿರ್ಣಯ ಮಾಡಿದ್ದೇವೆ. ರೈತ ವಿರೋದಿ ಜಡತ್ವ ಇರುವ ಸರಕಾರ ಇದು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶವನ್ನು ವ್ಯಕ್ತಪಡಿಸಿದರು. 

ಹಾವೇರಿ (ಸೆ.09): ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪಕ್ಷದಿಂದ ಆರ್ಥಿಕ ಸಹಾಯ ಮಾಡಲು ನಿರ್ಣಯ ಮಾಡಿದ್ದೇವೆ. ರೈತ ವಿರೋದಿ ಜಡತ್ವ ಇರುವ ಸರಕಾರ ಇದು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಜಿಲ್ಲೆಯ ಆಲದಕಟ್ಟಿಯಲ್ಲಿ ಮಾತನಾಡಿದ ಅವರು, ಮುಂಗಾರು ಮುಗಿಯಿತು ಇನ್ನೇನು ಸಹಾಯ ಮಾಡ್ತಾರೆ. ಡಿಸೆಂಬರ್‌ನಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗುತ್ತದೆ. ಬರಗಾಲ ಘೋಷಣೆ ಮಾಡಿದ್ರೆ ಪರಿಹಾರ ಕೊಡಬೇಕಾಗುತ್ತದೆ ಎಂದು ಮುಂದೆ ಹಾಕುತ್ತಿದ್ದಾರೆ. ಬರಗಾಲ ಘೋಷಣೆಗೆ ಮೂಹೂರ್ತ ತೆಗೆಸುತ್ತಿದ್ದೀರಾ ಎಂದು ಪ್ರಶ್ನೆ ಹಾಕಿದ್ದಾರೆ. 

ರೈತರ ಆತ್ಮಹತ್ಯೆ ವಿಚಾರವಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಎಫ್ ಎಸ್ ಎಲ್ ವರದಿ ಬರಲು ಬಹಳ ಸಮಯ ಹಿಡಿಯಲ್ಲ. ಕೂಡಲೆ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರ ಕೊಡಬೇಕು.ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಬಿಜೆಪಿ ನಾಯಕರು ಬೇಟಿ ನೀಡಬೇಕು ಎಂದು ಹೇಳಿದ್ದೇವೆ. ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಹೇಳಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್​ಗೆ ಜನಪ್ರಿಯತೆ ಇದೆ ಎಂಬ ಕಾರಣಕ್ಕೆ ಜೆಡಿಎಸ್-ಬಿಜೆಪಿಗೆ ಆತಂಕ: ಸಚಿವ ಬೈರೇಗೌಡ

ಪಟಾಕಿ ದುರಂತ ಬಹಳ ದುರ್ದೈವದ ಸಂಗತಿ. ದೊಡ್ಡ ಪ್ರಮಾಣದಲ್ಲಿ ಪಟಾಕಿ‌ ಸಂಗ್ರಹಿಸಿದ್ದು ತಪ್ಪು. ಈ ಸ್ಥಳಕ್ಕೆ ಲೈಸೆನ್ಸ್ ಇಲ್ಪ, ನಿರ್ವಹಣೆ ಮಾಡುವವರು ಸಹ ಬೇರೆ. ಹಲವಾರು ಲೋದೋಷಗಳು ಮೇಲ್ನೋಟಕ್ಕೆ ಕಾಣುತ್ತವೆ.  ಲೈಸೆನ್ಸ್ ಕೊಡುವಾಗ ಸರಿಯಾದ ಕ್ರಮ ಕೈಗೊಳ್ಳದಿದ್ರೆ ಇಂತಹ ಘಟನೆಗಳು ಆಗುತ್ತವೆ. ಒಂದು ಲಕ್ಷ ಪರಿಹಾರವನ್ನ ಬಿಜೆಪಿಯಿಂದ ನೀಡಲಾಗಿದೆ. ಆಡಳಿತದ ನಿರ್ಲಕ್ಷ್ಯ ಘಟನೆಗೆ ಕಾರಣ. ರಾಣೇಬೆನ್ನೂರು ಘಟನೆ ಸೂಕ್ತ ತನಿಖೆ ಆಗಬೇಕು, ಪರಿಹಾರ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. 

ರೈತಪರ ನೀತಿ ಇಟ್ಟುಕೊಳ್ಳಲಿ: ರೈತರು ಯಾವುದೇ ಪಕ್ಷಕ್ಕೂ ಸೇರಿಲ್ಲ ಆದರೆ, ಎಲ್ಲಾ ಪಕ್ಷಗಳು ರೈತರಿಗೆ ಸೇರಿವೆ ಎಂಬುವ ನೀತಿಯನ್ನಿಟ್ಟುಕೊಂಡು ರೈತ ಪರವಾಗಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನರಗದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಕಾವೇರಿ ಹೋರಾಟದಲ್ಲಿ ಬಿಜೆಪಿ ರೈತರ ಪರವಾಗಿ ನೀತಿಯನ್ನಿಟ್ಟುಕೊಂಡಿದೆ. ಮೇಕೆದಾಟು ಯೋಜನೆಗೂ ನಮ್ಮ ಹೋರಾಟ ಇರುತ್ತದೆ. 

ಸೂರ್ಯ-ಚಂದ್ರ, ಬೆಟ್ಟ-ಗುಡ್ಡ ಶಾಶ್ವತವೇ ಹೊರತು ಸನಾತನ ಧರ್ಮವಲ್ಲ: ನಟ ಚೇತನ್‌

ನೀರಿನ ಹೋರಾಟದಲ್ಲಿ ನಾವು ನಿಮ್ಮ ಪರವಾಗಿ ಸದಾ ಇರುತ್ತೇವೆ ಭಯಬೇಡ ಎಂದು ಭರವಸೆ ನೀಡಿದರು. ಮಾಜಿ ಸಚಿವ ಆರ್‌.ಅಶೋಕ್‌ ಮಾತನಾಡಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯವರು ಸದಾಕಾಲ ಕಾವೇರಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರೈತರ ಪರವಾಗಿ ದನಿ ಎತ್ತಿದ್ದಾರೆ, ನಮ್ಮ ಸರ್ಕಾರವಿದ್ದಾಗಲೂ ಸಹ ಈ ಸಮಿತಿಯ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ಮೈಷುಗರ್‌ ಬಗ್ಗೆಯೂ ಬೆಂಬಲ ನೀಡಿದ್ದೇವೆ, ಸೆ.12 ನಂತರವೂ ಸಹ ನೀರನ್ನು ಬಿಡಬಾರದು, ಮೇಕೆದಾಟು ಯೋಜನೆಯೇ ಸಮಸ್ಯೆಗೆ ಪರಿಹಾರವಾಗಿದೆ ಅದರ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌, ಉಮೇಶ್ ಇದ್ದರು.

click me!