ಬಿಜೆಪಿ ಸೋಲಿನ ಹೊಣೆ ಎಲ್ಲರೂ ಹೊರಬೇಕು: ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದೇನು?

By Kannadaprabha NewsFirst Published May 24, 2023, 11:15 AM IST
Highlights

ಬಿಜೆಪಿಯ ಸೋಲಿಗೆ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದು ಸರಿಯಲ್ಲ. ನಾವೆಲ್ಲರೂ ಸೋಲಿನ ಹೊಣೆ ಹೊರಬೇಕು ಎಂದು ಬಿಜೆಪಿಯ ನೂತನ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಬೆಂಗಳೂರು (ಮೇ.24): ಬಿಜೆಪಿಯ ಸೋಲಿಗೆ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದು ಸರಿಯಲ್ಲ. ನಾವೆಲ್ಲರೂ ಸೋಲಿನ ಹೊಣೆ ಹೊರಬೇಕು ಎಂದು ಬಿಜೆಪಿಯ ನೂತನ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇವಾಲಯ ವಿಧಾನಸೌಧಕ್ಕೆ ಮೊದಲ ಬಾರಿಗೆ ಶಾಸಕನಾಗಿ ಬಂದಿದ್ದೇನೆ. 

ಈ ದಿನ ತುಂಬಾ ಸಂತೋಷ ಹಾಗೂ ಹೆಮ್ಮೆ ಎನಿಸುತ್ತಿದೆ. ಈ ಅವಕಾಶ ಮಾಡಿಕೊಟ್ಟ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವರು ಮೆಚ್ಚುವ ರೀತಿ ಪ್ರಾಮಾಣಿಕವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು. 

40% ಕಮಿಷನ್ ತನಿಖೆ ನನ್ನಿಂದಲೇ ಆರಂಭವಾಗಲಿ: ಸಿಎಂ ಸಿದ್ದುಗೆ ಕೋಟಾ ಶ್ರೀನಿವಾಸ ಪೂಜಾರಿ ಸವಾಲು!

ರಾಜ್ಯದಲ್ಲಿ ಬಿಜೆಪಿ ಸೋಲಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ರೀತಿಯ ಚರ್ಚೆ ಮಾಡುವುದು ಸರಿಯಲ್ಲ. ಬಿಜೆಪಿ ಹಿನ್ನಡೆಗೆ ಸಾಕಷ್ಟುಕಾರಣಗಳಿವೆ. ಪಕ್ಷದ ಹಿರಿಯರಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂತೋಷ್‌ ಸೇರಿದಂತೆ ಹಿರಿಯರು ಕುಳಿತು ಚರ್ಚಿಸುತ್ತಿದ್ದಾರೆ. ಪಕ್ಷದ ಸೋಲಿಗೆ ಯಾರೋ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಾವೆಲ್ಲರೂ ಸೋಲಿನ ಹೊಣೆ ಹೊರಬೇಕು ಎಂದು ಹೇಳಿದರು.

ವಿಜಯೇಂದ್ರಗೆ ಸಿಎಂ ಶುಭ ಹಾರೈಕೆ: ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಬಿಜೆಪಿ ನೂತನ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ ಶುಭ ಹಾರೈಸಿದರು. ವಿಧಾನಸಭೆಯ ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ಮುಖಾಮುಖಿಯಾದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ಕಂಡ ಕೂಡಲೇ ವಿಜಯೇಂದ್ರ ನಮಸ್ಕರಿಸಿದರು. ಆಗ ಸಿದ್ದರಾಮಯ್ಯ ನಗುತ್ತಲೇ ಕೈ ಕುಲುಕಿ ಮಾತನಾಡಿದರು. ನೂತನ ಶಾಸಕರಾಗಿ ವಿಧಾನಸೌಧಕ್ಕೆ ಆಗಮಿಸಿದ ವಿಜಯೇಂದ್ರ ಅವರ ಭುಜತಟ್ಟಿಶುಭ ಕೋರಿದರು. 

82 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ! ಮುಂಗಾರು ತಡವಾದ್ರೆ ಬೆಂಗಳೂರಿಗೆ ಕಾದಿದೆ ಕಂಟಕ!

ಇದಕ್ಕೂ ಮುನ್ನ ವಿಧಾನಸೌಧಕ್ಕೆ ಪ್ರವೇಶಿಸುವ ಮುನ್ನ ಮೆಟ್ಟಿಲಿಗೆ ಬಾಗಿ ಕೈಮುಗಿದು ವಿಜಯೇಂದ್ರ ನಮಸ್ಕರಿಸಿದರು. ಈ ವೇಳೆ ಕಾಂಗ್ರೆಸ್‌ ಮುಖಂಡ ಯು.ಟಿ.ಖಾದರ್‌ ಸೇರಿದಂತೆ ಇತರೆ ಕಾಂಗ್ರೆಸ್‌ ನಾಯಕರು ಅಭಿನಂದಿಸಿದರು. ಸಿದ್ದರಾಮಯ್ಯ ಅವರು ವಿಜಯೇಂದ್ರ ಅವರನ್ನು ಉದ್ದೇಶಿಸಿ ಫಲಿತಾಂಶ ಬಂದ ಬಳಿಕ ಕರೆ ಮಾಡಿದ್ದೆ. ಆದರೆ, ನೀನು ಸಿಗಲಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಹೌದು ಸರ್‌, ಮತ್ತೆ ಕರೆ ಮಾಡುವುದಕ್ಕಿಂತ ನೇರವಾಗಿ ಭೇಟಿಯಾಗಿ ಮಾತನಾಡಿಸೋಣ ಎಂದು ಸುಮ್ಮನಾದೆ ಎಂದರು.

click me!