ಲೋಕಸಭಾ ಚುನಾವಣೆ ಬಳಿಕವೂ ಬಿಜೆಪಿ-ಜೆಡಿಎಸ್ ದೋಸ್ತಿ ಇರಲಿದೆ: ಎಚ್.ಡಿ.ದೇವೇಗೌಡ

Published : Mar 31, 2024, 08:01 AM IST
ಲೋಕಸಭಾ ಚುನಾವಣೆ ಬಳಿಕವೂ ಬಿಜೆಪಿ-ಜೆಡಿಎಸ್ ದೋಸ್ತಿ ಇರಲಿದೆ: ಎಚ್.ಡಿ.ದೇವೇಗೌಡ

ಸಾರಾಂಶ

ಲೋಕಸಭಾ ಚುನಾವಣೆ ಮುಗಿದ ಮೇಲೆಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ತುಮಕೂರು (ಮಾ.31): ಲೋಕಸಭಾ ಚುನಾವಣೆ ಮುಗಿದ ಮೇಲೆಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ ಚುನಾವಣೆ ಬಳಿಕವೂ ಈ ಸಂಬಂಧ ಕಾಪಾಡಿಕೊಂಡು ಹೋಗುವುದಾಗಿ ತಿಳಿಸಿದ ಅವರು ನಮ್ಮ ಬಾಂಧವ್ಯ ತಾತ್ಕಾಲಿಕವಲ್ಲ. ಈ ಬಾಂಧವ್ಯವನ್ನು ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.

ಇಡೀ ಹಿಂದೂಸ್ತಾನದಲ್ಲಿ ಕಾಂಗ್ರೆಸ್ ನಾಲ್ಕು ಕಡೆ ಇದೆ. ರಾಜಸ್ತಾನ್, ಮಧ್ಯ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಜೆಡಿಎಸ್ ಎಲ್ಲಿದೆ ಅಂತಾ ಪ್ರಶ್ನೆ ಮಾಡುತ್ತಾರೆ. ಅಲ್ಲದೇ ಕುಮಾರಸ್ವಾಮಿಗೆ ಅವರ ಮಗನನ್ನು ಗೆಲ್ಲಿಸುವುದಕ್ಕೆ ಆಗುವುದಿಲ್ಲ ಎನ್ನುತ್ತಾರೆ. ಕುಮಾರಸ್ವಾಮಿ ತಂದೆ ತುಮಕೂರಿನಲ್ಲಿ ನಿಂತಾಗ ಗೆಲ್ಲಿಸೋಕೆ ಆಗಿಲ್ಲ ಎನ್ನುವ ಮೂಲಕ 2019ರ ಸೋಲಿಗೆ ಕಾರಣ ಯಾರು ಅಂತ ಸೋಲಿನ ಪರಾಮರ್ಶೆ ಮಾಡಿದರು. ನಾನು ತುಮಕೂರಿನಲ್ಲಿ ನಿಂತಾಗ ಏನೇನು ಆಟ ಆಡಿದರು ಎಂದ ದೇವೇಗೌಡರು, ನಾನು ತುಮಕೂರಿನಲ್ಲಿ ಅರ್ಜಿ ಹಾಕಬೇಕು ಅಂತಾ ಇರಲಿಲ್ಲ. ಪಾರ್ಲಿಮೆಂಟ್ ಗೆ ನಿಲ್ಲುವುದಿಲ್ಲ ಅಂತ ಅಂತಾ ಖಂಡತುಂಡವಾಗಿ ಹೇಳಿದ್ದೆ. 

ಸೋಲಿನ ಭೀತಿಯಿಂದ ದೇವೇಗೌಡರಿಂದ ಪಕ್ಷಾತೀತ ಹೋರಾಟಕ್ಕೆ ಕರೆ: ಡಿ.ಕೆ.ಶಿವಕುಮಾರ್

ನನ್ನ ಮಂಡಿನೋವು ಇತ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜನ ಖರ್ಗೆ ಅವರ ಮುಂದೆ ಇನ್ಮುಂದೆ ಪಾರ್ಲಿಮೆಂಟ್ ನಲ್ಲಿ ನಿಲ್ಲಲ್ಲ ಅಂತ‌ ಹೇಳಿದ್ದೆ. ನನ್ನನ್ನು ನಿಲ್ಲಿಸೋದಕ್ಕೆ ಏನೇನು ಆಟ ಆಡಿದರು. ನಾನೇನು ಸೀಟು ಕೇಳಿದ್ದನಾ ಎಂದರು. ಮಧುಗಿರಿಯಲ್ಲಿ ಪರಮೇಶ್ವರ್ ಭಾಷಣ ನಡೀತಾ ಇತ್ತು. ಆಗ ರಾಜಣ್ಣ, ರೀ ದೇವೇಗೌಡರೇ ನೀವು ತುಮಕೂರಿಗೆ ಬಂದ ಕಾರಣವೇನು? ಎಂದು ಕೇಳುತ್ತಾರೆ. ಅಲ್ಲದೇ ನೀವು ಮುದ್ದಹನುಮೇಗೌಡರಿಗೆ ಅನ್ಯಾಯ ಮಾಡಿದ್ದೀರಿ, ಅವರಿಗೆ ಸ್ಥಾನ ಕಲ್ಪಿಸಿಕೊಡಬೇಕಾಗಿತ್ತು ಎಂದರು. ನನಗೆ ಏನು ಮಾತನಾಡಬೇಕು ಗೊತ್ತಾಗಲಿಲ್ಲ. ನನಗೆ ಮನಸಿಗೆ ಬಹಳ ನೋವಾಯ್ತು ಎಂದರು.

ಸಿದ್ದರಾಮಯ್ಯ ಅವರಿಗೆ ಅವರ ಸಮಾಜದ ಸಭೆಯಿತ್ತು. ಅಲ್ಲಿಗೆ ನಾನು ಸುರೇಶ್ ಬಾಬು ಹೋಗಿದ್ವಿ. ಹೋದ ತಕ್ಷಣ ಸಭೆ ನಿಲ್ಲಿಸಿ ಬಿಟ್ಟರು. ನನಗೆ ಬೇಜಾರ್ ಆಯ್ತು ವಾಪಸ್ ಬಂದೆ. ಪಾಪ ಪರಮೇಶ್ವರ್ ಅವರ ಗೆಸ್ಟ್ ಹೌಸ್ ಕೊಟ್ಟಿದ್ದರು. ರಾತ್ರಿ ಒಂದು ಗಂಟೆವರೆಗೂ ಚರ್ಚೆ ಆಯ್ತು. ದೇವೇಗೌ ಡರನ್ನು ತೆಗೆಯೋದು ಹೇಗೆ ಅಂತ. ಸಿದ್ರಾಮಣ್ಣ, ರಾಜಣ್ಣ, ಅವತ್ತು ಏನ್ ಮಾಡಿದ್ರಿ ನೀವು ಎಂದು ಪ್ರಶ್ನಿಸಿದರು. ನಾನು ರಾಜಕೀಯದಿಂದ ನಿವೃತ್ತಿ ಆಗುವ ಹೊತ್ತಿಗೆ ವಾಲ್ಮೀಕಿ ಸಮಾಜಕ್ಕೆ ಕಿಂಚಿತ್ತೂ ಸೇವೆ ಮಾಡಿದ್ದೀನಿ ಎಂದ ಅವರು ಆ ಮಹಾನುಭಾವರು ರಾಮಾಯಣ ಬರೆದಿದ್ದಾರೆ. ವಾಲ್ಮೀಕಿ ರಾಮಾಯಣಕ್ಕೆ ಸಮಾನವಾದ ಮತ್ತೊಂದು ಗ್ರಂಥವಿಲ್ಲಾ. ವಾಲ್ಮೀಕಿ ಸಮಾಜ ಶ್ರೇಷ್ಠವಾದ ಸಮಾಜ. ಆ ಮಹಾನುಭಾವರ ಸಮುದಾಯಕ್ಕೆ ಸೇರಿದವರು ನೀವು. ವಾಲ್ಮೀಕಿ ಸಮಾಜಕ್ಕೆ ಕೈ ಮುಗಿದು ಕೇಳುತ್ತೇನೆ ಈ ಬಾರಿ ರಾಜಣ್ಣನ ಮಾತನ್ನು ಕೇಳಬೇಡಿ ಎಂದರು.

ಜೆಡಿಎಸ್‌ ಎಲ್ಲಿ ಎಂದು ತೋರುವ ಶಕ್ತಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

ಇದೊಂದು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣನವರಿಗೇ ಬೆಂಬಲ ನೀಡಿ ನಾನು ಕೈಮುಗಿದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಕಾಂಗ್ರೆಸ್ ನಲ್ಲಿ ನಿಲ್ಲೋದಕ್ಕೆ ಅಭ್ಯರ್ಥಿಗಳಿಲ್ಲ, ಯಾರು ನಿಲ್ಲೋದಕ್ಕೂ ತಯಾರಿಲ್ಲ. ಅವತ್ತು ನನ್ನನ್ನ ಸೋಲಿಸೋದಕ್ಕೆ ಕಾರಣ ವ್ಯಕ್ತಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಅವನಿಗೆ ಟಿಕೆಟ್ ಕೊಟ್ಟು ನನಗೆ ಮುಖಭಂಗ ಮಾಡುತ್ತೀರಾ ಎಂದರು. ಈ ಚುನಾವಣೆಯಲ್ಲಿ ನನ್ನ ವಾಲ್ಮೀಕಿ ಸಮಾಜದವರು ನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ. ನಿಮಗೆ ಮೀಸಲಾತಿ ಕೊಟ್ಟೆ ನಾನು, ಒಕ್ಕಲಿಗರಿಗೆ ಕೊಡಲಿಲ್ಲ ನಾನೊಬ್ಬ ಹಳ್ಳಿಯ ರೈತನ ಮಗ ಎಂದರು. ನಾನು ಮಲಗುವುದಿಲ್ಲ ಇಡೀ ರಾಜ್ಯದಲ್ಲಿ ಒಡಾಡುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ