ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಭಯಂಕರ ಸೌಂಡ್ ಮಾಡುತ್ತೆ, ಜನರಿಂದ ಕಿತ್ತುಕೊಂಡಿದ್ದು ಮಾತ್ರ ಸೌಂಡ್‌ಲೆಸ್: ಸಿಟಿ ರವಿ

By Ravi Janekal  |  First Published Jun 15, 2023, 2:32 PM IST

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಹೇಗೆ ವಂಚಿಸುತ್ತಿದ್ದೆ ಎಂದರೆ ಅವರು ಕೊಟ್ಟಿದ್ದು ಭಯಂಕರ ಸೌಂಡ್ ಮಾಡುತ್ತದೆ. ಜನರಿಂದ ಕಿತ್ತುಕೊಂಡಿದ್ದು ಮಾತ್ರ ಸೌಂಡ್ ಲೆಸ್ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.


ಚಿಕ್ಕಮಗಳೂರು (ಜೂ.15) ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಹೇಗೆ ವಂಚಿಸುತ್ತಿದ್ದೆ ಎಂದರೆ ಅವರು ಕೊಟ್ಟಿದ್ದು ಭಯಂಕರ ಸೌಂಡ್ ಮಾಡುತ್ತದೆ. ಜನರಿಂದ ಕಿತ್ತುಕೊಂಡಿದ್ದು ಮಾತ್ರ ಸೌಂಡ್ ಲೆಸ್ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕಡೆ ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಭರ್ಜರಿ ಸೌಂಡ್ ಮಾಡುತ್ತಾ ವಿದ್ಯುತ್ ಶಕ್ತಿ ದರ ಏರಿಸಿದ್ದಾರೆ. ಕೊಟ್ಟಿದ್ದು ಭಯಂಕರ್ ಸೌಂಡ್ ಆದರೆ ಕಿತ್ತುಕೊಂಡಿದ್ದು ಸೌಂಡ್‌ಲೆಸ್ ಎಂದರು.

Tap to resize

Latest Videos

ಅದು ಕೆಇಆರ್‌ಸಿ ತೀರ್ಮಾನ ಹಿಂದೆಯೇ‌ ಆಗಿತ್ತು ಎಂದ್ರು. ಹಿಂದೆ-ಮುಂದೆ ನೋಡದೆ ಅಪ್ರುವಲ್ ಕೊಟ್ಟವರು ಇವರೇ. ಕೆಇಆರ್‌ಸಿ ಇಂತಹಾ ಪ್ರಸ್ತಾವನೆಯನ್ನ ಬಿಜೆಪಿ ಸರ್ಕಾರದ ಮುಂದಿಟ್ಟಿತ್ತು. ಆದರೆ  ಬಿಜೆಪಿ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ ಅದಕ್ಕೆ ಅನುಮತಿ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ. 

ಸಿದ್ದರಾಮಯ್ಯ 'ಸುಳ್ಳುರಾಮಯ್ಯ' ಅಲ್ಲಾ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ: ಸಿಟಿ ರವಿ ಸವಾಲು

ಇದೇ ವೇಳೆ ಸದ್ದಿಲ್ಲದೆ, ಎಲ್ಲಾ ಲಿಕ್ಕರ್ ಮೇಲೆ 20 ರೂಪಾಯಿ ಜಾಸ್ತಿ ಮಾಡಿದ್ದಾರೆ. ಅದಕ್ಕೂ ಕೇಂದ್ರ ಸರ್ಕಾರವೇ ಕಾರಣನಾ....? ಇನ್ನು ರಿಜಿಸ್ಟ್ರೇಷನ್ ಫೀಸ್, ಮೋಟಾರ್ ವೆಹಿಕಲ್ ಮೇಲಿನ ದರ ಹೆಚ್ಚಿಸಲು ಮುಂದಾಗಿದ್ದಾರಂತೆ. ಇವರು ಒಂದು ಕಡೆ ಕಿತ್ತಿಕೊಳ್ಳುವುದು,  ಮತ್ತೊಂದು ಕಡೆ ಕೊಟ್ಟಂತೆ ಮಾಡುವುದು ಜನರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

click me!