ಸದಾನಂದಗೌಡ್ರ ಆರೋಗ್ಯದಲ್ಲಿ ಏರುಪೇರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್..!

By Suvarna News  |  First Published Jan 3, 2021, 3:18 PM IST

ದಿಢೀರ್ ಅಸ್ವಸ್ಥಗೊಂಡು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.


ಚಿತ್ರದುರ್ಗ, (ಜ.03): ಆರೋಗ್ಯ ಸಮಸ್ಯೆಯಿಂದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

"

Tap to resize

Latest Videos

ನಗರದ ಖಾಸಗಿ ಹೋಟೆಲ್​ಗೆ ಬಂದಿದ್ದ ಸದಾನಂದಗೌಡ ಅವರಿಗೆ ದಿಢೀರ್ ಲೋ ಶುಗರ್ ಸಮಸ್ಯೆಯಾಗಿದೆ. ಇದರಿಂದ ಅಸ್ವಸ್ಥರಾದ ಅವರನ್ನು ತಕ್ಷಣ ಬಸವೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಆಸ್ಪತ್ರೆಯಲ್ಲಿ ಡಿವಿಎಸ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಸದಾನಂದಗೌಡರ ಆರೋಗ್ಯ ಸ್ಥಿತಿ ವಿಚಾರಿಸಿದರು.

ಬೆಂಗಳೂರಿಗೆ ಶಿಫ್ಟ್
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ  ಶಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ. ಜೀರೋ ಟ್ರಾಫಿಕ್ ಮೂಲಕ ಹೆಬ್ಬಾಳ ರಸ್ತೆಯಲ್ಲಿರುವ ಹಾಸ್ಟರ್ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ.

"

ಸದಾನಂದಗೌಡ್ರು ಕ್ಷೇಮ
ಸದಾನಂದಗೌಡರ ಭೇಟಿ‌ ಬಳಿಕ ಹೇಳಿಕೆ ನೀಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಎಂ. ಚಂದ್ರಪ್ಪ, ಆತಂಕ ಪಡುವ ಅಗತ್ಯ ಇಲ್ಲ, ಸದಾನಂದಗೌಡರು ಕ್ಷೇಮವಾಗಿದ್ದಾರೆ. ಲೋ ಶುಗರ್ ನಿಂದ ಅಸ್ವಸ್ಥರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಡಿವಿಎಸ್ ಜ್ಯೂಸ್ ಕುಡಿದಿದ್ದು ಮಾತಾಡುತ್ತಿದ್ದಾರೆ . ಬಸವೇಶ್ವರ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದು, ಆರೋಗ್ಯ ಸಹಜ ಸ್ಥಿತಿಗೆ ಬಂದಿದೆ. ಜ್ಯೂಸ್ ಕೂಡಾ ಕುಡಿದಿದ್ದಾರೆ. ಕುಟುಂಬದವರ ಜತೆಯೂ ಮಾತನಾಡಿದ್ದಾರೆ ಎಂದು ಮಾಹಿತಿ ನೀಡಿದರು.

click me!