ಅಂತರ್ಜಲ ವೃದ್ಧಿಯೇ ಎಚ್‌.ಎನ್ ವ್ಯಾಲಿ ಯೋಜನೆಯ ಉದ್ದೇಶ: ಸಚಿವ ಡಾ.ಎಂ.ಸಿ.ಸುಧಾಕರ್

Published : Mar 07, 2026, 07:24 PM IST
Dr MC Sudhakar

ಸಾರಾಂಶ

ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಚಿಕ್ಕಬಳ್ಳಾಪುರ (ಮಾ.07): ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ನಗರದ ಪ್ರಶಾಂತ್ ನಗರದಲ್ಲಿ ರಾಜ್ಯ ಪೊಲೀಸ್ ವಸತಿ ನಿಗಮದ ವತಿಯಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ವಸತಿ ಗೃಹ ಸಮುಚ್ಚಯದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, ಎಚ್.ಎನ್. ವ್ಯಾಲಿ ಹಾಗೂ ಕೆ.ಸಿ. ವ್ಯಾಲಿ ನೀರನ್ನು ದ್ವಿತೀಯ ಹಂತಕದಲ್ಲಿ ಶುದ್ಧೀಕರಣ ಮಾಡಲಾಗಿದೆ. ಈ ಯೋಜನೆಯ ಮೂಲ ಉದ್ದೇಶವೇ ಅಂತರ್ಜಲ ವೃದ್ಧಿಸುವುದು ಮತ್ತು ಕೆರೆಗಳನ್ನು ತುಂಬಿಸುವುದಾಗಿದೆ. ಅಂತರ್ಜಲ ವೃದ್ಧಿಯಾಗಲು ನೀರು ಶೇಖರಣೆ ಮಾಡುವುದು. ಆ ನೀರನ್ನು ನೇರವಾಗಿ ಕೃಷಿ ಚಟುವಟಿಕೆ ಮತ್ತು ಅನ್ಯ ಉದ್ದೇಶಗಳಿಗೆ ಉಪಯೋಗಿಸುವಂತಿಲ್ಲ ಎಂದರು.

ಅಂತರ್ಜಲ 1,800 ರಿಂದ 2,000 ಅಡಿವರೆಗೆ ಕುಸಿದಿದೆ. ನಮ್ಮ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಈ ನೀರು ಬಂದರೆ ಕೆರೆಗಳು ತುಂಬುತ್ತವೆ. ಭೂಮಿಯ ಪದರಗಳಲ್ಲಿ ಆ ನೀರು ಹಿಂಗಿ ಶುದ್ಧಗೊಂಡು, ಬೇರೆ ಕಡೆ ಹೋಗುತ್ತದೆ. ಯಾವ ಭಾಗಗಳಲ್ಲಿ ಎಚ್.ಎನ್ ಹಾಗೂ ಕೆ. ಸಿ ವ್ಯಾಲಿ ನೀರು ಬಂದಿದೆಯೊ ಅಂತಹ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಈ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ವರದಿಗಳನ್ನು ಕೊಡುತ್ತಿದ್ದಾರೆ ಎಂದರು.

ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೆರೆಗೆ ಎಚ್.ಎನ್. ವ್ಯಾಲಿ ನೀರು ಬರುತ್ತದೆ. ಅಲ್ಲಿ ಚಿಕ್ಕಬಳ್ಳಾಪುರ ನಗರದ ತ್ಯಾಜ್ಯ ನೀರು ಮಿಶ್ರಣವಾಗಿ ಗೋಪಾಲ ಕೃಷ್ಣ ಕೆರೆಗೆ ಬರುತ್ತಿದೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಡೆ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕಿದ್ದು, ಚಿಂತಾಮಣಿಯಲ್ಲಿ ಶೇ. 10ರಷ್ಟುಬಾಕಿ ಇದೆ. ಆದರೆ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ನಗರಗಳಲ್ಲಿ ಸಂಪೂರ್ಣವಾಗಿ ಒಳಚರಂಡಿ ವ್ಯೆವಸ್ಥೆ ಮತ್ತು ಶುದ್ಧೀಕರಣ ವ್ಯೆವಸ್ಥೆ ಇನ್ನಷ್ಟು ಆಗ ಬೇಕಿದೆ. ಗೌರಿಬಿದನೂರು ಮತ್ತು ಬಾಗೇಪಲ್ಲಿಗಳಲ್ಲಿ ಓಳ ಚರಂಡಿ ವ್ಯೆವಸ್ಥೆ ಮಾಡಲು ಪ್ರಸ್ತಾವನೆ ಇದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಆದರೆ ಜಿಲ್ಲೆಯ ಜನತೆಗೆ ಒಳ ಚರಂಡಿಯ ಬಗ್ಗೆ ಅವಗಾಹನೆಯನ್ನು ಸ್ಥಳೀಯ ಸಂಸ್ಥೆಗಳು ನೀಡ ಬೇಕಿದೆ ಎಂದರು.

ಜನತೆಗೆ ಹೋಗಿ ಬರಲು ಅನಾನುಕೂಲ

ಈ ಹಿಂದೆ 2007 ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆ ಮಾಡಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುಮ್ತಾಜ್ ಆಲಿ ಖಾನ್ ಅವರು ಜಿಲ್ಲಾಡಳಿತ ಭವನ, ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿಗಳನ್ನು ನಗರದಿಂದಾಚೆ ನಿರ್ಮಿಸಲು ತಯಾರಿ ನಡೆಸಿ ನಿರ್ಮಾಣ ಸಹಾ ಆಯಿತು. ಆದರೆ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿ ತುಂಭಾ ದೂರದಲ್ಲಿದ್ದು ಜನತೆಗೆ ಹೋಗಿ ಬರಲು ಅನಾನುಕೂಲವಾಗಿದೆ. ಇಂದು ಕನ್ನಡ ಭವನ ನಿರ್ಮಿಸಿರುವ ಜಾಗ ಮತ್ತು ಅಲ್ಲಿಂದ ರೈಲ್ವೆ ಹಳಿಯವರೆಗಿನ ಜಮೀನುಗಳನ್ನು ಸಾರ್ವಜನಿಕ ಕಚೇರಿಗಳಿಗಳಿಗೆ ಮೀಸಲಿಡಲು ಅಂದು ಸಚಿವರಲ್ಲಿ ನಾನು ಮನವಿ ಮಾಡಿದ್ದೆ, ಆದರೆ ಅವರು ಅದನ್ನು ಮಾಡಲಿಲ್ಲಾ . ಅಂದೇ ಮಾಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಇಂದು ನಗರದ ಸುತ್ತ ಎಲ್ಲಿಯೂ ಸರ್ಕಾರಿ ಜಾಗವೇ ಇಲ್ಲವಾಗಿದೆ ಎಂದರು.

ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ, ಎಎಸ್ ಪಿ ಜಗನ್ನಾಥರೈ, ಡಿವೈಎಸ್ ಪಿಗಳಾದ ಪ್ರಕಾಶ್, ನಾಗೆಂದ್ರ ಪ್ರಸಾದ್, ಪೋಲಿಸ್ ಹೌಸಿಂಗ್ ಕಾರ್ಪೊರೆಷನ್ ಕಾರ್ಯಪಾಲಕಅಭಿಯಂತರ ಗುರುದೇವ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ರಶ್ಮಿ, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ನಿರ್ಧೇಶಕ ಜೆಸಿಬಿ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಮುಖಂಡರಾದ ಮುರಳಿ, ಶಂಕರ್ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕನ್ನಡಿಗರ ಹಿತ ಕಾಯುವ ನಮ್ಮ ಬದ್ಧತೆಯಲ್ಲಿ ಯಾವುದೇ ರಾಜಿ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಸರ್ಕಾರ ಗಂಜಿ ಕೇಂದ್ರವಾಗಿದೆ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕೆ