ಆಂಜನೇಯನ ಜನ್ಮ ಸ್ಥಳದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡ್ಬೇಡಿ, ಕಂಗ್ರೆಸ್ ಮುಖಂಡ ಮನವಿ

By Suvarna News  |  First Published Apr 17, 2022, 5:31 PM IST

* ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಮುಸ್ಲಿಂರಿಗೆ ಟಿಕೇಟ್ ನೀಡಬೇಡಿ
* ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದೂಗಳಿಗೆ ಟಿಕೇಟ್ ನೀಡದಿದ್ದರೆ ಸೋಲು ಖಚಿತ
* ವರಿಷ್ಠರ ಮುಂದೆ ಅಳಲು ತೋಡಿಕೊಂಡ ಗಂಗಾವತಿ ಕಾಂಗ್ರೆಸ್ ಮುಖಂಡರು


ಕೊಪ್ಪಳ, (ಏ.17): ಹಿಜಾಬ್ ವಿಚಾರವಾಗಿ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಇದರ ಮದ್ಯೆ ಮುಸ್ಲಿಮರಿಗೆ ಟಿಕೇಟ್ ನೀಡಬೇಡಿ ಎಂದು ಕ್ರಾಂಗ್ರೆಸ್ ನಾಯಕರಿಗೆ ಮನವಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೇಟ್ ನೀಡಬೇಡಿ ಎಂದು ಇಲ್ಲಿನ ಕಾಂಗ್ರೆಸ್​ ಮುಖಂಡರು,  ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಮನವಿ ಮಾಡಿರುವ ಪ್ರಸಂಗ ನಡೆದಿದೆ. ಇದರಿಂದ ಕಾಂಗ್ರೆಸ್ ಟಿಕೆಟ್​ ನಿರೀಕ್ಷೆಯಲ್ಲಿರೋ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಬಿಗ್​ ಶಾಕ್ ಆಗಿದೆ. 

Tap to resize

Latest Videos

ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದುಗಳಿಗೆ ಟಿಕೆಟ್ ನೀಡದಿದ್ದರೆ ಸೋಲು ಖಚಿತ ಎಂಬುದು ಕಾಂಗ್ರೆಸ್​ ಮುಖಂಡರ ವಾದವಾಗಿದೆ. ಈ ವಿಚಾರವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮುಂದೆ ಪ್ರಸ್ತಾಪ ಮಾಡಿದ್ದು, ಇಕ್ಬಾಲ್ ಅನ್ಸಾರಿಗೆ ಇದು ಶಾಪವಾಗಿ ಪರಿಣಮಿಸಲಿದೆ.

ಕೋಲಾರ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಅಭ್ಯರ್ಥಿ ಬೇಡ, ಮುಸ್ಲಿಂ ಮುಖಂಡರಿಂದ ಮನವಿ

ಕಳೆದ ಕೆಲ‌ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಕೊಪ್ಪಳ ಕಾಂಗ್ರೆಸ್​‌ನಲ್ಲಿ ಮನೆಯೊಂದು ಮೂರು ಬಾಗಿಲು ಸ್ಥಿತಿ ನಿರ್ಮಾಣವಾಗಿದೆ. ಅಂಜನಾದ್ರಿಯನ್ನು ಅಯೋಧ್ಯೆಯಂತೆ ನಿರ್ಮಾಣ ಮಾಡಲಾಗ್ತಿದೆ. ಇಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ‌ಪರಿಸ್ಥಿತಿ ಇಲ್ಲ ಎಂದು ಬಿ.ಕೆ.ಹರಿಪ್ರಸಾದ್​ಗೆ ಕಾಂಗ್ರೆಸ್​ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ವೇಳೆ ಹರಿಪ್ರಸಾದ್ ಅವರು ಕಾಂಗ್ರೆಸ್​ನಲ್ಲೇ ಹಿಂದೂ-ಮುಸ್ಲಿಂ ‌ಎಂಬುದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ, ಮತ್ತೆ ಹರಿಪ್ರಸಾದ್ ಮುಂದೆ ಮುಖಂಡರು ನೋವು ತೋಡಿಕೊಂಡಿದ್ದಾರೆ. ನಮ್ಮನ್ನು ಸಿದ್ದರಾಮಯ್ಯ ಕೂಡ ಟಾರ್ಗೆಟ್ ಮಾಡಿದ್ರು. ಅಲ್ಲದೆ, ಇಕ್ಬಾಲ್ ‌ಅನ್ಸಾರಿ ಅವರು ಎಚ್.ಜಿ.ರಾಮುಲುರನ್ನು ಕಡೆಗಣಿಸಿದ್ರು ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ನಾಯಕ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಅವರು ದೂರು ನೀಡಿದ್ದಾರೆ.

ಎಚ್.ಆರ್.ಶ್ರೀನಾಥ್ ‌ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕೆಲ‌ ಮುಸ್ಲಿಂ ಮುಖಂಡರು ಕೂಡ ಎಚ್.ಆರ್.ಶ್ರೀನಾಥ ಪರ ಬ್ಯಾಟ್​ ಬೀಸಿದ್ದಾರೆ. ಆಂತರಿಕ ಸಭೆಯಲ್ಲಿ ನಡೆದ‌ ಚರ್ಚೆಯ ವಿಡಿಯೋ ಇದೀಗ ‌ವೈರಲ್ ಆಗಿದೆ. 

ಕೋಲಾರದಲ್ಲೂ ಮುಸ್ಲಿಮರಿಗೆ ಟಿಕೆಟ್ ಬೇಡ ಎಂದಿದ್ದ ಮುಖಂಡರು
ಕೋಲಾರದಲ್ಲೂ ಮುಸ್ಲಿಮರಿಗೆ ಟಿಕೆಟ್ ಕೊಡಬೇಡಿ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಈ ಹಿಂದೆ ಕೊಟ್ಟಿದ್ದರೂ ಗೆದ್ದಿಲ್ಲ. ಮುಸ್ಲಿಮರಿಗೆ ಟಿಕೆಟ್ ಕೊಡುತ್ತಿರುವುದಕ್ಕೆ ಕಾಂಗ್ರೆಸ್‌ಗೆ ಸೋಲಾಗುತ್ತಿದೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರೇ ಬಹಿರಂಗವಾಗಿಯೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. 

ಕೋಲಾರ ವಿಧಾನ ಸಭೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಆದ್ರೆ ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಳೆದ ಮೂವತ್ತು ವರ್ಷಗಳಿಂದ ಅಲ್ಪ ಸಂಖ್ಯಾತ  ಅಭ್ಯರ್ಥಿ ಗಳು ಗೆಲುವು ಕಾಣುತ್ತಿಲ್ಲ.ಆದ್ದರಿಂದ ನಮಗೆ ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಬೇಡ.ಬದಲಾಗಿ ಯಾರಾದ್ರು ಹಿಂದೂ ನಾಯಕರನ್ನೇ‌ ನೀಡಿ ಎಂದರು.

ನಮಗೆ‌ ಮುಸ್ಲಿಂ‌ ಅಭ್ಯರ್ಥಿ ಬೇಡ .ಕಾಂಗ್ರೆಸ್ ನಿಂದ ಸ್ಪರ್ಧಿ ಸಲು ಹಲವು ಮುಸ್ಲಿಂ ನಾಯಕರು ಮುಂದಾಗಿದ್ದಾರೆ. ಆದ್ರೆ ಪದೇ‌ಪದೇ ಸೋಲನ್ನೇ ಕಾಣುತಿದ್ದೇವೆ.ಇತ್ತೀಚೆಗೆ ಕ್ಷೇತ್ರಕ್ಕೆ ಬಂದ ಕೆಜಿಎಫ್ ಬಾಬು ಕೂಡ ಸಮಾಜ ಸೇವೆ ಮಾಡುವ ಮೂಲಕ‌ ರಾಜಕೀಯ ಪ್ರವೇಶ ಮಾಡುತಿದ್ದಾರೆ. ಆದ್ರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ಗೆಲುವು ಕಷ್ಟವಾಗಿದೆ .ಈ ಹಿಂದೆ ಅನೇಕ ಭಾರಿ ಇದು ಸಾಬೀತಾಗಿದೆ. ಹಾಗಾಗಿ ನಮಗೆ ಹಿಂದು ಸಮೂದಾಯದ ಅಭ್ಯರ್ಥಿಗಳು ಬೇಕು ಎಂದು ಸಮಾನ ಮನಸ್ಕರು ಒತ್ತಾಯಿಸಿದ್ದದಾರೆ.

click me!