* ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಲ್ಲಿ ಎಚ್‌ಡಿ ದೇವೇಗೌಡ್ರ ಮನವಿ
*ಮೇ 18ರಂದು ದೇವೆಗೌಡರ ಹುಟ್ಟುಹಬ್ಬ ಹಿನ್ನೆಲೆ..
*ಈ ಬಾರಿ ಹುಟ್ಟುಹಬ್ಬದ ಆಚರಣೆ ಮಾಡದಂತೆ ದೇವೆಗೌಡರ ಮನವಿ..
ಬೆಂಗಳೂರು, (ಮೇ.15): ರಾಜ್ಯದ ಜನರು ಮಹಾ ಮಾರಿ ಕೊರೋನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ತಮ್ಮ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಬಹಿರಂಗ ಪತ್ರ ಬರೆದು ಮನವಿ ಮಾಡಿರುವ ದೇವೇಗೌಡ, ಕೋವಿಡ್ ಸಂದರ್ಭದಲ್ಲಿ ನಾವು ಸಾಮಾಜಿಕ ಜವ್ದಾರಿ ಮತ್ತು ಮಾನವೀಯತೆ ತೋರಿಸಬೇಕು. ಮೇ 18ರಂದು ನನ್ನ ಹುಟ್ಟುಹಬ್ಬದಂದು ಹಾರ, ತುರಾಯಿ, ಕೇಕ್, ಸಿಹಿಗಾಗಿ ಅನಗತ್ಯ ದುಂದುವೆಚ್ಚ ಮಾಡುವ ಬದಲಿಗೆ ನಿಮ್ಮ ನಿಮ್ಮ ಭಾಗದ ಕೊರೋನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅವರ ಅಗತ್ಯಗಳ ಪೂರೈಕೆಗೆ ಬಳಸಿದರೆ, ಅದು ನಿಜಕ್ಕೂ ಸದುಪಯೋಗವಾಗಲಿದೆ ಎಂದಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪಗೆ ದೇವೆಗೌಡರ ಪತ್ರ : ತುರ್ತು ಪರಿಸ್ಥಿತಿ ಪ್ರಸ್ತಾಪ
ಇಂತಹ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ಅಭಿಮಾನಿಗಳ ಇಂತಹ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಮೇ 18ರಂದು ಅಭಿಮಾನಿಗಳು ಕಾರ್ಯಕರ್ತರು ಸಡಗರ, ಸಂಭ್ರಮದ ಕಾರ್ಯಕ್ರಮ ಹಮ್ಮಿಕೊಳ್ಳದೇ ರಾಜ್ಯದ ಜನರು ಕೊರೊನಾ ನೋವಿನಲ್ಲಿ ತತ್ತರಿಸುತ್ತಿರುವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನೀವು ಇದ್ದಲ್ಲಿಯೇ ನಿಮ್ಮ ಅಭಿಮಾನ, ಹಾರೈಕೆ ರೂಪದಲ್ಲಿ ವ್ಯಕ್ತವಾಗಲಿ ಎಂದು ಗೌಡರು ಮನವಿ ಮಾಡಿದ್ದಾರೆ.