ಸತೀಶ್ ಜಾರಕಿಹೊಳಿ Vs ಡಿಕೆ ಶಿವಕುಮಾರ ಬಣ ಬಡಿದಾಟ; ದುಬೈ ಟೂರ್ ಹೊರಟಿದ್ದ ಕೈ ಶಾಸಕ ಆಸೀಫ್ ಸೇಠ್ ಡಿಕೆಶಿ ಕ್ಲಾಸ್!

Published : Jan 20, 2025, 04:51 AM ISTUpdated : Jan 20, 2025, 04:53 AM IST
ಸತೀಶ್ ಜಾರಕಿಹೊಳಿ Vs ಡಿಕೆ ಶಿವಕುಮಾರ ಬಣ ಬಡಿದಾಟ; ದುಬೈ ಟೂರ್ ಹೊರಟಿದ್ದ ಕೈ ಶಾಸಕ ಆಸೀಫ್ ಸೇಠ್ ಡಿಕೆಶಿ ಕ್ಲಾಸ್!

ಸಾರಾಂಶ

ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರ ದುಬೈ ಟೂರ್ ಹೇಳಿಕೆಗೆ ಡಿಕೆ ಶಿವಕುಮಾರ್ ತರಾಟೆ ತೆಗೆದುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಭಾಗಿಯಾಗದ ಈ ಪ್ರವಾಸದ ಬಗ್ಗೆ ಆಸೀಫ್ ಸೇಠ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಬೆಳಗಾವಿ (ಜ.20) : ಶೀಘ್ರವೇ 15 ಜನ ಕಾಂಗ್ರೆಸ್‌ ಶಾಸಕರು ದುಬೈಗೆ ಟೂರ್ ಹೋಗುವುದಾಗಿ ಹೇಳಿಕೆ ನೀಡಿದ್ದಕ್ಕಾಗಿ ಶಾಸಕ ಆಸೀಫ್ ಸೇಠ್ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ್ದ ಬೆಳಗಾವಿ ಉತ್ತರ ಶಾಸಕ ಆಸೀಫ್‌ ಸೇಠ್‌, ಸ್ನೇಹಿತರು, ಆಪ್ತ ಶಾಸಕರೆಲ್ಲರೂ ಸೇರಿ ದುಬೈ ಪ್ರವಾಸ ಕೈಗೊಳ್ಳಲಿದ್ದೇವೆ. ಆದರೆ, ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಬರುವುದಿಲ್ಲ. ವಿಮಾನ ಟಿಕೆಟ್ ಬುಕ್ ಮಾಡುತ್ತಿದ್ದೇವೆ, ಬುಕ್ ಆದ ಬಳಿಕ ಪ್ರವಾಸ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಡಿಕೆಶಿ ನಡುವಿನ ಬಣ ಬಡಿದಾಟದ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ ಆಪ್ತ ಶಾಸಕ ಆಸೀಫ್‌ ಸೇಠ್‌ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

ಇದನ್ನೂ ಓದಿ: 'ಕಾಂಗ್ರೆಸ್ಸಿನ 60 ಶಾಸಕರು ಬಿಜೆಪಿ ಸೇರಲು ರೆಡಿ'; ಯತ್ನಾಳ್ ಸ್ಫೋಟಕ ಹೇಳಿಕೆಗೆ ಕೈ ಪಡೆಯಲ್ಲಿ ಶುರುವಾಯ್ತು ನಡುಕ!

ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಸಿಪಿಎಡ್‌ ಮೈದಾನದಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶದ ಸಿದ್ಧತೆ ಪರಿಶೀಲನೆ ವೇಳೆ ಆಸೀಫ್‌ ಸೇಠ್‌ರನ್ನು ಕರೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಡಿಕೆಶಿ, ಗನ್ ಮ್ಯಾನ್, ಪಿಎಗಳನ್ನು ವಾಹನದಿಂದ ಕೆಳಗಿಳಿಸಿ, ಸುಮಾರು 15 ನಿಮಿಷಗಳ ಕಾಲ ಕಾರಲ್ಲೇ ಚರ್ಚೆ ನಡೆಸಿದರು. ಈ ವೇಳೆ, ದುಬೈ ಟೂರ್‌ ಹೇಳಿಕೆ ನೀಡಿದ್ದಕ್ಕಾಗಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಡಿಕೆಶಿ ಜೊತೆಗಿನ ಮಾತುಕತೆ ಬಳಿಕ ಕಾರಿನಿಂದ ಹೊರ ಬಂದ ಆಸೀಫ್‌ ಸೇಠ್‌, ಇನ್ನೊಮ್ಮೆ ಈ ರೀತಿ ಮಾತನಾಡಲ್ಲ ಎಂದು ಹೇಳಿ ಮುನ್ನಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ