ಬರೀ ಒಳ ಉಡುಪು ಧರಿಸಿ ದಾಖಲೆಗೆ ಸಹಿ ಮಾಡಿದ ಎಎಪಿ ಶಾಸಕ! ಕೆಂಡ ಕಾರಿದ ಸಿಎಂ ರೇಖಾ ಗುಪ್ತಾ

Published : Aug 11, 2026, 03:22 PM IST
Aam Aadmi Party

ಸಾರಾಂಶ

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಝಾ ವತ್ಸ್ ಅವರ ವಿಡಿಯೋ ವೈರಲ್‌ ಆಗ್ತಿದ್ದಂತೆ ದೆಹಲಿ ಸಿಎಂ ರೇಖಾ ಗುಪ್ತಾ ಕೋಪಗೊಂಡಿದ್ದಾರೆ. ಶಾಸಕರಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಲ್ಲದೆ, ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಮನವಿ ಮಾಡಿದ್ದಾರೆ.

ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಝಾ ವತ್ಸ್ ಅವರ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಅವರು ಬರೀ ಒಳುಡುಪು ಧರಿಸಿ ಸಾರ್ವಜನಿಕರ ಸೇವೆ ಮಾಡ್ತಿದ್ದಾರೆ. ದಾಖಲೆಗಳಿಗೆ ಸಹಿ ಹಾಕ್ತಿದ್ದಾರೆ. ಒಳ ಉಡುಪು ಹಾಗೂ ಬನಿಯನ್‌ ಧರಿಸಿರುವ ಅವರ ವಿಡಿಯೋ ವೈರಲ್‌ ಆಗ್ತಿದ್ದಂತೆ ಸಿಎಂ ರೇಖಾ ಗುಪ್ತಾ ಕೋಪಗೊಂಡಿದ್ದಾರೆ.

ಖಡಕ್‌ ವಾರ್ನಿಂಗ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶಾಸಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ರೇಖಾ ಗುಪ್ತಾ, ಶಾಸಕರ ವರ್ತನೆ ನಾಚಿಕೆಗೇಡಿತನದ್ದು ಎಂದು ಟೀಕಿಸಿದ್ದಾರೆ. ಮಹಿಳೆಯರು ತಮ್ಮ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳಲು ನಿಮ್ಮ ಬಳಿ ಬಂದಾಗ, ಕನಿಷ್ಠ ಸರಿಯಾಗಿ ಬಟ್ಟೆ ಧರಿಸಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಅನಿಲ್ ವತ್ಸ್ ಅವರು ಬನಿಯನ್ ಮತ್ತು ಶಾರ್ಟ್ಸ್ ಧರಿಸಿ ಕುರ್ಚಿಯ ಮೇಲೆ ಕುಳಿತಿರುವುದು ಕಾಣಿಸುತ್ತದೆ. ಅವರ ಮಡಿಲಲ್ಲಿ ಕೇಸರಿ ಬಣ್ಣದ ಬಟ್ಟೆಯೊಂದಿದೆ. ದೆಹಲಿ ಸರ್ಕಾರದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಸಂಬಂಧಿಸಿದ ಅರ್ಜಿ ಫಾರ್ಮ್ಗಳಿಗೆ ಅವರು ಸಹಿ ಮಾಡುತ್ತಿದ್ದಾಗ ಈ ವಿಡಿಯೋ ತೆಗೆಯಲಾಗಿದೆ. ಅನಿಲ್ ಝಾ ವತ್ಸ್ ಅವರು ದೆಹಲಿಯ ಕಿರಾಡಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದಾರೆ.

ಶಾಸಕ ಸ್ಥಾನದಿಂದ ವಜಾಕ್ಕೆ ಆಗ್ರಹ

ವೈರಲ್ ವಿಡಿಯೋ ಕುರಿತು ಸಿಎಂ ರೇಖಾ ಗುಪ್ತಾ ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ. ಅನಿಲ್ ವತ್ಸ್ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಧಾನಸಭಾ ಅಧಿವೇಶನದ ವೇಳೆ ಶಾಸಕರು ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ ಎಂಬ ಸಿಎಂ ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆದರೆ ಸಿಎಂ ಆರೋಪವನ್ನು ಅನಿಲ್ ವತ್ಸ್ ತಳ್ಳಿಹಾಕಿದ್ದಾರೆ. ತಾವು ಯಾವುದೇ ಅಶ್ಲೀಲ ಸನ್ನೆ ಮಾಡಿರುವ ವಿಡಿಯೋ ಇದ್ದರೆ ಅದನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ಉತ್ತರ ನೀಡಲು ಅವರ ಬಳಿ ಏನೂ ಇಲ್ಲ. ಹಾಗಾಗಿ ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅನಿಲ್ ವತ್ಸ್ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಡದಿ ಪಾದಯಾತ್ರೆ ಮಾಡಿದ ನಿಖಿಲ್ ಕುಮಾರಸ್ವಾಮಿ ರಾತ್ರಿ ಎಲ್ಲಿ ಮಲಗಿದ್ರು?- ಸಚಿವ ಬಾಲಕೃಷ್ಣ ಪ್ರಶ್ನೆ!
ರಾಹುಲ್​ ಗಾಂಧಿ ಬೋಟ್​ ವಿಹಾರ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ: ಈ ಮಹಿಳೆ, ಮಗು ಯಾರು ಗೊತ್ತಾ