ಮನೋಜ್ ತಿವಾರಿಗೆ ರಜೆ, ಟ್ಯೂಷನ್‌ ಮಾಸ್ಟರ್‌ಗೆ ದೆಹಲಿ ಬಿಜೆಪಿ ಗದ್ದುಗೆ!

By Suvarna NewsFirst Published Jun 2, 2020, 5:13 PM IST
Highlights

ದೆಹಲಿ ಬಿಜೆಪಿಗೆ ನೂತನ ಅಧ್ಯಕ್ಷ| ಮನೋಜ್‌ ತಿವಾರಿಗೆ ರಜೆ, ಆದೇಶ್‌ ಗುಪ್ತಾಗೆ ಜವಾಬ್ದಾರಿ| ಯಾರು ಈ ಆದೇಶ್ ಗುಪ್ತಾ? ಇಲ್ಲಿದೆ ವಿವರ

ನವದೆಹಲಿ(ಜೂ.02): ಬಿಜೆಪಿ ಸಂಸದ ಮನೋಜ್‌ ತಿವಾರಿಯನ್ನು ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದು, ಈ ಸ್ಥಾನಕ್ಕೆ ಆದೇಶ್ ಗುಪ್ತಾರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.  ದೆಹಲಿ ಬಿಜೆಪಿಯಲ್ಲಿ ಮಂಗಳವಾರ ಬಹುದೊಡ್ಡ ಬದಲಾವಣೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮನೋಜ್ ತಿವಾರಿ ಸ್ಥಾನಕ್ಕೆ, ಆದೇಶ್ ಗುಪ್ತಾರಿಗೆ ಈ ಜವಾಬ್ದಾರಿ ವಹಿಸಿದ್ದಾರೆ. ಇತ್ತ ಛತ್ತೀಸ್‌ಗಢದಲ್ಲಿ ಮಾಜಿ ಕೇಂದ್ರ ಸಚಿವ ವಿಷ್ಣುದೇವ್ ಸಾಯ್‌ರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ದೆಹಲಿ ರಾಜಕೀಯದಲ್ಲಿ ಆದೇಶ್ ಗುಪ್ತಾ ಹೆಸರು ಅಷ್ಟು ಫೇಮಸ್ ಅಲ್ಲ. ಅವರು ನಾರ್ಥ್ ಎಂಸಿಡಿಯ ಮೇಯರ್ ಆಗಿದ್ದವರು ಹಾಗೂ ಪ್ರಸ್ತುತ ಪಟೇಲ್‌ ನಗರದ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Adesh Kumar Gupta replaces Manoj Tiwari as Delhi BJP President pic.twitter.com/Ek6oVGYhak

— ANI (@ANI)

ಟ್ಯೂಷನ್ ಮಾಸ್ಟರ್ ಆಗಿದ್ರು ಆದೇಶ್ ಗುಪ್ತಾ?

ಒಂದು ಸಮಯದಲ್ಲಿ ಮನೆ ನಿರ್ವಹಣೆಗೆ ಟ್ಯೂಷನ್ ಹೇಳಿಕೊಡುತ್ತಿದ್ದ ವ್ಯಕ್ತಿಗೆ ಪಕ್ಷವು ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನ ವಹಿಸಿದೆ. ಇಲ್ಲಿನ ವ್ಯಾಪಾರಿ ವರ್ಗವನ್ನು ಓಲೈಸುವ ಸಲುವಾಗಿ ಗುಪ್ತಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದೆ. ಮೂಲತಃ ಉತ್ತರ ಪ್ರದೇಶದವರಾದ ಆದೇಶ್‌ ಗುಪ್ತಾ ಛತ್ರಪತಿ ಸಾಹೂಜಿ ಮಾರಾಹಜ್ ವಿಶ್ವವಿದ್ಯಾನಿಲಯ ಕಾನ್ಪುರದಿಂದ 1991ರಲ್ಲಿ ಬಿಎಸ್‌ಸಿ ಪದವಿ ಗಳಿಸಿದ್ದಾರೆ. ಅವರೊಬ್ಬ ರಾಜಕಾರಣಿ. ಇನ್ನು ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರು ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣವಿಲ್ಲ ಎಂದಿದ್ದರು. 

ಕ್ಷಮೆ ಯಾಚಿಸಿದ ತಿವಾರಿ

ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕಳಗಿಳಿಸಿದ ಬಳಿಕ ಮನೋಜ್ ತಿವಾರಿ ಟ್ವೀಟ್ ಒಂದನ್ನು ಮಾಡಿದ್ದು, 3.6ವರ್ಷದಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷನಾಗಿದ್ದ ವೇಳೆ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ದೆಹಲಿಗರು ನೀಡಿದ ಸಹಕಾರಕ್ಕೆ ನಾನು ಚಿರಋಣಿ. ತಿಳಿಯದೆ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಎಂದಿದ್ದಾರೆ. ಅಲ್ಲದೇ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಆದೇಶ್ ಗುಪ್ತಾರಿಗೆ ಶುಭಾಶಯ ಕೋರಿದ್ದಾರೆ.

भाजपा प्रदेश अध्यक्ष के रूप में इस 3.6 साल के कार्यकाल में जो प्यार और सहयोग मिला उसके लिये सभी कार्यकर्ता,पदाधिकारी,व दिल्ली वासियों का सदैव आभारी रहूँगा.. जाने अनजाने कोई त्रुटि हुई हो तो क्षमा करना..
नये प्रदेश अध्यक्ष भाई जी को असंख्य बधाइयाँ 🙏💐 pic.twitter.com/nT8pyDCntt

— Manoj Tiwari (@ManojTiwariMP)

ದೆಹಲಿ ಚುನಾವಣೆಯಲ್ಲಾದ ಸೋಲೇ ಮನೋಜ್ ತಿವಾರಿಯನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪ್ರಮುಖ ಕಾರಣವೆಂಬ ಮಾತುಗಳು ಕೇಳಿ ಬಂದಿವೆ. 

 

click me!