ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ಮತದಾರರನ್ನು ಶಾಸಕ ಅರವಿಂದ ಬೆಲ್ಲದ ಅವರು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆರೋಪ ಮಾಡಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಡಿ.5) : 2023 ರ ವಿಧಾನಸಭಾ ಚುಣಾವಣೆಗೆ ಕೇವಲ ನಾಲ್ಕು ತಿಂಗಳು ಇರುವಾಗಲೆ ಸದ್ಯ ಮತದಾರರ ಪಟ್ಟಿಯಲ್ಲಿ ಮತದಾರರ ಹೇಸರು ಡಿಲಿಟ್ ಮಾಡಿಸಲಾಗುತ್ತಿದೆ. ಧಾರವಾಡ ಪಶ್ಚಿಮ ಕ್ಷೆತ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಕ್ಷೆತ್ರದ ವಾರ್ಡ ನಂಬರ್ 33 ರಲ್ಲಿ 500 ಮತದಾರರ ಹೇಸರು ಡಿಲಿಟ್ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡಲು ಶಾಸಕರೇ ಕಾರಣ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆರೋಪಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೆತ್ರ 74ರ ಕಾಂಗ್ರೆಸ್ ಟಿಕೆಟ್ ಪ್ರಭಲ ಆಕಾಂಕ್ಷಿ ದೀಪಕ್ ಚಿಂಚೋರೆ ಮಾಧ್ಯಮಗಳೊಂದಿಗೆ ಮಾತನಾಡಿ, ಶಾಸಕ ಅರವಿಂದ ಬೆಲ್ಲದ ಅವರಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕೆ ಅವರು ಮತದಾರರ ಪಟ್ಟಿಯಲ್ಲಿ ಮತಗಳ ಹೇಸರನ್ನ ಡಿಲಿಟ್ ಮಾಡಿಸುತ್ತಿದ್ದಾರೆ ಎಂದು ಗಂಬೀರ ಆರೋಪವನ್ನ ಮಾಡಿದರು. ಮಹಾನಗರ ಪಾಲಿಕೆ ಮಾಜಿ ಆಯುಕ್ತರ ಚನ್ನಬಸವರಾಜ ಅವರು ಸಂಗೋಳ್ಳಿ ರಾಯಣ್ಣನಗರದ ನಿವಾಸಿಯಾಗಿದದ್ದರು. ಈಗ ಮಹಾನಗರ ಪಾಲಿಕೆ ಚುನಾವಣೆ ವೇಳೆಯಲ್ಲಿ ಅವರ ಹೆಸರನ್ನು ಕೂಡ ಡಿಲೀಟ್ ಮಾಡಲಾಗಿದೆ. ಶಾಸಕ ಅರವಿಂದ ಬೆಲ್ಲದ ಅವರು ಸ್ವತಃ 33ನೇ ವಾರ್ಡನಲ್ಲಿ 1,100 ಮತಗಳು ಟಿಲಿಟ್ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಮತದಾರರ ಹೆಸರನ್ನು ಶಾಸಕ ಅರವಿಂದ ಅವರೆ ಡಿಲಿಟ್ ಮಾಡಿಸಿದ್ದಾರೆ ಎಂದು ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲೂ ವೋಟರ್‌ಗೇಟ್ ಹಗರಣ; 1.40 ಲಕ್ಷ ಮತದಾರರು ಡಿಲೀಟ್!
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೆತ್ರದಲ್ಲಿ ಕಾಂಗ್ರೆಸ್‌ನ 15,000 ಮತಗಳು ಡಿಲೀಟ್ ಆಗಿವೆ. ಶಾಸಕ ಅರವಿಂದ ಬೆಲ್ಲದ ಅವರಿಗೆ ಸೋಲಿನ ಬೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಡಿಲಿಟ್ ಮಾಡಿಸುತ್ತಿದ್ದಾರೆ. ಉಳಿದಂತೆ ಮಹಾನಗರ ಪಾಲಿಕೆಯ 10, 23, 24, 31, 30, 33ನೇ ವಾರ್ಡಗಳಲ್ಲಿ ಮತಗಳು ಡಿಲಿಟ್ ಆಗುತ್ತಿವೆ ಎಂದು ಹೇಳಿದರು.
ಮತದಾರರ ಸೇರ್ಪಡೆಗೆ ಸಮಯ ಕೊಡಿ:
ಹುಬ್ಬಳ್ಳಿ, ಧಾರವಾಡ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಇಬ್ಬರು ಕೂಡ ಬಿಜೆಪಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಗಟ್ಟಿಯಾಗಿರುವ ವಾರ್ಡಗಳಲ್ಲಿ ಮತ ಡಿಲಿಟ್ ಆಗುತ್ತಿವೆ. ಜಿಲ್ಲಾಧಿಕಾರಿಗಳು ಬಿಜೆಪಿ ಪರ ತುಂಬಾ ನಿಷ್ಠೆಯಿಂದ ಇದ್ದಾರೆ. ವಾರ್ಡ 33 ರ ಇಮ್ರಾನ್ ಯಲಿಗಾರ ಅವರು ವಾರ್ಡ ಸದಸ್ಯರಾಗಿದ್ದಾರೆ. ಅಲ್ಪಸಂಖ್ಯಾತರು, ಎಸ್ ಸಿ ಮತ್ತು ಎಸ್ ಟಿ ಮತಗಳು ಡಿಲಿಟ್ ಆಗುತ್ತಿವೆ. ಮತ ಸೇರ್ಪಡೆಗೆ ಸಮಯವಕಾಶ ಬೇಕು ಎಂದು ಕೇಳಿದ ದೀಪಕ್ ಚಿಂಚೋರೆ ಅವರು ಕಾಂಗ್ರೆಸ್ ವಾರ್ಡ ಸದಸ್ಯರಿರುವ ವಾರ್ಡನಲ್ಲಿ ಮತಗಳು ಡಿಲಿಟ್ ಆಗುತ್ತಿದೆ. ಡಿಸೆಂಬರ್ 8 ಕ್ಕೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಕೊನೆಯ ಅವಕಾಶ ನೀಡಿದ ಜಿಲ್ಲಾಧಿಕಾರಿಗಳ ಬಳಿ, ಮತದಾರರ ಪಟ್ಟಿ ಸೇರ್ಪಡೆಗೆ ಇನ್ನು 15 ದಿನ ಸಮಯವಕಾಶ ಕೊಡಬೇಕು ಎಂದು ದೀಪಕ್ ಚಿಂಚೋರೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.