5 ಸಾವಿರ ಮೆ.ವ್ಯಾ. ವಿದ್ಯುತ್‌ ಉತ್ಪಾದನೆಗೆ ಯೋಜನೆ: ಡಿಕೆಶಿ

By Kannadaprabha NewsFirst Published Aug 27, 2023, 2:30 AM IST
Highlights

ಗಾಳಿ ಮತ್ತು ಸೌರ ವಿದ್ಯುತ್‌ ಉತ್ಪಾದನೆ ಹಾಗೂ ಅದರ ಶೇಖರಣೆ ಸುಲಭದ ಕೆಲಸವಲ್ಲ. ಈ ಕೆಲಸಕ್ಕೆ ನೀವು ಮುಂದಾಗಿರುವುದು ಅತ್ಯುತ್ತಮ ನಿರ್ಧಾರ. ನಿಮಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ನಿಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಚಾಮರಾಜನಗರ(ಆ.27):  ನಮ್ಮ ಸರ್ಕಾರ ಇನ್ನು 5,000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಕಾರ್ಯಕ್ರಮ ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಚಾಮರಾಜನಗರ ಬಳಿಯ ಬದನಗುಪ್ಪೆ ಮತ್ತು ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಟೆಕ್ರೇನ್‌ ಬ್ಯಾಟರಿ ಉತ್ಪಾದನಾ ಘಟಕ ಭೂಮಿಪೂಜೆ ನೆರವೇರಿಸಿ ಶನಿವಾರ ಮಾತನಾಡಿ, ನಾನು ಇಂಧನ ಸಚಿವನಾದಾಗ ಈ ಇಲಾಖೆ ಜವಾಬ್ದಾರಿ ಯಾಕೆ ತೆಗೆದುಕೊಂಡಿದ್ದೀಯಾ? ಇಲಾಖೆಯಲ್ಲಿ ಲೋಡ್‌ ಶೆಡ್ಡಿಂಗ್‌ ಸಮಸ್ಯೆ ಇದೆ. ಈ ಇಲಾಖೆ ಬೇಡ ಎಂದು ಸಲಹೆ ನೀಡಿದ್ದರು. ಆದರೆ ಯಾವುದು ಮಾಡಲು ಅಸಾಧ್ಯವೋ ಅದನ್ನು ಸಾ​ಧಿಸಿ ತೋರಿಸುವುದು ನನ್ನ ಹಂಬಲ ಹಾಗೂ ಛಲ. ನಾನು ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ರಾಜ್ಯದಲ್ಲಿ 10,000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ನಾನು ಅ​ಧಿಕಾರ ಬಿಟ್ಟಾಗ ಇದರ ಪ್ರಮಾಣ 23,000 ಮೆಗಾ ವ್ಯಾಟ್‌ಗೆ ಏರಿಕೆಯಾಗಿತ್ತು. ಇದನ್ನು ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರ ಇನ್ನೂ 5000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಕಾರ್ಯಕ್ರಮ ರೂಪಿಸಿದೆ ಎಂದರು.

ಕಾವೇರಿ ಗಲಭೆ ತಡೆಗೆ ನಿಯೋಜನೆಗೊಂಡಿದ್ದ ಮುಖ್ಯಪೇದೆ ಹೃದಯಾಘಾತದಿಂದ ಸಾವು!

ಟೆಕ್ರೇನ್‌ ಬ್ಯಾಟರಿ ಕಂಪನಿಯವರು ಬಹಳ ದೊಡ್ಡ ಸಾಹಸಕ್ಕೆ ಕೈಹಾಕಿದ್ದು, ಚಾಮರಾಜನಗರದಲ್ಲಿ ಈ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದಕ್ಕೆ ಅವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಗಾಳಿ ಮತ್ತು ಸೌರ ವಿದ್ಯುತ್‌ ಉತ್ಪಾದನೆ ಹಾಗೂ ಅದರ ಶೇಖರಣೆ ಸುಲಭದ ಕೆಲಸವಲ್ಲ. ಈ ಕೆಲಸಕ್ಕೆ ನೀವು ಮುಂದಾಗಿರುವುದು ಅತ್ಯುತ್ತಮ ನಿರ್ಧಾರ. ನಿಮಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ನಿಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ಎಂದರು.

click me!