ಕೆ.ಎಸ್.ಈಶ್ಚರಪ್ಪನವರು ಹಿರಿಯರು ಅವರ ಜತೆ ಹೈಕಮಾಂಡ್ ಮಾತನಾಡುತ್ತದೆ. ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ನಿರ್ಧಾರದಿಂದ ಪಕ್ಷಕ್ಕೆ ಮಾರಕವಾಗಬಾರದು, ನರೇಂದ್ರ ಮೋದಿ ಯವರು ಮತ್ತೇ ಪ್ರಧಾನಮಂತ್ರಿ ಯಾಗಲು ಒಂದೊಂದು ಸೀಟು ಅಮೂಲ್ಯವಾದದ್ದು, ನಾವೆಲ್ಲ ಒಂದಾಗಿ ಕೆಲಸ ಮಾಡ ಬೇಕು ಎಂದ ಮಾಜಿ ಸಚಿವ ಸಿ.ಟಿ ರವಿ
ಚಿಕ್ಕಮಗಳೂರು(ಮಾ.17): ಪಕ್ಷದ ವಿರುದ್ಧ ಬಂಡೆದ್ದಿರುವ ಕೆ.ಎಸ್ ಈಶ್ವರಪ್ಪರನ್ನು ಭೇಟಿ ಮಾಡಿ ನಿಮ್ಮ ನಿರ್ಣಯ ಪಕ್ಷ ಹಾಗೂ ರಾಷ್ಟ್ರದ ಹಿತಕ್ಕೆ ಮಾರಕವಾಗಿರಬಾರದು ಎಂದು ವಿನಂತಿ ಮಾಡಿದ್ದೇನೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ಚರಪ್ಪನವರು ಹಿರಿಯರು ಅವರ ಜತೆ ಹೈಕಮಾಂಡ್ ಮಾತನಾಡುತ್ತದೆ. ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ನಿರ್ಧಾರದಿಂದ ಪಕ್ಷಕ್ಕೆ ಮಾರಕವಾಗಬಾರದು, ನರೇಂದ್ರ ಮೋದಿ ಯವರು ಮತ್ತೇ ಪ್ರಧಾನಮಂತ್ರಿ ಯಾಗಲು ಒಂದೊಂದು ಸೀಟು ಅಮೂಲ್ಯವಾದದ್ದು, ನಾವೆಲ್ಲ ಒಂದಾಗಿ ಕೆಲಸ ಮಾಡ ಬೇಕು ಎಂದರು.
ನಿಮ್ಮ ನಿರ್ಣಯ ಪಕ್ಷಕ್ಕೆ ಮತ್ತು ದೇಶಕ್ಕೆ ಹಿತವಾಗಿರಬೇಕು. ಅವರ ನಿರ್ಧಾರವನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ವರಿಷ್ಟರು ಅವರ ಮನವೊಲಿಸುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಅಭ್ಯರ್ಥಿ ಘೋಷಣೆಯಾಗಿದೆ. ನಾನೇ ಅವರು, ಅವರೇ ನಾನು ಎಂದು ಕೆಲಸ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದರು.
undefined
ಕಲಬುರಗಿ: ಖರ್ಗೆ ಹೋಮ್ ಪಿಚ್‌ನಲ್ಲಿ ಮೋದಿ ಭರ್ಜರಿ ಬ್ಯಾಟಿಂಗ್
ಯಾರು ಸ್ವಾರ್ಥ ರಾಜಕಾರಣ ಮಾಡುತ್ತಾರೆ ಅವರು ಪಕ್ಷವನ್ನು ಬಲಿ ಕೊಡುವ ಕೆಲಸ ಮಾಡುತ್ತಾರೆ. ನಾನು ಪಕ್ಷದ ಹಿತಕ್ಕಾಗಿ ರಾಜಕಾರಣ ಮಾಡಿದ್ದೇನೆ. ನಮಗೆ ಅವಕಾಶ ಸಿಕ್ಕಾಗ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆ ಎಂದರು.
ನಾನು ಸಿದ್ದಾಂತ ಬದ್ದ ರಾಜಕಾರಣ ಮಾಡಿದ್ದೇನೆ. ಕೆಲವರಿಗೆ ಅದು ದೌರ್ಬಲ್ಯ ಅನಿಸಿರಬಹುದು, ನಾನು ಏನೇ ಮಾಡಿ ದರೂ ಪಕ್ಷ ಬಿಡಲ್ಲ. ಕೆಲವು ಸಲ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಅಗ್ನಿ ಪರೀಕ್ಷೆ ಎದುರಿಸಿದಾಗ ನಮ್ಮ ಪಕ್ಷ ನಿಷ್ಟೆ ಸಾಭೀತಾಗುತ್ತದೆ. ಯಾರಿಗೆ ಟಿಕೆಟ್ ನೀಡಿದರೂ ಮೋದಿ ಮುಖ ನೋಡಿ ಕೆಲಸ ಮಾಡುತ್ತೇವೆ. ನಾನು ಎಂದು ಪಕ್ಷ ದ್ರೋಹ ಮಾಡಿಲ್ಲ. ಮೋದಿಯೇ ನಮ್ಮ ಅಭ್ಯರ್ಥಿ ಎಂದು ಕೆಲಸ ಮಾಡುತ್ತೇವೆ ಎಂದರು.
ನಿಮಗೆ ಪಕ್ಷದ ನಡೆಯಿಂದ ಬೇಸರವಿಲ್ಲವೇ ಎಂಬ ಪ್ರಶ್ನೆಗೆ ನಾನಂತೂ ಬಿಜೆಪಿಗೆ ದ್ರೋಹ ಬಗೆದಿಲ್ಲ, ಪಕ್ಷ ನಿಷ್ಠೆ ಪರಿಶ್ರಮದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಪಡೆದಿದ್ದೆ ಈಗಲೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದ ಅವರು, ನನ್ನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಟಿಕೆಟ್ ದೊರೆಯದಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.