ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ

By Suvarna NewsFirst Published Dec 4, 2022, 9:24 PM IST
Highlights

ಸಿದ್ರಾಮುಲ್ಲಾಖಾನ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಏಕೆ ಹೀಗೆ ಮೈ ಉರಿಯುತ್ತಿದೆ. ಹೀಗೆ ಉರಿಯುತ್ತೆ ಎಂದು ಗೊತ್ತಾಗಿದ್ದರೆ 10 ವರ್ಷದ ಮೊದಲೇ ಹೇಳುತ್ತಿದ್ದೆ ಎಂದು ಶಾಸಕ ಸಿ.ಟಿ.ರವಿ ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.4): ಸಿದ್ರಾಮುಲ್ಲಾಖಾನ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಏಕೆ ಹೀಗೆ ಮೈ ಉರಿಯುತ್ತಿದೆ. ಹೀಗೆ ಉರಿಯುತ್ತೆ ಎಂದು ಗೊತ್ತಾಗಿದ್ದರೆ 10 ವರ್ಷದ ಮೊದಲೇ ಹೇಳುತ್ತಿದ್ದೆ ಎಂದು ಶಾಸಕ ಸಿ.ಟಿ.ರವಿ ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನ ಸಮರ್ಥಿಸಿಕೊಂಡು ಮತ್ತೆ ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ...? ಅದು ಬೈಗುಳ ಅಲ್ಲಾ. ನಿಮಗೆ ಉರಿ ಹತ್ತಿದ್ಯಾಕೆ ಎಂದು ಕಾಂಗ್ರೆಸ್ಸಿಗರಿಗೆ ಕಿಚ್ಚಾಯಿಸಿದ್ದಾರೆ. ನೀವು ದೇಶದ ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದೆಲ್ಲಾ ಕರೆದ್ರಿ. ಸಿದ್ರಾಮುಲ್ಲಾಖಾನ್ ಎಂಬ ಒಂದೇ ಒಂದು ಹೇಳಿಕೆಗೆ ಉರಿ ಹತ್ತಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದಿತ್ತು. ನಾನು ಹಾಗೇ ಭಾವಿಸುತ್ತಾರೆ ಎಂದು ತಿಳಿದಿದ್ದೆ. ಯಡಿಯೂರಪ್ಪನವರಿಗೆ ರಾಜಾಹುಲಿ ಅಂತಾರೆ. ಸಿದ್ದರಾಮಯ್ಯನವರಿಗೆ ಹುಲಿಯಾ ಅಂತಾರೆ. ಹಾಗೆ ಇದು ಕೂಡ ಒಂದು ಬಿರುದು ಎಂದರು. ನಾನು ಹಿಂದೂಗಳಿಗೆ ಅನ್ಯಾಯ ಮಾಡಿದ್ದೆ. ದತ್ತಪೀಠಕ್ಕೆ ಅನ್ಯಾಯ ಮಾಡಿದ್ದೆ. ಟಿಪ್ಪು ಜಯಂತಿ ಪರ ಇದ್ದೆ ಎಂದು ಜನ ಕೊಟ್ಟ ಬಿರುದು ಎಂದು ಭಾವಿಸುತ್ತಾರೆ ಎಂದು ನಾನು ತಿಳಿದಿದ್ದೆ ಎಂದರು. 

ಕಾಂಗ್ರೆಸ್ ನಾಯಕರಿಗೆ  ಸವಾಲು: 
ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡುವ ಅವಕಾಶವಿತ್ತು ಏಕೆ ಮಾಡಲಿಲ್ಲ ನ್ಯಾಯಾ ಎತ್ತಿ ಹಿಡಿದಿದ್ದರೂ ಸಾಕಾಗಿತ್ತು ಹಾಗಾಗಿ ಚಿಕ್ಕಮಗಳೂರಿಗೆ ನೀವು ಬರುವ ಮುನ್ನ ಈ ಪೃಶ್ನೆಗೆ ಉತ್ತರಿಸಿ ನಂತರ ಬನ್ನಿ ಎಂದು ಸಿ.ಟಿ ರವಿ ಸವಾಲು ಹಾಕಿದ್ದಾರೆ. ಚಿಕ್ಕಮಗಳೂರಿಗೆ ಯಾರು ಬೇಕಾದರೂ ಬರಬಹುದು ಬರುವ ಮುನ್ನ ಇಲ್ಲಿಯ ಜನರಿಗೆ ಏಕೆ ಅನ್ಯಾಯಾ ಮಾಡಿದ್ದೇವೆಂದು ಈ ಪ್ರಶ್ನೆಗೆ ಉತ್ತರ ಕೊಡಬೇಕು. ಮುಲ್ಲಾ ಮೂಲಕ ಪೂಜೆಯಾಬೇಕೆಂದು ಅಂದು ನೀವು ಆದೇಶ ಮಾಡಿದ್ದೀರಿ ಹಾಗಾಗಿ ನಿಮಗೆ ಸಿದ್ರಾಮುಲ್ಲಾಖಾನ್ ಎಂದು ಇಟ್ಟೆ. 

ನಾವು ಅರ್ಚಕರ ಮೂಲಕ ಪೂಜೆ ಎಂದು ಹೇಳಿ ನಾನು ಹುಟ್ಟಿರುವ ಧರ್ಮ ಮತ್ತು ದತ್ತಪೀಠದ ನ್ಯಾಯಾ ಎತ್ತಿ ಹಿಡಿದಿದ್ದೇವೆ. ಇದೊಂದು ವೈಚಾರಿಕ ಚರ್ಚೆ , ಇಂಟಾಲರೆನ್ಸ್ ಅನ್ನೋದು ಕಾಂಗ್ರೆಸ್‌ನ ಮನಸ್ಥಿತಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಅವರು ಯಾರಿಗೆ ಏನುಬೇಕಾದರೂ ಅನ್ನಬಹದು ಇನ್ನೊಬ್ಬರು ಅವರ ಬಗ್ಗೆ ಒಂದು ಶಬ್ದವೂ ಮಾತನಾಡುವ ಹಾಗಿಲ್ಲ ಇದು ಇಂಟಾಲರೆನ್ಸ್ ಎಂದರು. ನಾವು ಯಾವ ವಿಷಯದಲ್ಲೂ ಕೊಟ್ಟ ಮಾತನ್ನು ಕದ್ದಿಲ್ಲ ಶ್ರೀ ಗುರು ದತ್ತಾತ್ರೇಯ ಪೀಠಕ್ಕೆ ಅರ್ಚಕರ ನೇಮಕ ಮಾಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಕಳೆದ ನಾಲ್ಕು ದಶಕಗಳಿಂದ ದತ್ತಪೀಠ ಮುಕ್ತಿಯ ಹೋರಾಟದ ಭಾಗವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಒಂದೆಡೆ ನ್ಯಾಯಾಲಯ, ಇನ್ನೊಂದೆಡೆ ಜನಜಾಗೃತಿ ಮೂಡಿಸುತ್ತಾ ಈ ಹೋರಾಟ ಗಟ್ಟಿಗೊಳಿಸಿದ್ದೀವಿ. 

ದತ್ತಾತ್ರೇಯ ದೇವರು ಮುಜುರಾಯಿ ಇಲಾಖೆ ಅಧೀನದಲ್ಲಿರುವ ಒಂದು ಸಂಸ್ಥೆ  ಎಂದು ಅಂದೇ ನಾವು ಏನು ಮಾತನಾಡಿದ್ದವೋ ಅದಕ್ಕೆ ಬದ್ದರಾಗಿ ಅವಕಾಶ ಸಿಕ್ಕಿದಾಗ ನ್ಯಾಯಾಲಯದ ಆದೇಶವನ್ನು ಯತಾವತ್ತಾಗಿ ಪಾಲಿಸುವ ರೀತಿ ಕ್ಯಾಬಿನೆಟ್ ಸಬ್ ಕಮೀಟಿ ಮಾಡಿ ಅದರ ಶಿರಸ್ಸಿನ ಮೇಲೆ ಸರ್ಕಾರ ನಿರ್ಣಯಿಸಿ ಅರ್ಚಕರ ನೇಮಕ ಮಾಡಿ ನ್ಯಾಯಕೊಟ್ಟಿದ್ದೇವೆ . ಮೊದಲ ಹಂತದಲ್ಲಿ ಅರ್ಚಕರ ನೇಮಕವಾಗಿದೆ. ದರ್ಗಾ ಬೇರೆ ಪೀಠ ಬೇರೆ ಎನ್ನುವ ವಾಸ್ತವಿಕ ಸತ್ಯವನ್ನು ನ್ಯಾಲಯದ ಮುಂದಿಡುವ ಎರಡನೆ ಹಂತದ ಹೋರಾಟ ರಂಭಿಸಲಾಗುತ್ತದೆ ಎಂದರು.ಯಾವ ಮುಸಲ್ಮಾನರ ಪೂಜಾ ಪದ್ದತಿ ಬಗ್ಗೆ ನನಮ್ಮ ಆಕ್ಷೇಪವಿಲ್ಲ ಅವರ ದರ್ಗದಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ ಪೀಠ ವನ್ನು ಕಬಳಿಸಿ ಕೂತಿರುವುದು ಅಕ್ಷಮ್ಯ ಅಪರಾಧ ಹೋರಾಟ ಮುಂದುವರೆಸುತ್ತೇವೆ  ಎಂದರು.

ಸಿದ್ರಾಮುಲ್ಲಾ ಖಾನ್ ಹೇಳಿಕೆ: ಸಿ.ಟಿ ರವಿ ನಿವಾಸದ ಬಳಿ ಕಾಂಗ್ರೆಸ್‌ ಪ್ರೊಟೆಸ್ಟ್

ಗೋಡೆ ಬರಹ  ಆ  ಮನಸ್ಥಿತಿ ಜನ ಇದ್ದಾರೆ:
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಜಾಯ್ನ್ ಸಿ.ಎಫ್.ಐ. ಎಂಬ ಬರಹಕ್ಕೆ  ಆಕ್ರೋಶ ಹೊರಹಾಕಿದ್ದಾರೆ.ಪಿ.ಎಫ್.ಐ, ಸಿ.ಎಫ್.ಐ ಬ್ಯಾನ್ ಆಗಿದ್ದರೂ ಕೂಡ ಆ ಮನಸ್ಥಿತಿಯ ಜನ ಇನ್ನೂ ಇದ್ದಾರೆ. ಇದು ಇಂದು-ನಿನ್ನೆಯದ್ದಲ್ಲ. ಏಳನೇ ಶತಮಾನದಿಂದಲೂ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂಬ ಮನೋಭಾವದವರು ಹೀಗೆ ಮಾಡುತ್ತಾರೆ. ಇದು ಗಜಾವಹಿಂದ್ ಹೆಸರಲ್ಲಿ 7ನೇ ಶತಮಾನದಲ್ಲಿ ಶುರುವಾದದ್ದು ಎಂದರು. ಆ ಮನಸ್ಥಿತಿಯ ಜನ ಇದ್ದಾರೆ ಎಂಬ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈಹಾಕಿದ್ದು. ಆ ಮನಸ್ಥಿತಿಯ ಜನ ಇರುವವರೆಗೂ ಈ ರೀತಿ ಮಾಡುತ್ತಲೇ ಇರುತ್ತಾರೆ. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದರೂ ಅವರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತಹಾಕಿದರೆ ಅವರು ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮುಲ್ಲಾ ಖಾನ್ ಹೇಳಿಕೆಗೆ ಸಿ ಟಿ ರವಿ ಮನೆಗೆ ಕಾಂಗ್ರೆಸ್ ಮುತ್ತಿಗೆ, ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡ

ಎಂ ಬಿ ಪಾಟೀಲ್, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ: 
ಸಿದ್ರಾಮುಲ್ಲಾಖಾನ್ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಸಿ.ಟಿ.ರವಿ ಇದನ್ನ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂಬ ಹೇಳಿಕೆಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ಅವರೇನು ಬೆದರಿಕೆ ಹಾಕ್ತಾರಾ. ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೇಗಾರ ಮನೆತನದವನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ಒಂದು ವೋಟು. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು. ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. ನಿಮ್ಮೂರಿಗೆ ಬರ್ತೀನಿ. ನಾನು ಏನೂ ಹೇಳಬೇಕು ಅಂದುಕೊಂಡಿದ್ದೇನೋ ಅದನ್ನ ನಿಮ್ಮೂರಿನಲ್ಲೇ ಹೇಳ್ತೀನಿ. ನಿಮ್ಮ ಮುಖದ ಎದುರೇ ಹೇಳ್ತೀನಿ. ನಿಮ್ಮಷ್ಟು ಶ್ರೀಮಂತಿಕೆ ನನ್ನ ಬಳಿ ಇಲ್ಲ ಅಂತ ನನಗೆ ಗೊತ್ತು. ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನ ಜನರ ಮೇಲೆ ತೋರಿಸಬೇಡಿ. ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯಲ್ಲ ಎಂದಿದ್ದಾರೆ. ಕರ್ನಾಟಕ ಯಾರ ಅಪ್ಪನ ಸ್ವತ್ತು ಅಲ್ಲ. ಯಾರಾದರೂ ಫಾದರ್ ಮನೆ ಪ್ರಾಪರ್ಟಿ ಅಂತ ಅನ್ಕೊಂಡಿದ್ರೆ, ಯಾರ ಫಾದರ್ ಮನೆ ಪ್ರಾಪರ್ಟಿಯೂ ಅಲ್ಲ ಅಂತ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ.

click me!